ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
12:21 PM

ತಾರತಮ್ಯ ಸಲ್ಲದು

Posted by ekanasu

ರಾಜ್ಯ - ರಾಷ್ಟ್ರ

ಉಜಿರೆ: ಹಿಂದೂ ದೇವಸ್ಥಾನಗಳ ಸರಕಾರಿಕರಣದ ದುಷ್ಪರಿಣಾಮಗಳ ಬಗ್ಗೆ ಚರ್ಚೆ ಮಾಡಲು ಮತ್ತು ಮುಂದಿನ ಹಂತದ ಹೊರಾಟವನ್ನು ನಿರ್ಧರಿಸಲು ಉಜಿರೆ ಎಲ್ಲಾ ದೇವಸ್ಥಾನಗಳ, ದೈವಸ್ಥಾನಗಳ, ಮಂದಿರಗಳ ಮತ್ತು ಗರೋಡಿಗಳ ಆಡಳಿತ ಮುಕ್ತೇಸರರನ್ನು ಹಾಗೂ ಸರ್ವ ಸದಸ್ಯರ ಸಭೆ ನಡೆಯಿತು. ಸಮಾಲೋಚನಾ ಸಭೆಯ ಅದ್ಯಕ್ಷತೆಯನ್ನು ಶ್ರೀ. ಜನಾರ್ಧನ ಸ್ವಾಮಿ ದೇವಸ್ಥಾನದ ಆಡಳಿತಮೊಕ್ತೇಸರ ವಿಜಯ ರಾಘವ ಪಡ್ವೆಟ್ನಾಯ ಅಧ್ಯಕ್ಷತೆ ವಹಿಸಿದ್ದರು.ಅತಿಥಿಯಾಗಿ ಸಮಿತಿಯ ಮೋಹನ ಗೌಡ ಭಾಗವಹಿಸಿದ್ದರು. ಕರುಣಾಕರ ಅಭ್ಯಂಕರರು ಪ್ರಾಸ್ತಾವಿಕ ಭಾಷಣವನ್ನು ಮಾಡಿದರು.'ದೇವಸ್ಥಾನಗಳು ಹಿಂದೂಗಳ ಶೃದ್ಧಾಕೇಂದ್ರವಾಗಿದ್ದು, ಇಲ್ಲಿ ಭಕ್ತಿ ಭಾವವೇ ಮುಖ್ಯ ಹೊರತು ವಾಣಿಜ್ಯ ಉದ್ದೇಶ ಸರಿಯಲ್ಲ. ಧಾರ್ಮಿಕ ಕೇಂದ್ರಗಳಾದ ದೇವಸ್ಥಾನಗಳು ಧರ್ಮಶೃದ್ಧೆಯನ್ನು ದೃಢಗೊಳಿಸುವ ಕೇಂದ್ರವಾಗಬೇಕು. ಆದರೆ ಸರಕಾರಿಕರಣದಿಂದ ಇದು ಸಾಧ್ಯವಿಲ್ಲ. ಕೇವಲ ದೇವಸ್ಥಾನಗಳಿಗೆ ಮಾತ್ರವಲ್ಲ, ಮಸೀದಿ ಮತ್ತು ಚರ್ಚಗಳಿಗೆ ಸರಕಾರೀಕರಣ ಕಾನೂನಿನ ಎಲ್ಲಾ ಅಂಶಗಳು ಅನ್ವಯಿಸುವಂತೆ ಮಾಡಬೇಕು ಎಂದು ಮೋಹನ ಗೌಡ ಹೇಳಿದರು. ಸರಕಾರೀಕರಣ ಕಾನೂನುಗಳನ್ನು ಕೇವಲ ಹಿಂದೂ ದೇವಸ್ಥಾನಗಳಿಗೆ ಮಾತ್ರ ಅನ್ವಯಿಸಲಾಗಿದೆ. ಆದರೆ ಈ ಕಾನೂನಿನ ವ್ಯಾಪ್ತಿಯಲ್ಲಿ ಯಾವುದೇ ಮಸೀದಿ, ದರ್ಗಾಗಳನ್ನು ಅಥವಾ ಚರ್ಚಗಳನ್ನು ಸೇರಿಸಿಲ್ಲವೆಂದರು. ಇದು ಹಿಂದೂಗಳಿಗೊಂದು ಕಾನೂನು ಮತ್ತು ಅನ್ಯಮತೀಯರಿಗೊಂದು ಕಾನೂನು ಎಂಬುದನ್ನು ತೋರಿಸುತ್ತದೆ. ಈಗಾಗಲೇ ಮಹಾರಾಷ್ಟ್ರ, ಕೇರಳ ಮತ್ತು ಆಂದ್ರ ಪ್ರದೇಶಗಳ ಹಿಂದೂಗಳು ಸರಕಾರಿಕರಣದ ಕಹಿ ಅನುಭವವನ್ನು ಅನುಭವಿಸುತ್ತಿವೆ. ಅಂತಹ ಕಹಿ ಅನುಭವಗಳು ಕರ್ನಾಟಕದಲ್ಲಿ ಮರುಕಳಿಸಬಾರದೆಂದು ನಾವು ಇಂದು ಒಟ್ಟಾಗಿ ಹೋರಾಡಬೇಕಾಗಿದೆ ಎಂದು ವಿಜಯ ರಾಘವ ಪಡ್ವೆಟ್ನಾಯ ಹೇಳಿದರು.
ಎಲ್ಲಾ ದೇವಸ್ಥಾನದ ವಿಶ್ವಸ್ಥರು ಮುಜರಾಯಿ ಇಲಾಖೆಯ ಸಚಿವರ ಬಳಿ ನಿಯೋಗ ಕೊಂಡು ಹೋಗಿ ದೇವಸ್ಥಾನಗಳನ್ನು ಸರಕಾರಿಕರಣ ಮಾಡಬಾರದೆಂದು ಮನವಿ ಸಲಿಸುವುದು ತದನಂತರ ಕ್ರಮೇಣ ಪ್ರತಿಭಟನೆ ಸಲ್ಲಿಸುವುದು, ಕರಪತ್ರ ಮತ್ತು ಫಲಕಗಳ ಮೂಲಕ ಜನಜಾಗೃತಿ ಮಾಡುವುದೇಂದು ಸಬೆಯಲ್ಲಿ ನಿರ್ಧಾರ ತೆಗದುಕೊಳ್ಳಲಾಯಿತು.

ವರದಿ: ಆನಂದ ಗೌಡ

0 comments:

Post a Comment