ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಚಿಕ್ಕಮಗಳೂರು : ಬಾಯಲ್ಲಿ ಬೆಣ್ಣೆ ಬಗಲಲ್ಲಿ ದೊಣ್ಣೆ! ಗೋಮಾಳ ಪರಬಾರೆ ಮತ್ತು ಅತಿಕ್ರಮ ಕಾನೂನು ರೀತಿ ಅಪರಾಧ ಅಂತ ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ರಾಜ್ಯ ಸರಕಾರ ನೂರಾರು ಎಕರೆ ಗೋಮಾಳಕ್ಕೆ ಎಳ್ಳುನೀರು ಬಿಟ್ಟಿದೆ! ಗೋಮಾಂಸ ಪ್ರಿಯ ಆಂಗ್ಲರೇ ಭಾರತದಲ್ಲಿ ಗೋವುಗಳ ಮೇವಿಗಾಗಿ ಪ್ರತ್ಯೇಕ ಸ್ಥಳ ಗುರುತಿಸಿ ಮೀಸಲಿಟ್ಟರು. ಗೋವುಗಳನ್ನು ದೇವರೆಂದು ಪೂಜಿಸುವ ಭಾರತೀಯರು ಗೋವುಗಳಿಗೆ ಕಾದಿರಿಸಿದ ಜಾಗವನ್ನು ಕಬಳಿಸುವ ಮೂಲಕ ಗೋ ಪ್ರೀತಿ ಮೆರೆದಿದ್ದಾರೆ! ತರಾತುರಿಯಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರಲು ಮುಂದಾದ ರಾಜ್ಯ ಸರಕಾರ ಗೋವುಗಳ ಬಾಯಿಗೆ ಮಣ್ಣು ಹಾಕಲು ಮುಂದಾಗಿದ್ದು ವಿಧಿವಿಲಾಸ.ಪಕ್ಕಾ ಗೋಮಾಳ
ಚಿಕ್ಕಮಗಳೂರಿನ ಕೂಗಳತೆಯ ಅಂತರದಲ್ಲಿರುವ ಗೌಡಗೆರೆ ಪಕ್ಕಾ ಗೋಮಾಳ ಎಂಬುದನ್ನು ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿದ್ದ ನವೀನ್ರಾಜ್ ಸಿಂಗ್ ಅವರೇ ದೃಢಪಡಿಸಿದ್ದಾರೆ. ಗೌಡಗೆರೆ ಗೋಮಾಳ ಸುಮಾರು ನೂರು ಎಕರೆಗೂ ಅಧಿಕ ವ್ಯಾಪ್ತಿ ಹೊಂದಿದೆ. ಸ್ಥಳೀಯ ನಿವಾಸಿಗಳು ದನ, ಕುರುಗಳಿಗೆ ಗೋಮಾಳ ಮೇವಾಶ್ರಿತ ತಾಣವಾಗಿತ್ತು. ಸಮೃದ್ಧ ಹುಲ್ಲುಗಾವಲಲ್ಲಿ ಯತೇಚ್ಛ ಮೇವು ಮತ್ತು ನೀರು ಸಿಗುತ್ತಿದ್ದರಿಂದ ಗೌಡಗೆರೆ ಸುತ್ತಮುತ್ತಲಿನ ದನ, ಕರುಗಳ ಜೊತೆ ಸಸ್ಯಹಾರಿ ಕಾಡು ಪ್ರಾಣಿಗಳು ಇದೇ ಹುಲ್ಲುಗಾವಲನ್ನು ಆಶ್ರಯಿಸಿದ್ದವು. ಕಳೆದ ಎರಡು ವರ್ಷದಿಂದ ಹಲ್ಲುಗಾವಲಿಗೆ ಬೇಲಿ ಬಿದ್ದಿದೆ. ಯತೇಚ್ಛ ಮೇವು ಸಿಗುತ್ತಿದ್ದ ಗೋಮಾಳ ಇದ್ದರೂ ದನಕರುಗಳ ಬಾಯಿಗೆ ಮಣ್ಣುಬಿದ್ದಿದೆ.

