ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ
'ಬೆಲೆ ಏರಿಕೆಯೇ ಬಿಜೆಪಿಯೊಂದೇ ಪರಿಹಾರ' ಎಂದು ಚುನಾವಣೆ ಸಂದರ್ಭದಲ್ಲಿ ಘೋಷಿಸಿಕೊಂಡ ನಮ್ಮ ಬಿಜೆಪಿ ಪಕ್ಷ ಈಗ ಬೆಲೆ ಏರಿಕೆಯೇ ಅದಕ್ಕೆ 'ಬಂದ್',ಪ್ರತಿಭಟನೆಯೇ ಪರಿಹಾರ ಎಂಬುದನ್ನು ಸಾಬೀತು ಪಡಿಸುತ್ತಿದೆ. ಬಂದ್ ಮೂಲಕ ಸಮಸ್ಯೆಗಳನ್ನು ದೂರವಾಗಿಸಬಹುದು ಎಂದು ಸಮರ್ಥಿಸಿಕೊಳ್ಳುವವರ ಸಂಖ್ಯೆ ಕೂಡ ಕಡಿಮೆ ಇಲ್ಲ.ಬಂದ್ ಮಾಡಿದಮಾತ್ರಕ್ಕೆ ಬೆಲೆ ಕಡಿಮೆಯಾಗುವುದೇ? ಇಲ್ಲಿವರೆಗೆ ಎಷ್ಟು ಕಡಿಮೆಯಾಗಿದೆ? ಇದು ಬಂದ್ ಪರ ಇರುವವರು ಯೋಚಿಸಬೇಕಾದ ಪ್ರಶ್ನೆಯಾಗಿದೆ. ಬಂದ್ ನಿಂದ ನಿಜವಾಗಿ ಸಂಕಷ್ಟ ಪಡುವವರು ಸಾಮಾನ್ಯ ಜನರು.ಕಾಂಗ್ರೆಸ್ ಬೆಲೆ ಏರಿಕೆಯನ್ನು ನಿರಂತರವಾಗಿ ಮಾಡುತ್ತಾ ದೇಶದ ಜನತೆಯ ಜೀವನದಲ್ಲಿ ಗಾಯ ಮಾಡುತ್ತಿದ್ದರೇ ಬಿಜೆಪಿಯು ಅದಕ್ಕೆ ಬರೆಯನ್ನು ಎಳೆಯುತ್ತಿದೆ.ಪ್ರತಿಭಟನೆಯಲ್ಲಿ ಕಾಂಗ್ರೆಸ್ ಕೂಡ ಕಡಿಮೆ ಇಲ್ಲ. ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ಬೇಕು ಎಂದು ರಾಜ್ಯದ ಎಲ್ಲೆಡೆ ಪ್ರತಿಭಟನೆ ಮಾಡಿದವರು ಕಾಂಗ್ರೆಸಿಗರು .ಆದರೆ ದುರಂತವೇಂದರೆ ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ನೀಡುವ ಬಗ್ಗೆ ಮುಖ್ಯಮಂತ್ರಿಗಳು ಸಭೆ ನಡೆಸಿದಾಗ ಕಾಂಗ್ರೆಸ್ಸಿನಲ್ಲಿಯೇ ಒಮ್ಮತವಿರಲಿಲ್ಲ. ಅವರು ಮಾಡಿದ ಪ್ರತಿಭಟನೆಗೆ ಏನಾದರೂ ಅರ್ಥವಿದೆಯೇ?ಮತ್ತೊಂದು ಶೋಚನಿಯ ಸಂಗತಿಯೇಂದರೇ ರಾಜಕೀಯ ಪಕ್ಷಗಳು ಮಾಡುವ ಪ್ರತಿಭಟನೆಯಲ್ಲಿ ಜನರ ಸಮಸ್ಯೆಗಿಂತ ಪಕ್ಷದ ಪ್ರಚಾರ ಭರದಿಂದ ಸಾಗುತ್ತಿದೆ. ಪಕ್ಷದ ಬಾವುಟಗಳು ಪ್ರತಿಭಟನೆ ನಿರತರ ಕೈಗಳಲ್ಲಿ,ವಾಹನಗಳಲ್ಲಿ ರಾರಾಜಿಸುತ್ತಿದೆ. ಬಂದ್ ,ಪ್ರತಿಭಟನೆಗಳಿಂದ ಸಾರ್ವಜನಿಕ ಸೊತ್ತುಗಳ ಹಾನಿ,ಪ್ರಾಣಹಾನಿಗಳು ಸಂಭವಿಸುತ್ತಿದೆ.ಅಪಾರ ಕಷ್ಟನಷ್ಟಗಳು ಉಂಟಾಗುತ್ತದೆ. ಸಮಸ್ಯೆಗಳಿಗೆ ಬಂದ್ ಒಂದೇ ಪರಿಹಾರವಲ್ಲ.ರೋಡಲ್ಲಿ ಬಂದು ಪ್ರತಿಭಟನೆ ಮಾಡುವ ಮೊದಲು ಸದನದಲ್ಲಿ ಅನಾಗರಿಕಂತೆ ವರ್ತಿಸುವ ಬದಲು ಸದನದಲ್ಲಿ ಆರೋಗ್ಯಕರ ಚರ್ಚೆಯಾಗಿ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.ಇದರಿಂದ ದೇಶಕ್ಕಾಗುವ ಕೋಟಿಗಟ್ಟಲೆ ನಷ್ಟವನ್ನು ತಡೆಯಬಹುದು.
ಯಶೋಧರ.ವಿ.ಬಂಗೇರ,
ದ್ವಿತೀಯ ಪತ್ರಿಕೋದ್ಯಮ ,
ಆಳ್ವಾಸ್ ಕಾಲೇಜು , ಮೂಡಬಿದಿರೆ.

0 comments:

Post a Comment