ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಉಡುಪಿ : ಸಮುದ್ರ ಮತ್ತುನದಿ ತೀರ ಅತಿಕ್ರಮಣದಿಂದ ಹಿನ್ನೀರು ನುಗ್ಗಬಾರದ ಪ್ರದೇಶಗಳಿಗೆ ಬರಪೂರ ಹರಿವು ಕಂಡುಕೊಳ್ಳುತ್ತಿದೆ. ನದಿ ಮತ್ತು ಸಮುದ್ರಗಳ ಅತಿಕ್ರಮಣಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಆದರೂ ನಿರಂತರ ಅತಿಕ್ರಮಣಗಳು ಕಡಿವಾಣವಿಲ್ಲ. ಒಂದೆಡೆ ಸಿಗಡಿ ಕೆರೆ, ಕಿಂಡಿ ಆಣೆಕಟ್ಟು ಹಿನ್ನೀರು ಫಲವತ್ತಾದ ಭೂಮಿಗೆ ಎಳ್ಳುನೀರು ಬಿಡುತ್ತಿದೆ. ಮತ್ತೊಂದೆಡೆ ನದಿ ಪಾತ್ರಗಳ ಒಡಲು ಉಳ್ಳವರ ದುರಾಸೆಗೆ ಮತ್ತಾರದ್ದೂ ಭೂಮಿಯನ್ನು ನುಂಗಿ ನೀರು ಬಿಡುತ್ತಿದೆ. ನದಿಮತ್ತು ಸಮುದ್ರ ತೀರಗಳ ಅತಿಕ್ರಮಣ ನಡೆಯುತ್ತಿರುವುದು ಗೊತ್ತಿದ್ದರೂ ಅಧಿಕಾರಿಗಳು ಸುಮ್ಮನಿದ್ದಾರೆ.
ಕುಂದಾಪುರ ಸಮೀಪದಿಂದ ಅರಬ್ಬೀ ಸಮುದ್ರ ಸೇರುವ ಹಾಲಾಡಿ ಹಳೆಯ ತೀರ ಪ್ರದೇಶದ ಕುದ್ರು ಸಿಗಡಿಕರೆಗೆ ಆಹಾರವಾಗಿದೆ. ಮತ್ತಷ್ಟು ತೀರ ತೆಂಗಿನ ತೋಟವೆದ್ದಿದೆ. ಉಳಿದ ಭಾಗ ಹೆಂಚಿನ ಕಾರ್ಖಾನೆ ತ್ಯಾಜ್ಯದಿಂದ ತುಂಬಿಕೊಳ್ಳುತ್ತಿದೆ. ಸಿಆರ್ಝಡ್ ನಿಮಯದ ಪ್ರಕಾರ ಇವು ನಿರ್ಭಂದಿತ ಪ್ರದೇಶ !

ಎಲ್ಲಿ ಅತಿಕ್ರಮ ನಡೆದಿದೆ : ಕುಂದಾಪುರ ಪುರಸಭೆ ವ್ಯಾಪ್ತಿಯ ಫೆರ್ರಿ ರಸ್ತೆ ಪಕ್ಕದ ಹಾಲಾಡಿ ಹೊಳೆ ಸೇರುವ ಮತ್ತು ಸಮುದ್ರ ಹಿನ್ನೀರು ಪ್ರದೇಶದ ಸುಮಾರು ಎಕ್ರೆ ಗಟ್ಟಲೆ ಪ್ರದೇಶ ಹೆಂಚು ಮತ್ತು ತ್ಯಾಜ್ಯದಿಂದ ಮುಚ್ಚಿಹೋಗಿದೆ. ಮರ ಕತ್ತರಿಸುವ ಮಿಲ್ಲುಗಳು ಮರವನ್ನು 'ಸ್ಟಾಕ್' ಮಾಡುವ ಉದ್ದೇಶದಲ್ಲಿ ನದಿ ತೀರಕ್ಕೆ ದಂಡೆ ಕಟ್ಟಿ ಮಣ್ಣು ತುಂಬುವ ಕೆಲಸ ಮಾಡಲಾಗುತ್ತಿದೆ. ನದಿ ತೀರದ ಪ್ರದೇಶ ಉಳ್ಳವರ ಪಾಲಾಗುತ್ತಿರುವದು ಮತ್ತೊಂದು ವಿಶೇಷ.

