ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಚಿಕ್ಕಮಗಳೂರು : ಮೂಡಿಗೆರೆಯಲ್ಲಿ ಕಾಫಿ ಜೊತೆ ಏಲಕ್ಕಿಕಂಪು ಗಾಳಿಯಲ್ಲಿ ಸೇರಿಕೊಂಡಿದೆ. ಸುಮಾರು ಹದಿನೈದು ಎಕರೆ ಪ್ರದೇಶದಲ್ಲಿ ಏಲಕ್ಕಿ ಬೆಳೆದ ರಾಜಣ್ಣ ತಮ್ಮ ಲಕ್ ಪರೀಕ್ಷೆಗೆ ಒಡ್ಡಿಕೊಂಡಿದ್ದಾರೆ. ರಾಜಣ್ಣ ಅವರ ಪರಿಶ್ರಮಕ್ಕೆ ಭೂಮಿ ತಾಯಿ ಒಲಿದಿದ್ದಾಳೆ. ಇಂದಿನ ದಿನಗಳಲ್ಲಿ ಯುವಕರಿಗೆ ಕೃಷಿ ನಗಣ್ಯ. ಸಗಣಿ, ಗಂಜಳ ಅಂದ್ರೆ ಛೀ ವ್ಹಾಕ್. ಕೈಗೆ ಮಣ್ಣು ಮೆತ್ತಿಕೊಂಡರೆ ಅಲರ್ಜಿ. ಕೈಕೆಸರಾದರೆ ಬಾಯಿಮೊಸರು ಎಂಬ ಮಾತು ಯುವಕರಿಗೆ ಪುಸ್ತಕದ ಬದನೇಕಾಯಿ. ನಾಲ್ಕಕ್ಷರ ಕಲಿತರೆ ಸಾಕು ವೈಟ್ ಕಾಲರ್ ಜಾಬ್ ಬೇಕು.ಸುಮುದ್ರದ ಅಲೆ ಲೆಕ್ಕ ಮಾಡೋದಾದ್ರೂ ಅಡ್ಡಿಯಿಲ್ಲ ಕೆಲಸಾಂತಾದ್ರೆ ಯುವಕರು ದಿಲ್ಖುಷ್. ಹಾಗಾಗಿ ಯುವಕರು ಕೃಷಿಯಿಂದ ದೂರ ಉಳಿಯುತ್ತಿದ್ದಾರೆ. ಶಿಕ್ಷಣ ಪಡೆದವರೆಲ್ಲಾ ಕೆಲಸ ಅರಸಿ ಮಹಾನಗರಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.ಆದರೆ ಇಲ್ಲೊಬ್ಬರು ಪದವೀಧರ ಯುವಕ ಆಧುನಿಕ ಕೃಷಿಯಲ್ಲಿ ತೊಡಗಿ ಕೊಂಡಿದ್ದಾರೆ. ಕೈ ಕೆಸರಾದರೆ ಬಾಯಿ ಮೊಸರು ಎಂಬುದನ್ನು ಅರ್ಥೈಸಿಕೊಂಡಿದ್ದಾರೆ.ಅಷ್ಟೇ ಏಕೆ ಮಲೆನಾಡಿನಿಂದ ಮರೆಯಾಗುತ್ತಿರುವ ಏಲಕ್ಕಿ ಬೆಳೆಯನ್ನು ಆಧುನಿಕ ತಂತ್ರಜ್ಞಾನ ಅಳವಡಿಸಿ ಬೆಳೆಯುವುದರ ಮೂಲಕ ಇತರೇ ಕೃಷಿಕರನ್ನು ಏಲಕ್ಕಿ ಬೆಳೆಯತ್ತ ವಾಲಿಕೊಳ್ಳುವಂತೆ ಮಾಡುತ್ತಿದ್ದಾರೆ.
ಪ್ರಮುಖ ಸಾಂಬಾರ ಪದಾರ್ಥಗಳಲ್ಲಿ ಏಲಕ್ಕಿ ಕೂಡಾ ಒಂದು. ಮಲೆನಾಡು ಏಲಕ್ಕೆ ಬೆಳೆಗೆ ಹೇಳಿಮಾಡಿಸಿದ ಪ್ರದೇಶ. ಮಲೆನಾಡಿಗರು ಏಲಕ್ಕಿಯನ್ನು ಅಡಿಕೆ ತೋಟದಲ್ಲಿ ಬೆಳೆಯೋದುಂಟು. ಅಡಿಕೆ ತೋಟದಲ್ಲಿ ಮೆಣಸಿನೊಟ್ಟಿಗೆ ಏಲಕ್ಕಿಯೂ ಇರಲಿ ಮನೆ ಖರ್ಚಿಗಾಗುತ್ತೆ ಎಂಬ ಉದ್ದೇಶದಲ್ಲಿ ಬೆಳೆಯಲಾಗುತ್ತಿತ್ತು. ನಂತರ ದಿನಗಳಲ್ಲಿ ಏಲಕ್ಕಿಗೆ ಚಿನ್ನದ ರೇಟು ಬಂದ ಕಾರಣ ಏಲಕ್ಕ್ಕಿ ಬೆಳಗೆ ರೈತರು ಮನಸ್ಸು
ಮಾಡಿದರೂ ಏಲಕ್ಕಿಯನ್ನೇ ವೃತ್ತ ಬೆಳೆಯಾಗಿ ಬೆಳೆಯಲಿಲ್ಲ ಎಂಬುದು ವಿಶೇಷ. ರಾಜಣ್ಣ ಈ ಮಾತಿಗೆ ತದ್ವಿರುದ್ಧ್ದ. ಏಲಕ್ಕಿ ಬೆಳೆಗೆ ಇವರು ಪ್ರಥಮ ಆಧ್ಯತೆ ನೀಡಿದ್ದಾರೆ. ಮತ್ತು ಏಲಕ್ಕಿ ಇವರ ಆರ್ಥಿಕ ಮೂಲವೂ ಹೌದು. ಅಲ್ಲೊಬ್ಬರು, ಇಲ್ಲೊಬ್ಬರು ಏಲಕ್ಕಿ ಕೃಷಿಗೆ ಹೆಚ್ಚಿನ ಆಸಕ್ತಿ ವಹಿಸಿದ್ದರೂ, ಕೂಲಿಯಾಳುಗಳ ಸಮಸ್ಯೆ ಮತ್ತು ಹವಾಮಾನದ ವೈಪರೀತ್ಯ, ಮಾರುಕಟ್ಟೆಯ ಸಮಸ್ಯೆಗೆ ಬೇಸತ್ತು ಸಾಕಷ್ಟು ಮಂದಿ ಏಲಕ್ಕಿ ಕೃಷಿಯಿಂದ ದೂರ ಸರಿದಿದ್ದಾರೆ. ಆದರೆ ಇಂಥಹ ಪರಿಸ್ಥಿತಿಯಲ್ಲಿ ನೂತನ ಆವಿಷ್ಕಾರದ ಜೊತೆಗೆ ಲಾಭದಾಯಕ ಏಲಕ್ಕಿಯನ್ನು ಬೆಳೆಯುವುದು ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟವರೇ ಯುವಕ ಎ.ಆರ್. ರಾಜಣ್ಣ. ಯಾರಸ ಸಹಕಾರ ಸಹಾಯಕ್ಕೂ ಕಾಯತ್ತಾ ಕೂರದೆ ಕೃಷಿಯನ್ನು ಕಾಯಕವಾಗಿ ಮಾಡಿಕೊಂಡಿದ್ದರೆ.

