ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಉಡುಪಿ : ಹೇಸಿಗೆ ಹುಟ್ಟಿಸುತ್ತಿದೆ ಹೆದ್ದಾರಿ! ರಾಷ್ಟ್ರೀಯ ಹೆದ್ದಾರಿ 17ರ ಮಗ್ಗಲು ಗೊಬ್ಬರ ಗುಂಡಿಯಾಗಿ ಬದಲಾವಣೆಯಾಗಿ ವಾಕರಿಕೆ ತರಿಸುವಷ್ಟು ಗಬ್ಬೆದ್ದಿದೆ.
ಆಹಾರಕ್ಕಾಗಿ ನಾಯಿಗಳ ಕಿತ್ತಾಟ, ಹೊಟ್ಟೆಗೇನಾದರು ಸಿಗುತ್ತಾ ಎಂಬ ಹುಡುಕಾಟದಲ್ಲಿರುವ ದನಗಳ ಹಿಂಡು. ಇವುಗಳ ನಡುವೆ ನಮಗೇನಾದರೂ ಪಾಯಿದೆ ಆಗುತ್ತಾ ಎಂಬ ನಿರೀಕ್ಷೆಯ ಹುಡುಕಾಟದಲ್ಲಿ ಚಿಂದಿ ಹುಡುಕುವ ಮಂದಿ. ಈ ಸಂಗತಿಗಳು ಒಟ್ಟು ಸೇರಿಸಿದರೆ ಹೆದ್ದಾರಿ ಮಗ್ಗಲಾಗುತ್ತದೆ.

ರಾಷ್ಟ್ರದ ಪ್ರತಿಷ್ಠೆಯ ಮಾರ್ಗವಾದ ರಾಷ್ಟ್ರೀಯ ಹೆದ್ದಾರಿ17ರ ಮಗ್ಗಲು ಅಕ್ಷರಶಹ ಕೊಚ್ಚೆಗುಂಡಿ. ಮಂಗಳೂರಿನಂದ ಮೊದಲ್ಗೊಂಡು ಶಿರೂರಿನ ಗಡಿಗುಂಟ ರಾಷ್ಟ್ರೀಯ ಹೆದ್ದಾರಿ ತ್ಯಾಜ್ಯ ವಿಲೇವಾರಿ ಕೇಂದ್ರ.

ಉಡುಪಿ ಅಂಚಿನಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ17 ಅಂತೂ ಥರಹೇವಾರಿ ತ್ಯಾಜ್ಯ ರಾಶಿಯ ಸಂತೆ. ಉಡುಪಿ ನಗರಸಭೆ ಮತ್ತು ಹೆದ್ದಾರಿ ನಿಗಮದ ಪ್ರತಿಷ್ಠೆಯನ್ನು ರಾಜ್ಯ ಹೆದ್ದಾರಿ ಹರಾಜು ಹಾಕುತ್ತಿದ್ದೆ. ಕೃಷ್ಣನ ನಾಡೆಂದೇ ವಿಶ್ವವಿಖ್ಯಾತಿ ಪಡೆದ ಉಡುಪಿಗೆ ಹೆದ್ದಾರಿ ಕಪ್ಪು ಚುಕ್ಕೆ. ಹೆದ್ದಾರಿ ನಿಗಮ ಮತ್ತು ಉಡುಪಿ ಪುರಸಭೆಯ ಕಾರ್ಯಕ್ಷಮತೆಗೆ ಹೆದ್ದಾರಿ 17 ಸಾಕ್ಷಿ!

ತ್ಯಾಜ್ಯ ವಿಲೇವಾರಿ ಕೇಂದ್ರವಿದೆ

ಉಡುಪಿ ನಗರಸಭೆಗೆ ತನ್ನದೇ ಆದ ತ್ಯಾಜ್ಯ ವಿಲೇವಾರಿ ಕೇಂದ್ರ ಹೊಂದಿದೆ ಕರ್ವಾಲು ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ತೆರೆಯಲಾಗಿದೆ. ಉಡುಪಿ ನಗರದ ಸಮಸ್ತ ಪಾಪಕೂಪ ಕರ್ವಾಲಿಗೆ ಬಂದು ಬೀಳುತ್ತಿದೆ. ಹತ್ತು ಹಲವು ಭರವಸೆ ನಡುವೆ ತೆರೆದ ತ್ಯಾಜ್ಯ ವಿಲೇವಾರಿ ಕೇಂದ್ರದಿಂದ ಕರ್ವಾಲು ನಾಗರಿಕರ ನೆಮ್ಮದಿ ಅಧೋಗತಿ. ರಾಷ್ಟ್ರೀಯ ಹೆದ್ದಾರಿ ಮಗ್ಗಲಲ್ಲಿ ಬಂದು ಬೀಳುತ್ತಿರುವ ತ್ಯಾಜ್ಯದಿಂದ ಹೆದ್ದಾರಿ ಪಕ್ಕ ವಾಸಮಾಡಿವ ಜನರು ಬದುಕು ಬರ್ಬಾದ್ ಹಂತಕ್ಕೆ ಬಂದಿದೆ.

