ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಉಡುಪಿ : ಸ್ಪೂರ್ತಿ ಸಂಸ್ಥೆ ತೆಂಗಿನ ಮಡಲಿನ ಚಪ್ಪರದಿಂದ ಮಹಡಿಯ ಮಹಲಿನವರಗೆ ನಡೆದು ಬಂದ ದಾರಿ ಹೂವಿನ ಹಾಸಿಗೆಯಾಗಿರಲಿಲ್ಲ. ಹತ್ತು ಹಲವು ಅಡೆತಡೆ ಮೀರಿ 'ಸ್ಪೂರ್ತಿ ಧಾಮ' ಬೇಳೂರಿನಲ್ಲಿ ತೆಲೆಯೆತ್ತಿದೆ. ಗಿರಜನರ ಶಿಕ್ಷಣದ ಗುರಿಯಿಟ್ಟು ಕೊಂಡು ಹುಟ್ಟಿದ ಸ್ಪೂರ್ತಿ ಧಾಮ ಎರಡನೇ ದಶಕದ ಅಂಚಿಗೆ ಬಂದುನಿಲ್ಲವಲ್ಲಿ ಹಲವರ ಪರಿಶ್ರಮ, ತ್ಯಾಗದ ಉದಾರತೆ ಇದೆ. ಪ್ರಪಂಚದ ಎಲ್ಲಾ ಧರ್ಮಗಳು ಸೇವೆಗೆ ಪ್ರಥಮ ಆಧ್ಯತೆ ನೀಡುತ್ತಿದೆ. ಆದರೆ ಸ್ಪೂರ್ತಿ ಮಾನವ ಸೇವೆಗೆ ಹೆಚ್ಚು ಒತ್ತು ನೀಡುತ್ತಿದೆ. ಸಮಾಜದಲ್ಲಿ ಶಿಕ್ಷಣ ವಂಚಿತರ ಅನಾಥ ಮಕ್ಕಳ ಮತ್ತು ಗಿರಿಜನರ ಮಕ್ಳಳ ಶಿಕ್ಷಣಕ್ಕೆ ಆಧ್ಯತೆ ನೀಡುತ್ತಾ ಜನರಲ್ಲಿ ಶಿಕ್ಷಣಿಕ ಜಾಗೃತಿ ಮೂಡಿಸುವ ಮೂಲಕ ಸಮಾಜದಲ್ಲಿರುವ ಕೀಳರಿಮೆ ತೊಡೆದು ಹಾಕುವ ಸಾರ್ಥಕ ಕೆಲಸದಲ್ಲಿ ಸ್ಪೂರ್ತಿ ನಿರತವಾಗಿದೆ. ಸ್ಪೂರ್ತಿ ಸಂಸ್ಥೆಗೆ ಎಡತಾಗಿದವರೂ ಇದ್ದಾರೆ. ಇನ್ನಿಲ್ಲದೆ ಕಾಡಿದವರ ಪಟ್ಟಿಯೂ ದೊಡ್ಡದಿದೆ. ಜಿ.ಪಂ. ಸ್ಪೂರ್ತಿ ಧಾಮಕ್ಕೆ ನೀಡುವ ಅನುದಾನದ ನಿಲ್ಲಿಸಿ ಮಕ್ಕಳು ಭಿಕ್ಷಾಟನೆ ಮಾಡುವ ಸ್ಥತಿಗೆ ತಂದಿತ್ತು. ಇದೆಲ್ಲಾ ಅಡೆತಡೆ ಮೆಟ್ಟಿ ನಿಂತು ಸ್ಪೂರ್ತಿಗೆ ಇಂದಿಗೂ ಚಿಟುಕು ಮುಳ್ಳಾಡಿಸುವುದು ನಿಂತಿಲ್ಲ. ದಿನಕ್ಕೊಂದು ತನಿಖೆ ನಿಯೋಗ ಭೇಟಿ ನೀಡುತ್ತಲೇ ಇದೆ. ಸ್ಪೋತಿಗೆ ಬಂದವರು ಸಂದರ್ಶನ ಪುಸ್ತಕದಲ್ಲಿ ಉತ್ತಮ ಸಂಸ್ಥೆ ಎಂದು ಬರೆದು ಹೋಗುತ್ತಿರುವುದು ಸ್ಪೂರ್ತಿಯ ಪ್ರಾಮಾಣಿಕತೆಗೆ ಸಿಕ್ಕಿ ಗೌರವ.