ಬಿ.ಎ.ಪದವೀಧರರು : ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕ್ ಕೆಂಬತ್ತಮಕ್ಕಿಯ ಎ.ಆರ್. ರಾಜಣ್ಣ. ಬಿ.ಎ. ಪದವೀಧರರು. ನಾನೊಬ್ಬ ಪದವೀಧರ ಎಂಬ ಹಮ್ಮಿಗೆ ಬಿದ್ದು ರಾಜಣ್ಣ ಕೆಲಸಕ್ಕಾಗಿ ನಗರಗಳತ್ತ ಮುಖಮಾಡಿಲಿಲ್ಲ.ತಮ್ಮ ವಂಶಸ್ಥರು ನೆಚ್ಚಕೊಂಡ ಏಲಕ್ಕಿ ಬೆಳೆ ಉಳಿಸಿ ಬೆಳೆಸಿದರು. ತಮ್ಮಲ್ಲಿರುವ ಸುಮಾರು 15 ಎಕರೆ ಜಾಗದಲ್ಲಿ ಏಲಕ್ಕಿ ಬೆಳೆಯಿದೆ. ಲಕ್ಷಾಂತರ ಬೆಲೆಯ ಹೆಡ್ ಯುನಿಟ್ ಹಾಗೂ ಇಂಜೆಕ್ಟರ್ನ ಮೂಲಕ ಸಮಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಬಳಸಿ ಏಲಕ್ಕಿ ಬೆಳಯುತ್ತಿದ್ದಾರೆ ರಾಜಣ್ಣ. ರಾಜಣ್ಣ ಆರಂಭದಲ್ಲಿ ಸ್ಥಳೀಯ ತಳಿ ಬಳಸಿ ಏಳಕ್ಕಿ ಕೃಷಿ ಮಾಡುತ್ತಿದ್ದರು. ಕಳೆದ ಆರು ವರ್ಷಗಳಿಂದ ಕೇರಳದ ನೆಲ್ಯಾಯಿಣಿ ತಳಿ ಬಳಸಿ ಏಲಕ್ಕಿ ಕೃಷಿ ಮಾಡುತ್ತಿದ್ದಾರೆ. ಪ್ರಸಕ್ತ ಕಾಲಘಟ್ಟದಲ್ಲಿ ನೂತನ ಆವಿಷ್ಕಾರದ ಎಮ್.ಎಚ್.18 ಮತ್ತು ಎಮ್.ಎಚ್. 26 ತಳಿ ಮೂಲಕ ಏಲಕ್ಕಿ ಕೃಷಿ ಆರಂಭಿಸಿದ್ದಾರೆ. ಮಾರುಕಟ್ಟೆಯಲ್ಲಿ ಏಲಕ್ಕಿ ಕೆ.ಜಿ.ಜಿ.1000ಕ್ಕೂ ಅಧಿಕ ಬೆಲೆಗೆ ಮಾರಾಟವಾಗುತ್ತಿರುವುರಿಂದ ರಾಜಣ್ಣ ಹಿಪ್ಪ್ಹುರ್ರೇ..

