ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:56 PM

ಐಡಿ..ಐಡಿಯಾ...

Posted by ekanasu

ಕಾರಿಡಾರ್
ಕಾಲೇಜು ಜೀವನ ಅದು ಮಧುರ ಅನುಭವಗಳ, ಸವಿನೆನಪುಗಳ ತಾಣ. ಇಲ್ಲಿ ನಾವು ಅನುಭವಿಸುವ ಕ್ಷಣಗಳು ಮತ್ತೆ ಮರುಕಳಿಸದಂತಹ ಕ್ಷಣಗಳು. ಇಲ್ಲಿ ನಡೆಯುವ ಸಣ್ಣಪುಟ್ಟ ವಿಷಯಗಳನ್ನು ಹೊಸರೀತಿಯಲ್ಲಿ ತೆಗೆದುಕೊಂಡು ಹಾಸ್ಯವಾಗಿ ನಿರೂಪಿಸುವುದು ಸಾಮನ್ಯವಾದದ್ದು.

ಕಾಲೇಜು ಸೇರಿದ ಪ್ರಾರಂಭದ ದಿನಗಳಲ್ಲಿ ಪ್ರತಿಯೊಬ್ಬರಲ್ಲಿ ಕಾಡುವ ಪ್ರಶ್ನೆ'ಕಾಲೇಜು ಐಡಿ ಯಾವಾಗ ಸಿಗುತ್ತದೆ?,' ಎಂಬುವುದು ಈ ಪ್ರಶ್ನೆ ಮನದಲ್ಲಿ ಮೂಡಲು ಅನೇಕ ಕಾರಣಗಳಿವೆ. ದಿನಾಲೂ ಸರ್ವೀಸ್ ಬಸ್ಸುಗಳಲ್ಲಿ ಬರುವ ವಿದ್ಯಾರ್ಥಿಗಳಲ್ಲಿ ಐಡಿ ಕಾರ್ಡ ಇರಬೇಕಾದದ್ದು ಅತಿ ಅಗತ್ಯ. ಅಪರೂಪಕ್ಕೆ ಎಂಬಂತೆ ಕೆಲವೊಮ್ಮೆ ಸಮವಸ್ತ್ರಕ್ಕೆ ಬದಲೂ ಕಲರ್ ಡ್ರೆಸ್ ಧರಿಸಿದರೇ ಕಂಡಕ್ಟರ್ ಕೇಳುವ "ಎಲ್ಲಿ ನಿಮ್ಮ ಐಡಿ ಕಾರ್ಡ್? ಯಾವ ಕಾಲೇಜು ? ಯಾವ ಕ್ಲಾಸ್?" ಅಬ್ಬಬ್ಬಾ ಅವನ ತಲೆಯಲ್ಲಿ ಸುತ್ತುವ ಅನೇಕ ಸಂಶಯದ ಪ್ರಶ್ನೆಗಳು. ಇವನ ಪ್ರಶ್ನೆಗಳಿಗೆ ಮಾತಿಲ್ಲದೆ ಉತ್ತರಿಸುವುದು ಒಂದೇ ಐಡಿ ಕಾರ್ಡ್.ದೂರದೂರುಗಳಿಂದ ಬಂದಂತಹ ವಿದ್ಯಾರ್ಥಿಗಳು ಐಡಿಯ ಹಂಬಲಕ್ಕೆ ಹೊರತಾಗಿಲ್ಲ ಕಾಲೇಜಿನ ಪಕ್ಕದ ಮೊಬೈಲ್ ಶಾಪ್ಗಳಲ್ಲಿ ಮೊಬೈಲ್ ನೆಟ್ ವರ್ಕ್ ಹೊಸ ಹೊಸ ಆಫರ್ ಗಳು ಬಂದಾಗ ಐಡಿಯು ಬೇಕಾಗುತ್ತದೆ. ಕ್ಲಾಸ್ ಪ್ರಾರಂಭವಾದ ಮೊದಲನೆ ದಿನದಿಂದ ಎಲ್ಲರೂ ಐಡಿ ಕಾರ್ಡ್ ಯಾವಾಗ ಸಿಗುತ್ತದೆ. ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದೆವು.

ಆದರೆ ನಾವು ಕಾಯುತ್ತಿದ್ದ ಐಡಿ ಮಾತ್ರ ಬಂದದ್ದು ಮೂರು ತಿಂಗಳ ನಂತರ. ಅಟೆಂಡರ್ ಐಡಿ ಕಾರ್ಡ್ ನ ಗೊಂಚಲು ಹಿಡಿದುಕೊಂಡು ಬರುವಾಗ ನಮಗಾದ ಸಂತೋಷ ಅಷ್ಟಿಷ್ಟಲ್ಲ. ಐಡಿ ಸಿಕ್ಕ ತಕ್ಷಣ, ಅದನ್ನು ಕೂಲಂಕೂಷವಾಗಿ ಪರಿಶೀಲಿಸುತ್ತೇವೆ. ಮನೆ ಎಡ್ರಸ್ ಸರಿಯುಂಟೋ, ವಯಸ್ಸು ಸರಿಯುಂಟೋ? ಎಂಬುದನ್ನು ಸರಿಯಾಗಿ ನೋಡುತ್ತೇವೆ. ಪ್ರಮಾದ ಎಂಬಂತೆ ಯಾರದೋ ಪೋಟೊಕ್ಕೆ ಯಾರದೊ ಹೆಸರು ,ಯಾರದೋ ಹೆಸರಿಗೆ ಯಾವುದೋ ಎಡ್ರಸ್ , ಎಡ್ರಸ್ ಇದ್ದರು ಅದು ಸರಿಯಿರದೇ ಇರುವುದು. ಸಂಭವಿಸುತ್ತದೆ. ಆದರೆ ನಮ್ಮ ಐಡಿಯಲ್ಲಿ ಅಂತಹ ಲೋಪದೋಷಗಳು ಕಂಡದ್ದು ತೀರಾ ಕಡಿಮೆ. ಐಡಿ ಸಿಕ್ಕ ದಿನ ಕ್ಲಾಸಿನಲ್ಲಿ ಆದರ ಬಗ್ಗೆಯೇ ಚರ್ಚೆ. ಒಂದಿಷ್ಟು ವಿಮರ್ಶೆ. ಕಾಲೇಜು ದಿನಗಳಲ್ಲಿ ಐಡಿಯು ಕುತ್ತಿಗೆಯಲ್ಲಿ ಜೋತು ಬಿದ್ದು ಎದೆಯನ್ನು ಮುಟ್ಟುತ್ತದೆ. ಕಾಲೇಜು ಜೀವನದ ಬಳಿಕ ಐಡಿಯು ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಾ ಬರುತ್ತದೆಯಾದರೂ, ಮುಂದೊಮ್ಮೆ ಐಡಿಯ ಈ ಸುಂದರ ನೆನಪುಗಳು ಹೃದಯವನ್ನುತಟ್ಟದೆ ಇರುತ್ತದೆಯೇ? ಖಂಡಿತ ತಟ್ಟುತ್ತದೆ. ಅದರ ನೆನಪು ಮರುಕಳಿಸುತ್ತದೆ ಕಾಲೇಜಿನ ನೆನಪಿನ ಬುತ್ತಿಯಲ್ಲಿ ಬೆಚ್ಚಗೆ ಇರುತ್ತದೆ.
ಯಶೋಧರ.ವಿ.ಬಂಗೇರ
ಮೂಡುಬಿದಿರೆ.

0 comments:

Post a Comment