ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
6:51 PM

ನೀನಿಲ್ಲದೆ

Posted by ekanasu

ಕಾರಿಡಾರ್
ಮೊದಲ ದಿನ ನಿನ್ನನ್ನ ನೋಡಿದಾಗಲೇ ನೀನು ನನಗೆ ತುಂಬಾ ಇಷ್ಟವಾದೆ. ಅದೇನೋ ಅಂತಾರಲ್ಲ ಅಂತ ಅದೇ ಲವ್ ಎಟ್ ಫಸ್ಟ್ ಸೈಟ್ ಇರಬಹುದು. ಮನೆಯವರ ವಿರೋಧದ ನಡುವೆಯೂ ನಿನ್ನನ್ನ ಮನೆಗೆ ಕರೆ ತಂದೆ. ಬರಬರುತ್ತಾ ನನ್ನ ಜೀವವೇ ಆಗಿ ಹೋದೆ, ಅನ್ನುವಷ್ಟರ ಮಟ್ಟಿಗೆ ಕ್ಲೋಸ್ ಆದೆ. ಆದರೆ ಈಗ ಅನ್ನಿಸತ್ತಿದೆ, ನಿನ್ನನ್ನ ಅಷ್ಟರ ಮಟ್ಟಿಗೆ ಇಷ್ಟ ಪಡಬಾರದಿತ್ತು. ಆದರೆ ನಾನೇನು ಮಾಡಲಿ ಮನಸ್ಸು ನನ್ನ ವಶದಲ್ಲಿರಲಿಲ್ಲ.
ಅದರ ಇಫೆಕ್ಟ್ ಈಗ ನನಗಾಗುತ್ತಿದೆ. ನೀನಿಲ್ಲದ ಈ ದಿನಗಳು ನನ್ನ ಬಾಳಿನ ಅತ್ಯಂತ ಕಠಿಣ ದಿನಗಳು. ಯಾವಾಗಲೂ ನನ್ನ ಜೊತೆ ಜೊತೆಗೆ ಇದ್ದ ನಿನ್ನನ್ನ ಮರೆಯಲು ಸಾಧ್ಯವೇ ಆಗುತ್ತಿಲ್ಲ.
ನನ್ನ ಸುಖ, ದುಃಖಗಳಲ್ಲಿ ಪಾಲುದಾರನಾಗಿದ್ದ ನೀನು ಈಗ ನನ್ನೊಂದಿಗಿಲ್ಲ. ನೀನಿಲ್ಲದ ಒಂದೊಂದು ನಿಮಿಷ ಕೂಡ ಒಂದೊಂದು ಯುಗದಂತೆ ಭಾಸವಾಗುತ್ತಿದೆ. ಮೊನ್ನೆ ನಾನು ಅಲ್ಲಿಗೆ ಹೋಗಲೇಬಾರದಿತ್ತು. ಅದರಲ್ಲೂ ನೀನು ನನ್ನೊಂದಿಗಿರಬಾರದಿತ್ತು. ನೀನು ನನ್ನೊಂದಿಗಿರದಿದ್ದರೆ ನಾನು ನಿನ್ನನ್ನು ಕಳೆದುಕೊಳ್ಳುತ್ತಿರಲಿಲ್ಲ. ನಿನ್ನ ಜಾಗದಲ್ಲಿ ಬೇರೆ ಏನನ್ನೂ ನೋಡೋಕೆ ನಾನು ಇಷ್ಟಪಡಲ್ಲ. ನಿನ್ನನ್ನ ಕಳೆದುಕೊಂಡ ಆ ಜಾಗನಾ ಎಂದೆಂದಿಗೂ ದ್ವೇಷಿಸ್ತೀನಿ. ಈಗ ನೀನು
ಎಲ್ಲಿದ್ದೀಯಾ ಅಂತ ಗೊತ್ತಿಲ್ಲ. ಆದ್ರೆ ಒಂದು ಮಾತಂತೂ ನಿಜ ನೀನೆಲ್ಲಿದ್ರೂ ನಾನು ನಿನ್ನನ್ನ ಮರಿಯಲ್ಲ.I love you so much “ Mr. NOKIA”.

ದೀಪ್ತಿ ಉಜಿರೆ
ಪ್ರಥಮ ಬಿ.ಎ
ಪತ್ರಿಕೋದ್ಯಮ ವಿಭಾಗ
ಶ್ರೀ.ಧ.ಮ.ಕಾಲೇಜು ಉಜಿರೆ

6 comments:

Kishan said...

super ya....

Jalaja Rao said...

You have wonderful sense of humour.. I really thought its again about love and lover.. chennagide...

Sushma said...

hiii deepti...thumbaa different agi think madtira...u r rocking....good....congrats...

Mallika Bhat Parappadi said...

It is nice keep it up.....

Mallika Bhat Parappadi said...

It is nice keep it up.....

Anonymous said...

nice feeelllngsss

Post a Comment