ಉಡುಪಿ ಮುಖಾಂತರ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಇಕ್ಕೆಡೆಗಳಲ್ಲಿ ಥರಹೇವಾರಿ ಕಸಗಳ ರಾಶಿ ಬಿದ್ದಿದೆ. ಮರದ ತುಂಡು, ಎಳನೀರು ಚಿಪ್ಪು, ಓಡು, ಪ್ಲಾಸ್ಟಿಕ್, ಕೊಳೆತು ನಾರುವ ಆಹಾರ, ಹೊಟೇಲ್ ಮತ್ತು ಅಂಗಡಿ ಮುಂಗಟ್ಟುಗಳ ತ್ಯಾಜ್ಯ ಹೀಗೆ ಕೊಚ್ಚೆಯ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತದೆ. ಇದರೊಟ್ಟಿಗೆ ಹೆದ್ದಾರಿ ಮಗ್ಗಲ್ಲಿ ರಾಶಿಬಿದ್ದ ಮಣ್ಣಿನ ರಾಶಿ ವಾಹನ ಚಾಲಕರ ಸಹನೆ ಪರೀಕ್ಷಿಸುತ್ತಿದೆ. ಕೊಚ್ಚಿಯಲ್ಲಿ ಆಹಾರ ಹುಡುಕುವ ಸಲುವಾಗಿ ಹಾರುವ ಕಾಗೆ, ಹದ್ದುಗಳ ಸಮೂಹ, ನಾಯಿಗಳು ಬೊಗಳುವಿಕೆ, ಹಸುಗಳ ಕಿತ್ತಾಟ ಹೆದ್ದಾರಿಯಲ್ಲಿ ಸಾಮಾನ್ಯ ದೃಶ್ಯ. ಒಟ್ಟಲ್ಲಿ ಹೆದ್ದಾರಿ ಮಗ್ಗಲು ಕೊಚ್ಚೆ ರಾಶಿಯಾಗುತ್ತಿದ್ದರೂ ಯಾರೂ ಕೇಳೋರಿಲ್ಲ.

ಕೋಟಿ ಲೆಕ್ಕದಲ್ಲಿ ತ್ಯಾಜ್ಯ ಘಟಕ : ಉಡುಪಿ ನಗರಸಭೆ 4.82 ಕೋಟಿ ರೂ. ವೆಚ್ಚಿದಲ್ಲಿ ತ್ಯಾಜ್ಯ ವಿಲೇವಾರಿ ಘಟಕವನ್ನು ಕರ್ವಾಲಿನಲ್ಲಿ ತೆರೆದಿದೆ. ತ್ಯಾಜ್ಯ ಸಾಗಾಟ ಮತ್ತು ಸಂಗ್ರಹಕ್ಕೂ ಉಡುಪಿ ನಗರ ಸಭೆವ್ಯವಸ್ಥೆ ಮಾಡಿಕೊಂಡಿದೆ. ಆದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂದು ಬೀಳುತ್ತಿರುವ ತ್ಯಾಜ್ಯಗಳ ಬಗ್ಗೆ ಕಣ್ಣೆತ್ತಿಯೂ ನೋಡುತ್ತಿಲ್ಲ ಎಂಬ ಪವಾದವನ್ನು ಪರಿಸರದ ನಿವಾಸಿಗಳು ಹೊರಿಸುತ್ತ್ತಿದ್ದಾರೆ.

ಘನತ್ಯಾಜ್ಯ ವಸ್ತುಗಳ ನಿರ್ವಹಣೆ ಕಡ್ಡಾಯವಾಗಿ ಮಾಡಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಆದರೆ ಉಡುಪಿ ನಗರಸಭೆ ನ್ಯಾಯಾಲಯದ ಆದೇಶವನ್ನು ಗಾಳಿಗೆ ತೂರಿದೆ. ಎಬ್ಬರ ಜಗಳದಲ್ಲಿ ಕೂಸು ಬಡವಾಯ್ತು ಅಂತಾರಲ್ಲ ಹಾಗೆ ಹೆದ್ದಾರಿ ಪಕ್ಕದಲ್ಲಿ ಬಿದ್ದ ಕೊಚ್ಚೆಗೆ ಹೆದ್ದಾರಿ ನಿಗಮದವರೇ ಜವಾಬ್ದಾರರು ಎಂದು ನಗರಸಭೆ ಅಕಾರಿಗಳು ಹೇಳಿದರೆ ನಗರದ ಕೊಚ್ಚೆಯನ್ನು ರಸ್ತೆ ಮಗ್ಗಲ್ಲಿ ಹಾಕಿದ್ದರಿಂದ ಅದನ್ನು ನಗರಸಭೆಯ ಕ್ಲೀನ್ ಮಾಡಬೇಕು ಎನ್ನೋದು ರಾಷ್ಟ್ರೀಯ ಹೆದ್ದಾರಿ ಅಕಾರಿಗಳ ವಾದ. ಹಾಗಾಗಿ ಹೆದ್ದಾರಿ ಮಗ್ಗಲು ಕೊಚ್ಚೆಯೆ ತಪ್ಪಲಾಗಿದೆ.