ಹುಟ್ಟಿದ್ದು ಹೇಗೆ : ಅಸ್ಪೃಶ್ಯ ಸಮಾಜದ ಮೇಲೆ ಕಾಳಜಿಯಿರುವ ಐವರ ಯುವಕರ ತಂಡ ಸ್ಪೂರ್ತಿ ಕಟ್ಟಿನಿಲ್ಲಿಸಿದರು. ಆರಂಭದಲ್ಲಿ ಶಾಸಕಿ ವಿನ್ನಫ್ರಡ್ ಫೆರ್ನಾಂಡೀಸ್ ಅವರ ಬಾಡಿಗೆ ಕಟ್ಟಡದಲ್ಲಿ ಸ್ಪೂರ್ತಿ ಜನ್ಮ ತಾಳಿತು. ಗಿರಿಜನರ ಮೇಲೆ ಅಪಾರ ಕಾಳಜಿಯಿದ್ದ ಮಂಗಳೂರಿನ ಡೆಸ್ಮಂಡ್ ಏಬ್ರಿಯೋ ಅವರು ಬೇಳೂರು ಪಂಚಾಯ್ತಿ ವ್ಯಾಪ್ತಿಯಲ್ಲಿ ಸ್ಪೂರ್ತಿಗೆ 2.20 ಎಕ್ರೆ ಜಾಗ ಕೊಟ್ಟರು. ಆರಂಭದಲ್ಲಿ ಮಡ್ಲು ಚಪ್ಪರದ ಶೃಂಗಾರದಲ್ಲಿದ್ದ ಸ್ಪೂರ್ತಿ ಈಗ ಸುಸಜ್ಜಿತ ಕಟ್ಟಡ ಹೊಂದಿದೆ.1993-94 ರಲ್ಲಿ ಸ್ಪೂರ್ತಿ ಧಾಮ ಆರಂಭವಾಯಿತು. ಕೇಶವ ಕೋಟೇಶ್ವರ, ಪ್ರಮೀಳಾ ವಾಜ್, ಗಣೇಶ್, ನಿತ್ಯಾನಂದ ಮತ್ತು ಕರುಣಾಕರ ಎಂಬವರು ಸ್ಪೂರ್ತಿ ಕಟ್ಟಿಬೆಳೆಸಿದರು.ಹದಿನೈದು ಗಿರಿಜನ ವಿದ್ಯಾರ್ಥಿಗಳೊಂದಿಗೆ ಆರಂಭಗೊಂಡ
ಸ್ಪೂರ್ತಿಯಲ್ಲಿ ಈಗ 150ರಷ್ಟು ಮಕ್ಕಳಿದ್ದಾರೆ. ಇದರಲ್ಲಿ ಶಿಕ್ಷಣ ವಂಚಿತರು. ಅನಾಥ ಹಾಗೂ ಗಿರಿಜನ ಮಕ್ಕಳಪಾಲು ದೊಡ್ಡದಿದೆ. ಸ್ಪೂರ್ತಿಯ ಆರಂಭದ ಕಾಲದಲ್ಲಿ ನೂರಾರು ವರ್ಷಗಳಿಂದ ತಮ್ಮದೇ ಬದುಕಿನ ಗೂಡಲ್ಲಿದ್ದ ಗಿರಿಜನರಿಗೆ ಅಕ್ಷರದ ಕಾಗುಣತದ ಅರಿವೂ ಇರಲಿಲ್ಲ. ಅವರು ತಮ್ಮ ಮಕ್ಕಳು ಶಾಲೆಗೆ ಹೋಗುವುದನ್ನೂ ಊಹಿಸಲೂ ಹಿಂಜರಿಯುತ್ತಿದ್ದರು. ಆದರೆ ಈ ಯವಕರು ಗಿರಿಜನ ಕೇರಿಗೆ ಎಡತಾಗಿದರು. ಅವರ ಮನವಲಿಸಿ ಮಕ್ಕಳನ್ನು ಕರೆತರುವುದಲ್ಲಿ ಯಶಸ್ವಿಯಾದರು. ಅಂದು ಗಿರಿಜನರಲ್ಲಿ ಬಿತ್ತಿದ ಅಕ್ಷರ ಬೀಜ ಇಂದು ಫಲಕೊಡುತ್ತಿದೆ. ಗಿರಿಜನರೇ ತಮ್ಮ ಮಕ್ಕಳನ್ನು ಕರೆತಂದು ಸ್ಪೂರ್ತಿ ಸಂಸ್ಥೆಗೆ ಬಿಡುವಷ್ಟು ಬದಲಾವಣೆ ಬಂದಿದೆ.