ರಾಷ್ಟ್ರ ಪ್ರಶಸ್ತಿ ಬಂತು :ಆರಂಭದಿಂದಲೂ ರಾಜಣ್ಣ ಅವರಿಗೆ
ಏಲಕ್ಕಿ ಬೆಳೆಯ ಬಗ್ಗೆ ಎಲ್ಲಿಲ್ಲದ ಆಸಕ್ತಿ. ತಮ್ಮಲ್ಲಿ ಲಭ್ಯವಿರುವ ಜಾಗದಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಉತ್ತಮ ತಳಿಯ ಏಲಕ್ಕಿ ಬೆಳೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜಾಗದಲ್ಲಿ ಏಲಕ್ಕಿ ಬೆಳೆಸುವ ಯೋಜನೆ ಹಾಕಿಕೊಂಡಿದ್ದಾರೆ. ಲಾಭದಾಯಕವಾಗಿ ಈ ಕೃಷಿಯನ್ನು ಮಾಡುವುದರ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ರಾಜಣ್ಣ ಅವರ ಸಾಧನೆಗೆ 2007ರಲ್ಲಿ ರಾಷ್ಟ್ರಪ್ರಶಸ್ತಿ ಸಿಕ್ಕಿದೆ. ರಾಜಣ್ಣ ಅವರ ಈ ಆಧುನಿಕ ಕೃಷಿಗೆ ಮನೆಯವರು ಕೈಸೇರಿದೆ. ಸಂಕಷ್ಟಗಳಿಂದ ಬೇಸತ್ತ ಮಲೆನಾಡಿನ ಅನೇಕರು ಏಲಕ್ಕಿ ಬೆಳೆಗೆ ತಿಲಾಂಜಲಿ ಇಟ್ಟಿದ್ದಾರೆ. ಇಂತಹ ಕಾಲಘಟ್ಟದಲ್ಲಿಯೇ ಏಲಕ್ಕಿಯನ್ನು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಬೆಳೆಯುವುದರ ಮೂಲಕ ಏಲಕ್ಕಿ ಬೆಳೆಯಲ್ಲಿ ರಾಜಣ್ಣ ಸೈ ಎನಿಸಿಕೊಂಡಿದ್ದಾರೆ. ಮಾತ್ರವಲ್ಲದೇ ಪದವೀಧರರಾಗಿದ್ದರೂಕೂಡ ಯಾವುದೇ ಅಳುಕಿಲ್ಲದೇ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಎ.ಆರ್.ರಾಜಣ್ಣ ಇತರರಿಗೆ ಮಾದರಿ.


ಶ್ರೀಪತಿ ಹೆಗಡೆ ಹಕ್ಲಾಡಿ

2 comments:

kumar said...

Hi,

i am kumar from bangalore

i need some more information about types and also where i will get the best plants of elakki

my details

kumar 9342321179
pls help me regarding this

kumar said...

Hi

i am kumar from bangalore.
i need some more informations and grafts and plants

pls help me regarding informations

Post a Comment