ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಮೂಡುಬಿದಿರೆ : ಆರೋಗ್ಯಕರ ಜೀವನಕ್ಕೆ ಪರಿಸರ ಸಂರಕ್ಷಣೆ ಅಗತ್ಯ .ಸರಕಾರದ ಜೊತೆಗೆ ಸಂಘಸಂಸ್ಥೆಗಳು ಪರಿಸರ ಸ್ನೇಹಿ ಕಾರ್ಯಕ್ರಮಗಳಲ್ಲಿ ತೊಡಗಿಸಬೇಕು ಎಂದು ಪುತ್ತಿಗೆ ಗ್ರಾಮ ಪಂಚಾಯತ್ತಿನ ಅದ್ಯಕ್ಷ ಶಶಿಧರ ನಾಯಕ್ ಅಭಿಪ್ರಾಯಪಟ್ಟರು.ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಹಂಡೇಲು ಇಲ್ಲಿ ನಡೆದ ಅಗ್ರಿಗೋಲ್ಡ್ ಗ್ರೂಪ್ ಅಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮವನ್ನು ಸಸಿ ನೆಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಅಗ್ರಿಗೋಲ್ಡ್ ಸಂಸ್ಥೆಯ ಹಿರಿಯ ಅಧಿಕಾರಿ ಪ್ರಕಾಶ್.ಎಸ್.ದೇವಾಡಿಗ ರೈತರು ಸಾವಯವ ಕೃಷಿ ಪದ್ದತಿಯನ್ನು ಅನುಸರಿಸಬೇಕು.ಶುದ್ದ ಗಾಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ನೆಡುವುದು ಅವಶ್ಯಕ. ಮಿತಿಮೀರುತ್ತರುವ ಕೈಗಾರಿಕೆಗಳಿಂದ ಕೃಷಿಯು ಬರಡಾಗುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು.
ಪತ್ರಕರ್ತ ಶೇಖರ್ ಅಜೆಕಾರ್,ಪಂಚಾಯತ್ ಸದಸ್ಯ ಶಿವಾನಂದ ಪೂಜಾರಿ,ಮುಖ್ಯ ಶಿಕ್ಷಕ ಟಿ.ಎನ್.ಕೆಂಬಾರೆ, ಅಗ್ರಿಗೋಲ್ಡ್ ಕಾರ್ಯಕರ್ತರಾದ ಉಮೇಶ್ ಕುಲಾಲ್,ನಾರಯಣ್ ನಾಯಕ್,ವೆಂಕಟೇಶ್ ಬಂಗೇರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವರದಿ:ಯಶೋಧರ ಬಂಗೇರ
ದ್ವಿತೀಯ ಪತ್ರಿಕೋದ್ಯಮ , ಆಳ್ವಾಸ್ ಕಾಲೇಜು ,ಮೂಡುಬಿದಿರೆ
ಛಾಯಚಿತ್ರ: ಸುಷ್ಮಾ ಸ್ಟುಡಿಯೊ ,ಮೂಡುಬಿದಿರೆ

0 comments:

Post a Comment