ಆರಂಭವಾಯಿತು ಶಿಕ್ಷಣ ಯಜ್ಷ : ಕಳೆದ ಹದಿನೇಳು ವರ್ಷದ ಹಿಂದೆ ಆರಂಭಗೊಂಡ ಸ್ಪೂರ್ತಿ ಸಂಸ್ಥೆಯಲ್ಲಿ ಪ್ರಸಕ್ತ 150 ವಿದ್ಯಾರ್ಥಿಗಳಿದ್ದಾರೆ. ಸ್ಪೂರ್ತಿ ಸಂಸ್ಥೆ ಮಕ್ಕಳು ಕಲಿಕೆಯಲ್ಲೂ ಮುಂದಿದ್ದಾರೆ. ಆರಂಭಿಕ ಹಂತದಲ್ಲಿ ಶೇ.90ರಷ್ಟಿದ್ದ ಫಲಿತಾಂಶ ನಂತರದ ದಿನಗಳಲ್ಲಿ ನೂರಕ್ಕೆ ಏರಿಕೊಂಡಿದೆ. ಸ್ಪೂರ್ತಿಯ ಓರ್ವ ವಿದ್ಯಾರ್ಥಿ ಬಿಎಡ್ ಮಾಡಿದ್ದಾನೆ. ಮತ್ತೊಬ್ಬ ಎಲ್ಎಲ್ಬಿ ಗೆ ಸೇರಿದ್ದಾನೆ. 8 ಜನ ವಿದ್ಯಾರ್ಥಿನಿಯರು ನರ್ಸಿಂಗ್ ಮಾಡುತ್ತಿದ್ದಾರೆ. ಶಾಲೆ, ಶಿಕ್ಷಕರು, ಬೋಧನಾ ಪರಿಕರಗಳು, ಶುದ್ಧ ಊಟ ಉಪಹಾರ ಇಲ್ಲಿನ ವೈಶಿಷ್ಟ್ಯ. 1995- 96ರಲ್ಲಿ ತಾಲೂಕಿನ ನಾಲ್ಕು ಜನ ವಿದ್ಯಾರ್ಥಿಗಳು ಎಸ್ಸೆಸ್ಎಲ್ಸಿ ಪರೀಕ್ಷೆ ಬರೆದು ಪಾಸಾಗಿದ್ದುಸ್ಪೂರ್ತಿ ಹೆಗ್ಗಳಿಕೆ.


ಮಂಗಳೂರು ಮತ್ತು ಉಡುಪಿ ಜಿಲ್ಲೆಯಲ್ಲಿ 16,222 ಗಿರಿಜನ ಕುಟುಂಬವಿದೆ. ಅದರಲ್ಲಿ 584 ಕುಡುಂಬಗಳು ಐದು ಸೆನ್ಸ್ ಗಿಂತಲೂ ಜಾಸ್ತಿ ಜಾಗ ಹೊಂದಿದವರು! 2.642 ಜನರಿಗೆ ತೊಂಡು ಜಾಗವೇ ಗತಿ. ಅದರಲ್ಲಿ ಸುಶಕ್ಷತರ ಪಟ್ಟಿಯಲ್ಲಿ 9ಕ್ಕಿಂತಲೂ ಕಡಿಮೆ ಜನರಿದ್ದಾರೆ!
ಸ್ಪೂತಿಯಲ್ಲಿ ಏನೆಲ್ಲಾ ಇದೆ : ಸ್ಪೂರ್ತಿ ಗಿರಿಜನ ಮಕ್ಕಳಿಗೆ ಶಿಕ್ಷಣ ಕೊಡುವುದಷ್ಟಕ್ಕೇ ಸೀಮಿತವಾಗಿಲ್ಲ. ಗಿರಜನ ಸಮಾಜದ ಮೌಲ್ಯ ವೃದ್ಧಿಗಾಗಿ ಹತ್ತು ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ಕೊರಗರ ಶಿಕ್ಷಣ ಅಧ್ಯಯನ, ಅನೌಪಚಾರಿಕ ವಸತಿ ಶಿಕ್ಷಣ, ಸಂಸ್ಕೃತಿಕ ಅಧ್ಯಯನ ಮತ್ತು ಸಾಂಸ್ಕೃತಿಕ ಪರಿಕರ ಸಂಗ್ರಹ, ಸಮುದಾಯದ ಅಭಿವೃದ್ಧಿ ಕಾರ್ಯಕ್ರಮ, ಗಿರಿಜನ ಯುವಕ, ಯುವತಿಯರಿಗೆ ನಾಯಕತ್ವ ತರಬೇತಿ, ಸಂಘಟನಾ ಚಟುವಟಿಕೆ, ಸಣ್ಣ ಉಳಿತಾಯದ ಬಗ್ಗೆ ಜಾಗೃತಿ, ಸರಕಾರಿ ಯೋಜನೆಗಳ ಕುರಿತು ಮಾಹಿತಿ, ಹಕ್ಕಿನ ಭೂಮಿಗಾಗಿ ಹೋರಾಟ ಮತ್ತು ಏಯ್ಡ್ಸ್ ವರದಕ್ಷಿಣ ಮುಂತಾದ ಸಮಜದ ಪಿಡುಗುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸಸ್ಪೂರ್ತಿ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಸಮುದಾಯದ ಒಳಿತಿಗಾಗಿ ಹಲವು ಯೋನಜಗಳನ್ನು ಸ್ಪೂರ್ತಿ ಹಾಕಿಕೊಂಡಿದೆ.