ಪೆರ್ರಿ ರಸ್ತೆಯ ಪಕ್ಕದಲ್ಲಿ ಹೊಳೆಗೆ ಕಲ್ಲು ಕಟ್ಟಿ ನದಿ ಪಾತ್ರವನ್ನು ಖುಲ್ಲಾ ಉಳಿಸಲಾಗಿತ್ತು. ಪೆರ್ರಿ ರಸ್ತೆ ಪಾರ್ಕ್ ಸಮೀಪದಲ್ಲಿರುವ ಹೆಂಚಿನ ಕಾರ್ಖಾನೆಯೊಂದು ಸದ್ದುಗದ್ದಲವಿಲ್ಲದೆ ನದಿ ಒಡಲೋಳಗೆ ಕಾರ್ಖಾನೆಯಲ್ಲಿ ಬಾಕಿಯಾದ ಹೆಂಚಿನ ಓಡು ಮತ್ತು ಕೊಜೆ ಮಣ್ಣಿನ ತ್ಯಾಜ್ಯ ಸುರಿದು ಅರ್ಧಕ್ಕರ್ಧ ನದಿ ತೀರ ಮುಚ್ಚಿ ಹಾಕಿದೆ. ತ್ಯಾಜ್ಯ ಸುರಿಯವ ಪ್ರಕ್ರಿಯೆ ನಿರಂತರ ಚಾಲನೆಯಲ್ಲಿದೆ. ನೂರಾರು ಅಡಿಯಷ್ಟು ಜಲಾನಯನ ಪ್ರದೇಶ ಈಗಾಗಲೇ ಎಕ್ಕುಟ್ಟಿಹೋಗಿದೆ. ಪೆರ್ರಿ ರಸ್ತೆಯಲ್ಲಿ ಬರುವ ಮತ್ತೆರಡು ಮರದ ಕಾರ್ಖಾನೆ ಕೂಡಾ ನದಿಯ ಒಡಲನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಪರಿಸರ ನಿವಾಸಿಗಳು ತಿಳಿಸಿದ್ದಾರೆ. ಕರಾವಳಿ ರಕ್ಷಣೆ ಕಾಯಿದೆ ಇಲ್ಲಿ ಮಣ್ಣುತಿನ್ನುತ್ತಿದೆ.


ಕಾಯಿದೆ ಹೀಗೆ ಹೇಳುತ್ತೆ : ನದಿ ಮತ್ತು ಜಲಾನಯನ ಪ್ರದೇಶಗಳನ್ನು ಅತಿಕ್ರಮ ಮಾಡಿಕೊಳ್ಳುವುದು ಅಪರಾಧ ಎಂದು ಕಾಯಿದೆ ಹೇಳುತ್ತೆ. ಸಿಆರ್ಝಡ್ ನಿಯಮದ ಪ್ರಕಾರ ನದಿ ಮತ್ತು ಸಮುದ್ರಕ್ಕೆ ತ್ಯಾಜ್ಯ ವಿಲೇವಾರಿ ನಡೆಯುತಿದ್ದರೆ ಅದನ್ನು ಹಂತ ಹಂತವಾಗಿ ನಿಲ್ಲಿಸಬೇಕೆಂಬ ಕಂಡೀಶನ್ ಹಾಕಿದೆ. ಜಲಾನಯನ ಮತ್ತು ನದಿ ಮುಖಜ ಭೂಮಿ ಅತಿಕ್ರಮ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಸಲಹೆ ಕೂಡಾ ನಡೆದಿದೆ. ಇವೆಲ್ಲಾ ಲೆಕ್ಕ ಪಕ್ಕಕ್ಕಿಟ್ಟು ಅತಿಕ್ರಮಣಗಳು ನಡೆಯುತ್ತಿದೆ. ನಿಯಮ ಪುಸ್ತಕದ ಬದನೆಕಾಯಿ. ಕರಾವಳಿ ರಕ್ಷಣಾ ವಲಯ ಅಧಿಕಾರಿಗಳು ಅತಿಕ್ರಮ ಪ್ರದೇಶದತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ. ನದಿ ಪಾತ್ರಗಳಲ್ಲಿ ಅರಣ್ಯ ಇಲಾಖೆ ವತಿಯಿಂದ ನಾಟಿ ಮಾಡಿದ ಕಾಂಡ್ಲಾ ಗಿಡಗಳನ್ನು ಕಡಿದು ನದಿ ದಡ ತುಂಬವ ಕೆಲಸ ನಡೆಯುತ್ತುದ್ದರೂ ಅಪಸೌವ್ಯಕ್ಕೆ 'ಬ್ರೇಕ್' ಹಾಕಿಲ್ಲ.