ಯಾಕಾಗಿ ಹೀಗೆ ?
ಕಳೆದ ಎರಡು ವರ್ಷದ ಚಿಕ್ಕಮಗಳೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದ ನವೀನ್ರಾಜ್ ಸಿಂಗ್ ಚಿಕ್ಕಮಗಳೂರು ಪ್ರವಾಸಿ ತಾಣಗಳ ವೀಕ್ಷಣೆಗೆ ಹೆಲಿಕಾಪ್ಟರ್ ಸೌಲಭ್ಯ ನೀಡುವ ಇರಾದೆಗೆ ಗೌಡಗೆರೆ ಗೋಮಾಳ ಎಕ್ಕುಟ್ಟಿಹೋಗಿದೆ. ಉದ್ದೇಶವೇನೋ ಒಳ್ಳೆಯದೇ ಆದರೆ ಅದಕ್ಕೆ ಗೋಮಾಳವೇ ಬೇಕಿತ್ತ ಎಂಬುದು ಸ್ಥಳೀಯರ ಪ್ರಶ್ನೆ. ಗೌಡಗೆರೆ ಪ್ರದೇಶದಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಹೆಲಿಪ್ಯಾಡ್ ನಿರ್ಮಿಸಲು ಜಿಲ್ಲಾಡಳಿತ ಮುಂದಾಗಿತ್ತು.
ಗೌಡಗೆರೆ ಪ್ರದೇಶವನ್ನು ಜಿಲ್ಲಾಡಳಿತ ಗುರುತಿಸಿ ಸರಕಾರಕ್ಕೆ ಕಳುಹಿಸಿತ್ತು. ಸರಕಾರ ಜಿಲ್ಲಾಡಳಿತದ ಬೇಡಿಕೆಗೆ ಅಸ್ತು ಎಂದಿತು. ಸುಮಾರು 20 ಲಕ್ಷ ರೂ. ಬಿಡುಗಡೆ ಮಾಡಿತು. 10 ಲಕ್ಷ ರೂ. ವೆಚ್ಚದಲ್ಲಿ ಶೌಚಾಲಯ ಮತ್ತು ಇತರೆ ಕಟ್ಟಡಗಳನ್ನು ಗೌಡಗೆರೆಯಲ್ಲಿ ನಿರ್ಮಿಲಾಯಿತು. ನಂತರ ಗೌಡಗೆರೆ ಏರ್ಕ್ರಿಫ್ಟ್ ನಲ್ಲಿ ಹೆಲಿಕಾಪ್ಟರ್ಗಳು ಬಂದು ಇಳಿಯಲು ಆರಂಭಿಸಿತು. ಗೌಡಗೆರೆ ಏರ್ಕ್ರಿಫ್ಟ್ನಲ್ಲಿ ಹೆಲಿಕಾಪ್ಟರ್ಗಳು ಪ್ರವಾಸಿಗರಿಗಾಗಿ ಸದಾ ಜ್ಜಾಗಿರುತ್ತಿತ್ತು. ಮತ್ತೆ ಏನಾಯ್ತೋ ಏನೋ ಗೊತ್ತಿಲ್ಲ. ಹೆಲಿಕಾಪ್ಟರ್ಗಳು ಇಳಿಯೋದು ನಿಂತಿತು. ಪ್ರವಾಸಿಗರಿಗಾಗಿ ಕಾದು ನಿಲ್ಲುತ್ತಿತ್ತ ಹೆಲಿಕಾಪ್ಟರ್ಗಳು ಗೌಡಗೆರೆಯಿಂದ ಕಣ್ಮರೆಯಾಯಿತು. ಹಾಗಾಗಿ ಗೌಡಗೆರೆ ಗೋಮಾಳ ಮತ್ತೊಮ್ಮೆ ಗೋವುಗಳ ಮೇವಾಶ್ರಿತ ತಾಣವಾಗಿ ಬದಲಾಯಿತು. ಗೌಡಗೆರೆ ಹೆಲಿಪ್ಯಾಡ್ನಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ ಕಟ್ಟಡ ಮಣ್ಣು ಮುಕ್ಕಿತು ಹಾಕಿದ ನಾಮಫಲಕಗಳು ತುಕ್ಕಿಹಿಡಿದು ಬೋರಲು ಬಿತ್ತು. ಇದರಲ್ಲಿ ಒಂದು ವಿಶೇಷತೆಯಿದೆ. ಗೌಡಗೆರೆ ಕಟ್ಟಡಗಳ ಉದ್ಘಾಟನೆಯನ್ನು ಜನಪ್ರತಿನಿಧಿಗಳಿಲ್ಲದೆ ನಡೆಯಿತು.

