ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಉಡುಪಿ: ಇಲ್ಲಿನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ನರೇಂದ್ರಕುಮಾರ್ ಗುಣಕಿ ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದು, ಅವರನ್ನು ಬಾರ್ ಅಸೋಸಿಯೇಶನ್ ಪರವಾಗಿ ಸ್ವಾಗತಿಸಲಾಯಿತು. ಬಾರ್ ಅಧ್ಯಕ್ಷ ವಿಜಯಕುಮಾರ್ ಹೆಗ್ಡೆ ಹಾರಾರ್ಪಿಸಿ, ಸ್ವಾಗತಿಸಿದರು. ನ್ಯಾಯಾಧೀಶ ನರೇಂದ್ರಕುಮಾರ್ ರಾಜ್ಯದಲ್ಲಿ ಉಡುಪಿ ವಕೀಲರ ಸಂಘಕ್ಕೆ ಉತ್ತಮ ಹೆಸರಿದೆ. ನಾನು ವಕೀಲ ಸ್ನೇಹಿಯಾಗಿದ್ದು, ಜಿಲ್ಲೆಯಲ್ಲಿ ಬಾಕಿ ಇರುವ ಅರ್ಜಿಯನ್ನು ಶೀಘ್ರ ವಿಲೇ ಮಾಡಲು ಪೂರಕವಾಗಿ ವರ್ತಿಸಲಾಗುವುದು ಎಂದರು. ವಕೀಲರ ಸಂಘದ ಕಾರ್ಯದರ್ಶಿ ರೆನಾಲ್ಡ್ ಪ್ರವೀಣ ಕುಮಾರ್ ಸಲ್ಲಿಸಿರುವ ಬಾರ್ ಅಸೋಸಿಯೇಶನ್ ಗೆ ಗ್ರಂಥಾಲಯ, ಕೋರ್ಟ್ ಆವರಣದಲ್ಲಿ ಕ್ಯಾಂಟೀನ್ ವ್ಯವಸ್ಥೆ ಹಾಗೂ ಅಂಚೆ ಕಚೇರಿ ವಿಸ್ತರಣೆ ಬಗ್ಗೆ ಸೂಕ್ತ ಗಮನ ಹರಿಸುವುದಾಗಿ ತಿಳಿಸಿದರು. ತ್ವರಿತ ವಿಚಾರಣಾ ಪೀಠಾಸೀನಾಧಿಕಾರಿ ಎಸ್. ಎಲ್. ಪಾಟೀಲ್, ಪ್ರಧಾನ ಸಿವಿಲ್ ನ್ಯಾಯಾಧೀಶೆ ಹಾಗೂ ಮುಖ್ಯ ನ್ಯಾಯಿಕ ದಂಡಾಧಿಕಾರಿ ಸಾವಿತ್ರಿ ವಿ. ಭಟ್, ಗಾಯತ್ರಿ ಎನ್. ಗುಣಕಿ ವೇದಿಕೆಯಲ್ಲಿದ್ದರು. ವಕೀಲರ ಸಂಘದ ಸದಸ್ಯ ಬೈಕಾಡಿ ಸುಪ್ರಸಾದ ಶೆಟ್ಟಿ ನಿರೂಪಿಸಿದರು. ಕಾರ್ಯದರ್ಶಿ ರೆನಾಲ್ಡ್ ಪ್ರವೀಣಕುಮಾರ್ ವಂದಿಸಿದರು.

ವರದಿ: ಕಿರಣ್ ಮಂಜನಬೈಲು

0 comments:

Post a Comment