ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಮಂಗಳೂರು: ಪ್ರತಿಯೊಂದು ಪುಸ್ತಕಕ್ಕೂ ಒಬ್ಬ ಓದುಗನಿರುತ್ತಾನೆ. ಪುರಾತನ ಗ್ರಂಥಗಳನ್ನು ಸಂರಕ್ಷಿಸಿ ಅದನ್ನು ಮುಂದಿನ ಪೀಳಿಗೆಗೆ ಲಭ್ಯವಾಗಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಗ್ರಂಥಾಲಯಗಳು ಸಮಾಜದ ಆಸ್ತಿಯಿದ್ದಂತೆ ಎಂದು ಕರ್ನಾಟಕ ಥಿಯಾಲಾಜಿಕಲ್ ಕಾಲೇಜಿನ ಸಹಾಯಕ ಗ್ರಂಥಪಾಲಕ ಬೆನೆಟ್ ಅಮಾನ್ ಹೇಳಿದರು.ಗೋವಿಂದ ದಾಸ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಪತ್ರಿಕಾ ದಿನಾಚರಣೆಯ ಅಂಗವಾಗಿ ನಗರದ ಕರ್ನಾಟಕ ಥಿಯಾಲಾಜಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಪತ್ರಾಗಾರ ಹಾಗೂ ಮುದ್ರಣಾಲಯ ವೀಕ್ಷಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಚರಿತ್ರೆಯನ್ನು ಅರುಹುವಲ್ಲಿ ಪುರಾತನ ಗ್ರಂಥ ಹಾಗೂ ಪತ್ರಿಕೆಗಳ ಪಾತ್ರ ಹಿರಿದು. ಕಲೆ ಸಂಸ್ಕೃತಿಗಳ ಕುರಿತಾದ ಸಂಶೋಧನೆಗೆ ಇವು ಅತ್ಯಂತ ಸಹಾಯಕಾರಿ. ಇಂಥಹ ಅಮೂಲ್ಯ ಗ್ರಂಥಗಳ ಸಂರಕ್ಷಣೆಗೆ ಯುವಜನತೆ ಮುಂದಾಗಬೇಕು ಆಧುನಿಕ ಮಾಧ್ಯಮಗಳ ಈ ಯುಗದಲ್ಲೂ ಮುದ್ರಣ ಮಾಧ್ಯಮ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆ. ಭವಿಷ್ಯದಲ್ಲೂ ಅದರ ಅಸ್ತಿತ್ವ ಇಷ್ಟೇ ದೃಢವಾಗಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಥಿಯಾಲಜಿ ಕಾಲೇಜಿನ ಪ್ರಧಾನ ಗ್ರಂಥಪಾಲಕ ಡಾ. ಧನರಾಜ್, ಗೋವಿಂದ ದಾಸ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಅಕ್ಷತಾ, ಉಪನ್ಯಾಸಕ ಸಚೀಂದ್ರ ಸಮಾರಂಭದಲ್ಲಿ ಉಪಸ್ಥಿತರಿದ್ದರು.

1 comments:

Anonymous said...

patrika dinaacharaneya sandesha chennagide....sandesha sandeshadalliyashte uliyade karyagathavaagali.....

Post a Comment