ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಅದು 2007ರ ಆಗಸ್ಟ್ 15.ನಮ್ಮ ದೇಶ ಸ್ವಾತಂತ್ರ್ಯ ಪಡೆದು 60ವರುಷ ತುಂಬಿದ ಸುದಿನ. ಪತ್ರಕರ್ತ ಮಿತ್ರ ಧನಂಜಯ ಮೂಡಬಿದಿರೆ ಸಾರ್ವಜನಿಕ ಉಪಯೋಗಕ್ಕಾಗಿ ಮೂಡಬಿದಿರೆಯ ಸ್ವರಾಜ್ಯ ಮೈದಾನದ ಸುತ್ತಲೂ 60ಕ್ಕೂ ಅಧಿಕ ಪೇರಳೆ ಗಿಡಗಳನ್ನು ನೆಟ್ಟರು. ಅನೇಕರು ಇದಕ್ಕೆ ವ್ಯಂಗ್ಯ ವ್ಯಕ್ತಪಡಿಸಿದ್ದು ಬೇರೆ ಮಾತು. ವರುಷ ಒಂದು ಕಳೆಯಿತು. ಏನೂ ತೊಂದರೆಗಳುಂಟಾಗಿಲ್ಲ. ಆದರೆ ಆ ಪ್ರದೇಶದಲ್ಲಿ ರಸ್ತೆಗೆ ಡಾಮರು ಹಾಕುವ ಕಾರ್ಯ ನಡೆಯಿತು. ಅಲ್ಲೇ ನೋಡಿ ... ಪೇರಳೆ ಗಿಡಗಳು ಡಾಮರಿಗಾಹುತಿಯಾಯಿತು.ಕೆಲವು ಗಿಡಗಳ ಮೇಲೆ ಡಾಮರು ಬಿತ್ತು..ಡಾಮರು ಚೆಲ್ಲಿದವು. ಆದರೆ ಧನಂಜಯರು ಆ ಗಿಡಗಳನ್ನೆಲ್ಲಾ ಡಾಮರು ಮುಕ್ತಗೊಳಿಸಿದರು.ಜೋಪಾನವಾಗಿ ಮಗುವಿನಂತೆ ಸಲಹಿದರು. ಅದರ ಫಲವೇ ಕೆಲವೊಂದು ಗಿಡಗಳು ಹೂಬಿಟ್ಟು , ಫಲ ನೀಡಿದವು.ಕೆಲವರಿಗೆ ಹೊಟ್ಟೆಕಿಚ್ಚು ಅನ್ನೋದು ಅದಕ್ಕೇ. ಏನೂ ಮಾಡದೆ ಮೂಕವಾಗಿ ನಿಂತಿದ್ದ ಪೇರಳೆ ಗಿಡಗಳ ಹೂ ಕಾಯಿಗಳು ತುಂಬಿದ್ದ ಗೆಲ್ಲುಗಳು ಈ ಕಟುಕರ ಕತ್ತಿಯೇಟಿಗೆ ಸಿಲುಕಿವೆ. ಯಾರಿಗೂ ಅನ್ಯಾಯ ಮಾಡದ ಈ ಪೇರಳೆ ಗಿಡಗಳನ್ಯಾಕೆ ಕಡಿದರೋ ಗೊತ್ತಿಲ್ಲ. ಕಳೆದ ಬೇಸಗೆಯಲ್ಲಿ ಮೂರು ಬಾರಿ ಈ ಪೇರಳೆಗಿಡಗಳ ಬುಡಕ್ಕೆ ಬೆಂಕಿಹಾಕಿ ಸುಡುವ ಯತ್ನವೂ ನಡೆದಿತ್ತು.


ಗೆಳೆಯ ಧನಂಜಯ ಗಿಡನೆಡುವ ಉತ್ತಮ ಕಾರ್ಯಮಾಡಿದ್ದರು. ಸಾರ್ವಜನಿಕರಿಗೆ ದಾರಿಹೋಕರಿಗೆ ಅನುಕೂಲವಾಗಲೆಂದು ಹಣ್ಣಿನ ಗಿಡ ನೆಟ್ಟಿದ್ದರು. ಆದರೆ ಯಾವ ತೊಂದರೆಯನ್ನೂ ಮಾಡದ ಈ ಗಿಡಗಳನ್ನು ಕಡಿದು ಹಾಕಿದ್ದಾದರೂ ಯಾಕೆ. ಈ ರೀತಿಯ ಅನ್ಯಾಯ ನಿಜಕ್ಕೂ ಖೇದಕರ.

0 comments:

Post a Comment