ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ಕನ್ನಡದ ಪ್ರಥಮ ಪತ್ರಿಕೆ ಮಂಗಳೂರ ಸಮಾಚಾರ. ಇದರ ಕಾಲ ಕ್ರಿ.ಶ.1843 . ಇದು ಮಂಗಳೂರಿನಲ್ಲಿ ಮೊದಲು ಪ್ರಾರಂಭಗೊಂಡಿತು.
4 ಪುಟಗಳ ಪಕ್ಷಪತ್ರಿಕೆಯಾಗಿ ಹೊರಬಂದ ಈ ಪತ್ರಿಕೆ ಮೊದಲ ಕನ್ನಡ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಇದರ ಬೆಲೆ ಆ ಸಂದರ್ಭದಲ್ಲಿ 1 ದುಡ್ಡು ಅಂದರೆ 2 ನಯಾ ಪೈಸೆಯಾಗಿತ್ತು. ಇದನ್ನು ಬಾಸೆಲ್ ಮಿಷನ್ ಎಂದೇ ಹೆಸರಾಗಿದ್ದ ಜರ್ಮನ್ ಪಾದ್ರಿಗಳು ಕ್ರಿ.ಶ.1843ರ ಜುಲೈ 1ರಂದು ಮುದ್ರಿಸಿ ಪ್ರಕಟಿಸಿದರು. ಆ ದಿನದ ನೆನಪಾಗಿ ಕನ್ನಡ ಪತ್ರಿಕಾ ದಿನ ಎಂದು ಇಂದಿಗೂ ಆಚರಿಸಲಾಗುತ್ತಿದೆ. ಮಂಗಳೂರ ಸಮಾಚಾರ ಕಲ್ಲಚ್ಚಿನಲ್ಲಿ ಮುದ್ರಿತಗೊಂಡಿತ್ತು. ರೆವ್ಹರೆಂಡ್ ಹರ್ಮನ್ ಮೊಗ್ಲಿಂಗ್ ಇದರ ಸಂಪಾದಕ ಹಾಗೂ ಪ್ರಕಾಶಕನಾಗಿದ್ದರು.
ಭಾರತದ ಮೊದಲ ಪತ್ರಿಕೆ

"ದಿ ಬೆಂಗಾಲ್ ಗೆಜೆಟ್" ಅಥವಾ "ಕಲ್ಕತ್ತಾ ಜನರಲ್ ಅಡ್ವಟೈಸರ್" ಭಾರತದ ಮೊದಲ ಪತ್ರಿಕೆ.
ಜೇಮ್ಸ್ ಅಗಸ್ಟಸ್ ಹಿಕ್ಕಿ ಎಂಬವರು ಕ್ರಿ.ಶ.29 ಜನವರಿ 1780ರಲ್ಲಿ ಕಲ್ಕತ್ತೆಯಲ್ಲಿ ಆರಂಭಿಸಿದನು. ಇದು ವಾರಪತ್ರಿಕೆಯಾಗಿತ್ತು.ರಾಜಕೀಯ, ವಾಣಿಜ್ಯ ವಿಷಯಗಳಿದ್ದವು. ಎರಡು ಹಾಳೆಯದ್ದಾಗಿತ್ತು.

ಬರಹ: ದೀಪ್ತಿ ಉಜಿರೆ.

0 comments:

Post a Comment