ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಆಟ - ಅವಲೋಕನ

* ಸ್ಪೈನ್ ಬಂಬಾಟ್! ಹಾಲೆಂಡ್ ಔಟ್! ಆಟ ಸಖ್ಖತ್ ಹಾಟ್ ಮಗಾ!

* ಹಾಲೆಂಡ್ ಆಟಗಾರರು ಬ್ರೆಝಿಲ್ ವಿರುದ್ಧ ಆಡಿದಂತೆಯೇ ಇಲ್ಲೂ ಆಡಿದರು. ಹೆಜ್ಜೆಹೆಜ್ಜೆಗೂ ಎದುರಾಳಿಯನ್ನು ನೆಲಕ್ಕುರುಳಿಸುವುದೇ ಇವರ ಗುರಿಯಾಗಿತ್ತು! ಪದೇ ಪದೇ ರೆಫ್ರಿಯ ಬಳಿ ಕ್ಯಾತೆ ತೆಗೆಯುವುದು ಇವರ ತಂತ್ರವಾಗಿತ್ತು! ಚೆಂಡಾಟದ ಜೊತೆಗೆ ಇವರು ಭಂಡಾಟವನ್ನೂ ಚೆನ್ನಾಗಿ ಪ್ರದರ್ಶಿಸಿದರು. ಸ್ಪೈನ್ ಆಟಗಾರರೂ ಕೆಲವೊಮ್ಮೆ ಕೆಡೆದಾಟವೆಂಬ ತಿರುಗೇಟು ನೀಡಬೇಕಾಯಿತು.

* ಪರಿಣಾಮ, ಆಟದಲ್ಲಿ ದಂಡಿಯಾಗಿ ಹಳದಿ ಕಾರ್ಡುಗಳು ! ಸ್ಪೈನ್ಗೆ 5, ಹಾಲೆಂಡ್ಗೆ 9, ಒಟ್ಟು 14 ಹಳದಿ ಕಾರ್ಡುಗಳು! ಇದು ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಹೊಸ ದಾಖಲೆ!

* ಹಾಲೆಂಡ್ನ ಜಾನ್ ಹೆಯ್ಟಿಂಗಗೆ ಎರಡು ಹಳದಿಯ ಪ್ರತಿಫಲವಾಗಿ ಕೆಂಪು ಕಾರ್ಡುಗಳು. ಸ್ಪೈನ್ ಆಟಗಾರರ ಪಾಲಿಗೆ ಇವನು ಹೆಟ್ಟಿಂಗ್! ಸ್ಪೈನ್ ಅಭಿಮಾನಿಗಳು (ಮತ್ತು ಹಾಲೆಂಡ್ ಅಭಿಮಾನಿಗಳೂ) ಇವನನ್ನು ಹೇಟಿಂಗ್!
* ಹಾಲೆಂಡ್ನ ಮಿಡ್ಫೀಲ್ಡರ್ ನಿಗೆಲ್ ಡಿ ಜಾಂಗ್ ಸ್ಪೈನ್ನ ಕ್ಸಾಬಿ ಅಲೋನ್ಸೊ ಎದೆಗೆ ಬೂಟುಗಾಲಿನಿಂದ ಒದ್ದೂ ಕೂಡ ಕೆಂಪು ಕಾರ್ಡುಗಳು ಶಿಕ್ಷೆ ಅನುಭವಿಸದೆ ಪಾರಾದ! ಜಂಗ್ ಮೇ ನಿಕ್ಲಾ ಸೇಫ್, ನಿಗೆಲ್ ಜಾಂಗ್, ಉಫ್!

* ಹಾಲೆಂಡ್ನ ಮಾರ್ಕ್ ವ್ಯಾನ್ ಬೊಮ್ಮೆಲ್ ಆಟದಲ್ಲಿ ಫೌಲ್ ಮಾಡುತ್ತಿದ್ದುದು, ಆಟದುದ್ದಕ್ಕೂ ಉಡಾಫೆ ಪ್ರದರ್ಶಿಸುತ್ತಿದ್ದು , ಪದೇ ಪದೇ ರೆಫ್ರಿಯ ತಲೆ ತಿನ್ನುತ್ತಿದ್ದುದು ಇದೆಲ್ಲ ನೋಡಲು ಅಸಹ್ಯವೆನ್ನಿಸುತ್ತಿತ್ತು. ಇಷ್ಟಾದರೂ ರೆಫ್ರಿ ಮಹಾಶಯ ಈತನಿಗೆ ಕೆಂಪು ಕಾರ್ಡು ತೋರಿಸದಿದ್ದುದು ಆಶ್ಚರ್ಯ! ರೆಫ್ರಿ ಹೌವಾರ್ಡ್ ವೆಬ್ನ ಸಹನೆ ದೊಡ್ಡದು. ಹೌಜ್ಹಾಟ್ ಹೌವಾರ್ಡ್ !

* ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ಒಂದನೇ ಸ್ಥಾನದಲ್ಲಿರುವ ಬ್ರೆಝಿಲ್ಲನ್ನು ಬಿಟ್ಟು ಎರಡನೇ ಸ್ಥಾನದಲ್ಲಿರುವ ಸ್ಪೈನ್ ಈ ಪಂದ್ಯಾವಳಿಯಲ್ಲಿ ಒಂದನೇ ಸ್ಥಾನ ಗಳಿಸಿದರೆ ಶ್ರೇಯಾಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಪೋರ್ಚು ಗಲ್ಲನ್ನು ಬಿಟ್ಟು ನಾಲ್ಕನೇ ಸ್ಥಾನದಲ್ಲಿರುವ ಹಾಲೆಂಡ್ ಈ ಪಂದ್ಯಾವಳಿಯಲ್ಲಿ ಎರಡನೇ ಸ್ಥಾನ ಗಳಿಸಿತು ಮತ್ತು ಶ್ರೇಯಾಂಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಇಟಲಿಯನ್ನು ಬಿಟ್ಟು ಆರನೇ ಸ್ಥಾನದಲ್ಲಿರುವ ಜರ್ಮನಿ ಈ ಪಂದ್ಯಾವಳಿಯಲ್ಲಿ ಮೂರನೇ ಸ್ಥಾನ ಗಳಿಸಿತು! ಹೇಗಿದೆ ಆರಾ ಶಾಸ್ತ್ರಿಯ ಸಂಖ್ಯಾಶಾಸ್ತ್ರ!

ಎಚ್. ಆನಂದರಾಮ ಶಾಸ್ತ್ರೀ

0 comments:

Post a Comment