ಮತ್ತೆ ಸುದ್ದಿಯಾಗುತ್ತದೆ

ಆರಂಭದಲ್ಲಿ ಹೆಲಿಕಾಪ್ಟರ್ ಸದ್ದಿನಿಂದ ಬೆಚ್ಚಿದ ಗೌಡಗೆರೆ ನಾಗರಿಕರಿಗೆ ಹೆಲಿಕಾಪ್ಟರ್ ಸದ್ದಡಗಿದ್ದರಿಂದ ಸ್ವಲ್ಪ ನೆಮ್ಮದಿಯಲ್ಲಿದ್ದರು. ನಿಶ್ಚಿಂತೆಯಿಂದ ತಮ್ಮ ಜಾನುವಾರುಗಳನ್ನು ಗೋಮಾಳಕ್ಕೆ ಬಿಟ್ಟು ಹೊಟ್ಟೆ ತುಂಬಾ ಹುಲ್ಲು ತಿನ್ನಿಸುತ್ತಿದ್ದರು. ಈಗ ಮತ್ತೊಮ್ಮೆ ಗೋಮಾಳ ಸುದ್ದಿಯಾಗುತ್ತಿರುವುದರಿಮದ ನಾಗರಿಕರು ಬೆಚ್ಚಿದ್ದಾರೆ. ಚಿಕ್ಕಮಗಳೂರು ಗೋಮಳದಲ್ಲಿರುವ ಏರ್ಕ್ರಿಫ್ಟ್ ಮೇಲ್ದರ್ಜೆಗೆ ಏರಿಸುವಂತೆ ಸರಕಾರಕ್ಕೆ ಜಿಲ್ಲಾಡಳಿತ ಬೇಡಿಕೆಯಿಟ್ಟಿದೆ. ಈಗಿರುವ ಸ್ಥಳದೊಟ್ಟಿಗೆ ಇನ್ನೂ 14 ಎಕರೆ ಹೆಚ್ಚಿನ ಸ್ಥಳಕ್ಕೆ ಬೇಡಿಕೆಯಿಟ್ಟಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಚ್ಚಿನ ಪ್ರವಾಸಿತಾಣಗಳಿದ್ದು ಅವುಗಳ ಅಭಿವೃದ್ಧಿಗೆ ಏರ್ಕ್ರಿಫ್ಟ್ ಮೇಲ್ದರ್ಜೆಗೆ ಏರಿಸಬೇಕೆಂಬುದು ಮೂಲತಾ ವಾದ. ಸಣ್ಣ ವಿಮಾನಗಳು ಚಿಕ್ಕಮಗಳೂರಿಗೆ ಬರೋದ್ರಿಂದ ಹೆಚ್ಚಿನ ದೇಶ ಮತ್ತು ವಿದೇಶಿ ಪ್ರವಾಸಿಗರನ್ನು ಸೆಳೆಯಬಹುದು ಎಂದು ಜಿಲ್ಲಾಡಳಿತದ ಅದೇ ಹಳೇ ರಾಗ ಹಾಡಿದೆ. ಅದಕ್ಕಾಗಿ ಚಿಕ್ಕಮಗಳೂರು ಗೌಡಗಡೆರೆ ಏರ್ಕ್ರಫ್ಟ್ ಮೇಲ್ದರ್ಜೆಗೆ ಏರಿಸಬೇಕು. ಶೃಂಗೇರಿ, ಕೊಪ್ಪ, ಹೊರನಾಡು, ಕೆಮ್ಮಣ್ಣುಗುಂಡಿಯಲ್ಲಿ ಹೆಲಿಪ್ಯಾಡ್ ನಿರ್ಮಾಣಕ್ಕೆ 5 ಎಕರೆ ಸ್ಥಳ ನೀಡಬೇಕು ಎನ್ನುವ ಬೇಡಿಕೆಯೂ ಇದರೊಟ್ಟಿಗಿದೆ. ಹೊರನಾಡು, ಕಳಸ, ಕೆಮ್ಮಣ್ಣುಗುಂಡಿ ಮುಂತಾದ ಕಡೆ ಹೆಲಿಪ್ಯಾಡ್ ನಿರ್ಮಾಣಕ್ಕೆ ಸ್ಥಳದ ಅಭಾವದಿಂದ ನಿಂತಿದೆ. ಶೃಂಗೇರಿ ಮತ್ತು ಚಿಕ್ಕಮಗಳೂರಿನಲ್ಲಿ ಹೆಲಿಪ್ಯಾಡ್ ನಿರ್ನಾಣಕ್ಕೆ ಸರಕಾರ ಅಸ್ತು ಎನ್ನುವ ಜೊತೆಗೆ 20 ಲಕ್ಷದ ಇಡಿಗಂಟು ಬಿಡುಗಡೆ ಮಾಡಿದೆ.

