ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಮೈಸೂರು:ಮೈಸೂರು ಜಿಲ್ಲೆಯ ಕೃಷ್ಣರಾಜನಗರದ ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠದ ಪೀಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಶಂಕರ ಭಾರತೀ ಮಹಾಸ್ವಾಮಿಗಳು ಜುಲೈ 25 ಭಾನುವಾರದಂದು ಕೃಷ್ಣರಾಜನಗರ ತಾಲೂಕು ಸಾಲಿಗ್ರಾಮ ಹೋಬಳಿ ಹೆಬ್ಸೂರು ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ಜಪ್ಯೇಶ್ವರಕ್ಷೇತ್ರದಲ್ಲಿ (ಜಪದಕಟ್ಟೆಯಲ್ಲಿ) ವ್ಯಾಸಪೂಜೆಯೊಂದಿಗೆ ಚಾತುರ್ಮಾಸ್ಯವ್ರತಾನುಷ್ಠಾನದ ಸಂಕಲ್ಪವನ್ನು ಕೈಗೊಳ್ಳಲಿದ್ದಾರೆ.
ಸೆ.23ರಂದು ಸೀಮೋಲ್ಲಂಘನದೊಂದಿಗೆ ಚಾತುರ್ಮಾಸ್ಯವೃತ ಸಮಾಪ್ತಿಗೊಳ್ಳಲಿದೆ. ಜಪದಕಟ್ಟೆಯಲ್ಲಿ ಪ್ರತಿಷ್ಠಾಪನೆಗೊಂಡ ಶ್ರೀ ಜಪ್ಯೇಶ್ವರ ಹಾಗೂ ಇತರ ದೇವತೆಗಳ ಮಂಡಲಪೂಜಾಮಹೋತ್ಸವವು ಸೆ.7ರಂದು ನಡೆಯಲಿದೆ. ಚಾತುರ್ಮಾಸ್ಯದ ಪವಿತ್ರ ಸಂದರ್ಭದಲ್ಲಿ ಹಲವು ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ . ಚಾತುರ್ಮಾಸ್ಯದ ಸಂದರ್ಭದಲ್ಲಿ ಭಕ್ತಾಧಿಗಳ ಅನುಕೂಲಕ್ಕಾಗಿ ಕೃಷ್ಣರಾಜನಗರದಿಂದ ಹಾಗೂ ಹೊಳೆನರಸೀಪುರದಿಂದ ಕೆ.ಎಸ್.ಆರ್.ಟಿ.ಸಿ. ಬಸ್ಸುಗಳು ಜಪದಕಟ್ಟೆ ಮಾರ್ಗವಾಗಿ ಸಂಚರಿಸಲಿದೆ ಎಂದು ಎಸ್.ಎನ್.ಹೇರಂಬರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

0 comments:

Post a Comment