ಕೃಷಿಗೂ ಬಂತು ಸಂಕಷ್ಟ
ಹೆದ್ದಾರಿ ಮಗ್ಗಲಲ್ಲಿ ಕಸದ ರಾಸಿ ಬೀಳುವುದರಿಂದ ಕೃಷಿ ಚಟುವಟಿಕೆಗೂ ಕಂಠಕ ಬಂದಿದೆ. ಯಥೇಚ್ಛವಾಗಿ ಕೊಚ್ಚೆ ರಸ್ತೆ ಪಕ್ಕದಲ್ಲಿ ಸಂಗ್ರಹವಾಗುವುದರಿಂದ ಪರಿಸರ ನಿವಾಸಿಗಳಿಗೆ ಸದಾ ಸೊಳ್ಳೆಯ ಸಂಗೀತ. ಕರೆಂಟ್ ಕೈಕೊಟ್ಟರಂತೂ ಇಲ್ಲಿಯ ನಿವಾಸಿಗಳ ಪಾಡು ದೇವರಿಗೆ ಪ್ರೀತಿ. ವಿದ್ಯುತ್ ಇಲ್ಲದ ಸೊಳ್ಳೆಪರದೆಯಿರದ ದಿನವನ್ನು ನೆನೆಸಿಕೊಂಡರೆ ಇಲ್ಲಿನವರ ಬೆಚ್ಚಿಬೀಳುತ್ತಾರೆ.

ಹೆದ್ದಾರಿ ಬದಿಯಲ್ಲಿ ಶೇಖರವಾಗುತ್ತಿರುವ ಪ್ಲಾಷ್ಟಿಕ್ ಕೃಷಿ ಪ್ರದೇಶದಲ್ಲಿ ತನ್ನ ಪ್ರಭಾವ ಬೀರಿದೆ. ಪ್ಲಾಸ್ಟಿಕ್ ಗೆದ್ದೆಯಲ್ಲಿ ಸಂಗ್ರಹ ಆಗುತ್ತಿರುವದರಿಂದ ಉಳಿಮೆ ತ್ರಾಸಾಗುತ್ತಿದೆ ಎಂದು ರೈತರು ದೂರಿಕೊಂಡಿದ್ದಾರೆ. ಹಾಗೆ ಕೊಚ್ಚಿ ನೀರು ಗದ್ದೆಗೆ ನುಗ್ಗುವುದರಿಂದ ನಾಟಿಮಾಡಿದ ನೇಜಿಗಳು ಸಾಯುತ್ತಿವೆ. ಹಾಗಾಗಿ ರಸ್ತೆ ಬದಿಯ ಗದ್ದೆಗಳ ನಾಟಿ ಕೈಬಿಟ್ಟಿದ್ದೇವೆ ಎಂದು ಹೆಸರು ಹೇಳಲು ಇಚ್ಛಿಸದ ರೈತ ಹೊಸದಿಗಂತಕ್ಕೆ ತಿಳಿಸಿದ್ದಾರೆ. ಒಟ್ಟಾರೆ ಹೆದ್ದಾರಿ ಮಗ್ಗಲು ತ್ಯಾಜ್ಯ ವಿಲೇವಾರಿ ಕೇಂದ್ರವಾಗಿ ಉಡುಪಿ ಮಾನ ಹರಾಜಿಗಿಟ್ಟಿದೆ.

ಉಡುಪಿ ನಗರಸಭೆ ಉಡುಪಿ ಕ್ಲೀನ್ ಎಂದು ದೊಡ್ಡ ದೊಡ್ಡ ಅಕ್ಷರದಲ್ಲಿ ದೊಡ್ಡದಾಗಿ ನಾಮಫಲಕ ಹಾಕಿದೆ. ಅದರ ಬುಡದಲ್ಲೇ ಕೊಚ್ಚೆಯ ರಾಶಿಯಿದೆ!

ಶ್ರೀಪತಿ ಹೆಗಡೆ ಹಕ್ಲಾಡಿ

0 comments:

Post a Comment