ದತ್ತು ಕೇಂದ್ರ : ಸ್ಪೂರ್ತಿ ಸಂಸ್ಥೆಯ ಅಂಗಳದಲ್ಲಿ ಅನಾಥ ಮತ್ತು ಬೀದಿಬದಿ ಬಿಟ್ಟು ಹೋದ ಮಕ್ಕಳ ಆಶ್ರಯ ತಾಣವಿದೆ. ಅನಾಥರು ಕೂಡಾ ಸ್ಪೂರ್ತಿ ಸಂಸ್ಥೆಯ ಬಾಗಿಲಿಗೆ ಬಂದಿದ್ದಾರೆ. ನಾಲ್ಕು ಜನ ಅನಾಥರು ಸ್ಪೂತಿಯ ಆಶ್ರಯದಲ್ಲಿದ್ದಾರೆ. ಅವರೆಲ್ಲರಿಗೂ ಎಲ್ಲಾ ಇದ್ದೂ ಮನೆಯಿಂದ ಹೊರಗೆ ಹಾಕಲ್ಪಟ್ಟವರು. ಮತ್ತು ವಂಚನೆಗೆ ಒಳಗಾದವರು. ದತ್ತು ಕೇಂದ್ರದಲ್ಲಿ ಎಳೆಯ ಮಕ್ಕಳ ನಗು ಅಳುವಿನ ಅಲೆಯಿದೆ. ಒಂಭತ್ತು ಮಕ್ಕಳು ದತ್ತು ಕೇಂದ್ರದಲ್ಲಿವೆ. ಈ ಮಕ್ಕಳಿಗೆ ಮುಂದಿನ ಭವಿಷ್ಯ ಬರೆಯುವ ಪ್ರಯತ್ನ ಸ್ಪೂರ್ತಿ ಮಾಡುತ್ತಿದೆ. ಮಕ್ಕಳಿಲ್ಲದವರಗೆ ಕಾನೂನು ರೀತಿ ಮಕ್ಕಳನ್ನು ದತ್ತು ನೀಡಿ ಆನಾಥ ಮಕ್ಕಳು ಎಂಬ ಹೆಸರನ್ನು ಕಳೆಚುವ ಕೆಲಸ ನಡೆಯುತ್ತಿದೆ. ಓರ್ವ ಅನಾಥ ಯುವತಿಗೆ ಸುಸಂಸ್ಕೃತ ಮನೆಗೆ ಮದುವೆ ಮಾಡಿಕೊಡಲಾಗಿದೆ.ಮತ್ತೊಬ್ಬ ಯುವತಿ ಮದುವೆ ಪ್ರಯತ್ನ ನಡೆಯುತ್ತದೆ. ಒಟ್ಟಾರೆ ಸ್ಪೂರ್ತಿ ಸಂಸ್ಥೆ ಮಾನವೀಯ ಕೆಲಸದಲ್ಲಿ ನಿರುತರಾಗಿದ್ದರಂದ ಉಡಪಿ ಪೇಜಾವರ ಮಠದ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಮಾಜಿ ಲೋಕಾಯುಕ್ತ ವೆಂಕಟಾಚಲಯ್ಯ, ಸಂಸದ ಅನಂತ ಕುಮಾರ ಮುಂತಾದವರುಸ್ಪೂರ್ತಿ ಕೆಲಸ ನೋಡಿ ಬೆನ್ನು ತಟ್ಟಿದ್ದಾರೆ. ಶಿಕ್ಷಣ ವಂಚಿತರ ಮತ್ತು ಅನಾಥ ಮಕ್ಕಳಿಗೆ ನೆರವು ನೀಡುವವರಿಗಾಗಿ ವಿಳಾಸ :ಸ್ಪೂರ್ತಿ ಧಾಮ, ಕೆದೂರು ಅಂಚೆ, 576231 ಕುಂದಾಪುರ, ಉಡುಪಿ. ದೂರವಾಣಿ-08254 287192, 9845370674.

ಶ್ರೀಪತಿ ಹೆಗಡೆ ಹಕ್ಲಾಡಿ

0 comments:

Post a Comment