ರಿಂಗ್ ರಸ್ತೆಗೂ ತೊಂದರೆ : ಕುಂದಾಪುರ ರಿಂಗ್ ರಸ್ತೆ ನಿರ್ಮಾಣ ಕೂಡಾ ಅತಿಕ್ರಮಿದ ದಾಂಗುಡಿಯಿಂದ ನಿಂತಿದೆ. ಸಂಗಮ ಪರಿಸರದಿಂದ ಪೆರ್ರಿ ರಸ್ತೆಯ ವರೆಗಿನ ರಸ್ತೆ ಪೂರ್ಣ ಗೊಂಡಿದ್ದು, ನದಿ ತೀರ ಅತಿಕ್ರಮಿಸಿದವರು ತಗಾದೆ ತೆಗೆದಿದ್ದರಿಂದ ರಸ್ತೆ ಪೂರ್ಣಗೊಳ್ಳದೆ ಹಾಗೆ ನಿಂತಿದೆ ಎನ್ನಲಾಗುತ್ತಿದೆ. ರಿಂಗ್ ರಸ್ತೆ ನದಿ ತೀರದಲ್ಲಿ ಸಾಗುವುದರಿಂದ ವಾಯುವಿಹಾರಕ್ಕೆ ಅನುಕೂಲತೆ ಕಲ್ಪಸಲಿತ್ತು. ವೀಕ್ಷರಿಗೆ ಸಮುದ್ರ ಮತ್ತು ನದಿ ತೀತರ ಸುಂದರ ಪ್ರದೇಶಗಳು ವೀಕ್ಷಣೆಗೆ ಬರುತ್ತದ್ದವು. ರಿಂಗ್ ರಸ್ತೆ ಕುಂದಾಪುರ ಸೌಂದರ್ಯಕ್ಕೆ ದೃಷ್ಟಿ ಬೊಟ್ಟಿನಂತ ಆಗುವ ಲೆಕ್ಕದಲ್ಲಿತ್ತು. ಆದರೆ ರಸ್ತೆ ನಿರ್ಮಾಣಕ್ಕೆ ತಗಾದೆ ಇರೋದ್ರಿಂದ ನಾಗರಿಕರು ಈ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.

ಎಲ್ಲೆಲ್ಲೂ ನೀರು : ನದಿ ಮತ್ತು ಸಮುದ್ರ ತೀರದ ಒತ್ತುವರಿ ಕಿಂಡಿ ಆಣೆಕಕಟ್ಟು ಸಿಗಡಿ ಕರೆ ನಿರ್ಮಾಣದಿಂದ ಪ್ರಾಕೃತಿಕ ವರ್ತುಲ ಏರು ಪೇರಾಗಿದೆ. ಸಮುದ್ರದ ಇಳಿತ ಮತು ಭರತಕ್ಕೆ ಪ್ರೃಕೃತಿ ಕಂಡುಕೊಂಡ ಹಾದಿಗೆ ಅತಿಕ್ರಮಗಳು ಮುಳುವಾಗುತ್ತಿವೆ. ಹಿನ್ನೀರು ಸರಾಗ ಹರಿದಾಡಲು ಅಡ್ಡಿಯಾದ ನಿಮಿತ್ತ ಕೃಷಿ ಭೂಮಿಗೆ ಉಪ್ಪುನೀರು ನುಗಿ ಫಲವತ್ತಾದ ಭೂಮಿ ಬರಡಾಗುತ್ತಿದೆ. ಈಗಾಗಲೇ ನೂರಾರು ಎಕ್ರ ಕೃಷಿ ಭೂಮಿ ಕೃಷಿ ಯೋಗ್ಯತೆ ಕಳೆದುಕೊಂಡಿದೆ. ಇನ್ನಾದರೂ ಎಚ್ಚೆತ್ತು ಜಿಲ್ಲಾಡಳಿತ ಅತಿಕ್ರಮ್ಕಕ್ಕೆ ಕಡಿವಾಣ ಹಾಕಿದಿದ್ದರೆ ಭೂಮಿ ಬಂಜೆಯಾಗುವ ಅಪಾಯವಿದೆ.

ಶ್ರೀಪತಿ ಹೆಗಡೆ ಹಕ್ಲಾಡಿ

0 comments:

Post a Comment