ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಪಡುಬಿದ್ರಿ : ಎಕ್ಸ್ಪ್ರೆಸ್ ಬಸ್ಸು ಚಾಲಕನ ಅವಾಂತರದಿಂದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಅಫಘಾತಕ್ಕೆ ಬಲಿಯಾದ ಘಟನೆ ಪಡುಬಿದ್ರಿ ಪ್ರಗತಿ ಕಾಂಪ್ಲೆಕ್ಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ 6ನೇ ಸೆಮಿಸ್ಟರ್ ಮುಗಿಸಿ ಕಟ್ಟಡ ಸಮುಚ್ಚಯದಲ್ಲಿ ಟ್ರೈನಿಯಾಗಿ ಕೆಲಸ ನಿರ್ವಹಿಸಿತ್ತಿದ್ದ ಕಿನ್ನಿಗೋಳಿ ಕೊಡೆತ್ತೂರು ಗುತ್ತು ಮನೆಯ ದಿ.ಗುಣಪಾಲ ಶೆಟ್ಟಿ-ಅರುಧತಿ ದಂಪತಿಗಳ ಪುತ್ರಿ ಪೂಜಾ ಶೆಟ್ಟಿ(20) ಮುಖ ಮತ್ತು ತಲೆಗೆ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಘಟನೆಯ ವಿವರ: ಉಡುಪಿಯಿಂದ ಮಂಗಳೂರಿಗೆ ಬರುತ್ತಿದ್ದ ಎಕ್ಸ್ಪ್ರೆಸ್ ಬಸ್ಸು ಅತೀವೇಗದಿಂದ ಲಾರಿಯೊಂದನ್ನು ಓವರ್ಟೇಕ್ ಮಾಡುವ ಭರದಲ್ಲಿ ಎದುರಲ್ಲಿ ಬರುತ್ತಿದ್ದ ಲಾರಿಗೆ ಡಿಕ್ಕಿಹೊಡೆಯುವ ಸಂದರ್ಭದಲ್ಲಿ ಲಾರಿಚಾಲಕ ಬಸ್ಸಿನಿಂದ ತಪ್ಪಿಸಿಕೊಳ್ಳಲು ಎಡಬದಿಗೆ ತಿರುಗಿಸಿದ ಪರಿಣಾಮ ರಸ್ತೆ ಬದಿ ನಿಂತಿದ್ದ ಪೂಜಾ ಶೆಟ್ಟಿ ಮತ್ತು ಆಕೆಯ ಸ್ನೇಹಿತೆ ಬಡಾ ಎರ್ಮಾಳಿನ ನಿಖಿತಾ ಶೆಟ್ಟಿಗೆ ಡಿಕ್ಕಿ ಹೊಡೆದು ಪಕ್ಕದ ಚರಂಡಿಗೆ ಪಲ್ಟಿಯಾಗಿ ಬಿದ್ದಿದೆ.ಈ ಸಂದರ್ಭ ರಸ್ತೆಗೆಸೆಯಲ್ಪಟ್ಟ ಪೂಜಾ ಶೆಟ್ಟಿ ತಲೆ ಮತ್ತು ಮುಖಕ್ಕೆ ಗಂಭೀರ ಗಾಯಗೊಂಡಿದ್ದು ಮತ್ತು ನಿಖಿತಾ ಶೆಟ್ಟಿಗೆ ತಲೆಗೆ ಗಂಭೀರ ಗಾಯಗೊಂಡಿದ್ದರು. ಅವರಿಬ್ಬರನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಪೂಜಾ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ.ನಿಖಿತಾ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ.

ವರದಿ: ಭಾಗ್ಯವಾನ್ ಮುಲ್ಕಿ

0 comments:

Post a Comment