ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:24 PM

ಸನ್ಮಾನ

Posted by ekanasu

ರಾಷ್ಟ್ರ - ಅಂತಾರಾಷ್ಟ್ರ
ಬ್ರಿಟನಿನ ಪಾರ್ಲಿಮೆಂಟ್ ನಲ್ಲಿರುವ ಹೌಸ್ ಆಫ್ ಕಾಮನ್ಸ್ ನಲ್ಲಿ ನೂತನವಾಗಿ ಆಯ್ಕೆಯಾದ ಲಂಡನ್ನಿನ ಪ್ರತಿಷ್ಟಿತ ಲಾಂಬೆತ್ ನಗರದ ಮೇಯರ್ ಡಾ ನೀರಜ್ ಪಾಟೀಲ್ ರವರ ಸನ್ಮಾನ ಕಾರ್ಯಕ್ರಮವನ್ನು ದಿನಾಂಕ ಜುಲೈ 3, 2010 ರಂದು ಮದ್ಯಾಹ್ನ ಎರಡು ಘಂಟೆಗೆ ಕೀತ್ ವಾಜ್ ,ಲೇಸ್ಟೆರ್ ನಗರದ ಸಂಸದ ಏರ್ಪಡಿಸಿದ್ದರು.ಕಾರ್ಯಕ್ರಮಕ್ಕೆ ಬೆಂಗಳೂರಿನ ಸಂಸದ ಸನ್ಮಾನ್ಯ ಶ್ರೀ ಅನಂತ್ ಕುಮಾರ್ ರವರು ಮುಖ್ಯ ಅತಿಥಿಯಾಗಿ ಭಾಗವಿಸಿದ್ದರು.ಕರ್ನಾಟಕದ ಗುಲ್ಬರ್ಗದ ಒಂದು ಹಳ್ಳಿಯಿಂದ ಬಂದ ವ್ಯಕ್ತಿ ಸಣ್ಣ ಪ್ರಾಯದಲ್ಲೇ ಇಂದು ಪ್ರಪಂಚದ ಬಹುದೊಡ್ಡ ಆಸ್ಪತ್ರೆಯಲ್ಲಿ ವೈದ್ಯರಾಗಿ ,ಲಂಡನ್ನಿನ ಪ್ರತಿಷ್ಟಿತ ಲಾಂಬೆತ್ ನಗರದ ಮೇಯರ್ ಆಗಿರುವುದು ಕರ್ನಾಟಕಕ್ಕೆ ಬಹು ದೊಡ್ಡ ಹೆಮ್ಮೆ.ಅವರ ಈ ಸಾಧನೆ ದೇಶದ ಹಲವಾರು ಯುವ ಪೀಳಿಗೆಗೆ ಮಾದರಿ ಎಂದು ಬಣ್ಣಿಸಿದರು.ಕೀತ್ ವಾಜ್ ಮಾತನಾಡುತ್ತ ನೀರಜ್ ಪಾಟೀಲ್ ರವರನ್ನು ಒಬ್ಬ ಉತ್ತಮ ನಾಯಕ, ಅವರು ತಮ್ಮ ಸಹವರ್ತಿ ಎಂದು ಶ್ಲಾಘಿಸಿದರು.


ನೀರಜ್ ಪಾಟೀಲ್ ರವರು ಮಾತನಾಡುತ್ತ ಇಷ್ಟೆಲ ಸಾಧನೆಯ ಹಿಂದೆ ಹಲವಾರು ಸ್ನೇಹಿತರ ಸಹಕಾರವಿದೆ ,ಅದರಲ್ಲೂ ಪ್ರಮುಖವಾಗಿ ಕೆಲವಾರು ವರುಷಗಳಿಂದ ತಮ್ಮ ಒಂದಿಗೆ ಇದ್ದು ರಾಜಕೀಯ ,ಮಾಧ್ಯಮ ವ್ಯಹಹಾರಗಳಲ್ಲಿ ಸಹಕಾರವನ್ನು ಕೊಡುತ್ತ ಬಂದಿರುವ ಕಾಸರಗೋಡಿನ ಕುಂಟಿಕಾನ ಮಠ ಕುಮಾರ್ ರವರ ಸಹಕಾರವನ್ನು ನೆನಪಿಸಿಕೊಂಡರು.ಕುಂಟಿಕಾನ ಮಠ ಕುಮಾರ್ ಒಬ್ಬ ಶ್ರಮ ಜೀವಿ , ಎಷ್ಟೇ ಕಷ್ಟ ಬಂದರು ಹೆದರದ ,ಬಹು ದೂರ ದೃಷ್ಟಿ ಯಿರುವ ಯುವ ನಾಯಕ. ಎಂ ಬಿ ಎ ಪದವಿಧರರಾದ ಕುಮಾರ್ ಉತ್ತಮ ರಾಜಕೀಯ ಮತ್ತು ವ್ಯವಹಾರಿಕ ವಿಶ್ಲೇಷಕ, ಸಹವರ್ತಿಗಳನ್ನು ಹುರಿದುಂಬಿಸಿ ಎಂತಹ ಮಹತ್ಕರ್ಯವನ್ನಾದರೂ ಸುಲಭವಾಗಿ ಪೂರೈಸುವ ಚಾಣಕ್ಯ ಎಂದು ಬಣ್ಣಿಸಿದರು.ಸಣ್ಣ ವಯಸ್ಸಿನಲ್ಲಿ ಹತ್ತು ಹಲವಾರು ಕ್ಷೇತ್ರದಲ್ಲಿ ದುಡಿದು ಅನುಭವ ಹೊಂದಿರುವ ಕುಂಟಿಕಾನ ಮಠ ಕುಮಾರ್ ನನ್ನ ಸಾಧನೆಯ ಹಿಂದೆ ದುಡಿದಿದ್ದಾರೆ ಅವರ ಸಹಕಾರಕ್ಕೆ ನಾನು ಚಿರ ಋಣಿ ಎಂದರು.

0 comments:

Post a Comment