ಸರಕಾರಕ್ಕೆ ಬೇಡಿಕೆ ಪಟ್ಟಿ

ಚಿಕ್ಕಮಗಳೂರು ಏರ್ಕ್ರಿಫ್ಟ್ ಮೇಲ್ದರ್ಜೆಗೆ ಏರಿಸುವ ಸಲುವಾಗಿ ಕರ್ನಾಟಕ ಹೌಸಿಂಗ್ ಬೋರ್ಡ್ ಸರ್ವೇ ಮಾಡಿ ಸರಕಾರಕ್ಕೆ ವರದಿ ಸಲ್ಲಿಸಿದೆ. ಸಚಿವ ಸಂಪುಟ ಓಕೆ ಅಂದರಾಯಿತು ಕೆಲಸಕ್ಕೆ ಚಾಲನೆ ಸಿಗುತ್ತದೆ. ಏರ್ಕ್ರಿಫ್ಟ್ ಮೇಲ್ದರ್ಜೆಗೆ ಏರಿಸಲು 3 ಕೊಟಿ ರೂ. ಹೆಚ್ಚಿನ ಅನುದಾನಕ್ಕೆ ಬೇಡಿಕೆ ಸಲ್ಲಿಸಿದೆ.

ಸ್ಥಳೀಯರು ಹೇಗೆ ಹೇಳುತ್ತಾರೆ

ಅಭಿವೃದ್ಧಿ ಆಗಬೇಕು ಅಂತಾದರೆ ಎಲ್ಲವನ್ನೂ ಉಳಿಸಿಕೊಂಡು ಮಾಡಲು ಸಾಧ್ಯವಿಲ್ಲ. ಹಾಗಾಗಿ ಕೆಲವನ್ನು ಕಳೆದುಕೊಳ್ಳುವ ಮೂಲಕ ಮತ್ತೆ ಕೆಲವನ್ನು ಗಳಿಸಬೇಕಾಗುತ್ತದೆ. ತಮ್ಮ ಗೋವುಗಳಿಗೆ ಮೇವು ತಪ್ಪಿದ ಬಗ್ಗೆ ಬೇಜಾರಿದೆ. ಆದರೆ ಈಗಾಗಲೇ ಗೋಮಾಳದಲ್ಲಿ ಹೆಲಿಕಾಫ್ಟರ್ ಇಳಿಸಲು ಜಾಗವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಸಕ್ತ ಈ ಪ್ರದೇಶ ಹಾಳುಕೊಂಪೆಯಾಗಿದೆ. ಇತ್ಲಗೆ ಕಿರುವಿಮಾನ ನಿಲ್ದನವೂ ಇಲ್ಲ ಅತ್ಲಾಗೆ ಗೋಮಾಳವೂ ಇಲ್ಲ ಎಂಬಹಾಗಾಗಿದೆ. ಈಗಿರುವ ಸ್ಥಳದಲ್ಲಿ ಏರ್ಕ್ರಿಫ್ಟ್ ಅಭಿವೃದ್ಧಿ ಪಡಿಸಬಹುದು. ಮತ್ತೆ ಸ್ಥಳಬೇಕು ಎನ್ನೋದು ಯಾವ ನ್ಯಾಯ. ನಾವೂ ಕೂಡಾ ಗೋಮಾಳ ಹೋದರು ಊರು ಅಭಿವೃದ್ಧಿ ಆಗುತ್ತೆ ಅಂತ ಸುಮ್ಮನಿದ್ದೇವೆ. ಏರ್ಕ್ರಿಫ್ಟ್ ನಾಯಿಮೊಲೆ ಹಾಲಾಗಲು ಬಿಡೋದಿಲ್ಲ. ಅಭಿವೃದ್ಧಿ ಪಡಿಸದಿದ್ದರೆ ಹೋರಾಟ ಅನಿವಾರ್ಯ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

ವಿಶೇಷ ವರದಿ : ಶ್ರೀಪತಿ ಹೆಗಡೆ ಹಕ್ಲಾಡಿ

0 comments:

Post a Comment