ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಉಡುಪಿ :ಕೊಂಚ `ರಿಲ್ಯಾಕ್ಸ್' ನಂತರ ವರುಣ ದೇವರ ಪುನರಾಗಮನವಾಗಿದೆ. ಮಲೆನಾಡು ಮತ್ತು ಕರಾವಳಿ ತೀರದಲ್ಲಿ ಮಳೆಯ ಹೋರು ಜೋರಾಗಿದೆ. ಘಟ್ಟದಲ್ಲಿ ಮಳೆ ಸುರಿಯುತ್ತಿರುವುದರಿಂದ ಪ್ರಮುಖ ನದಿಗಳ ನೀರು ಕೆಂಬಣ್ಣಕ್ಕೆ ತಿರುಗಿದೆ. ಈಗ ಎಲ್ಲಿ ನೋಡಿದರೂ ನೀರಿನದ್ದೇ ಒಡ್ಡೋಲಗ. ಸಮುದ್ರದ ಅಬ್ಬರ, ಸೌಪರ್ಣಿಕಾ, ಚಕ್ರಾ, ಸ್ವರ್ಣಾ ಮತ್ತು ವಾರಾಹಿ ಹಾಗೂ ನೇತ್ರಾವತಿ ಒಡಲು ತುಂಬಿ ಹರಿಯುತ್ತಿದೆ. ಕಳೆದ ಮೂರು ದಿನದಿಂದ ಮಳೆ ಸುರಿಯುತ್ತಿರುಮದರಿಂದ ಪ್ರಮುಖ ಜಲಾಶಯಗಳ ನೀರಿನ ಹರಿವು ಹೆಚ್ಚಿದೆ. ಮಳೆಯ ಪುನರಾಗಮನದಿಂದ ರೈತರ ಮೋಗದಲ್ಲಿ ಸಂತಸ ಹುಟ್ಟಿಸಿದೆ. ಸಮುದ್ರ ತೀರ ಮತ್ತು ತಗ್ಗೆ ಪ್ರದೇಶ ನಿವಾಸಿಗಳಲ್ಲಿ ಆತಂಕವನ್ನೂ ಹುಟ್ಟುಹಾಕಿದೆ.
ಕೃಷಿ ಕಾಯಕ ಚುರುಕು : ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೃಷಿ ಕೈಂಕರ್ಯ ಚುರುಕುಗೊಂಡದೆ. ಮಳೆ ಕೈಕೊಟ್ಟಿದ್ದರಿಂದ ರೈತರು ಅತಂಕಕ್ಕೆ ಒಳಗಾಗಿದ್ದರು. ಆದರೆ, ವರುಣಾಗಮನ ಕೃಷಿ ಚಟುವಟಿಕೆಗೆ ಚುರುಕು ಮಟ್ಟಿಸಿದೆ.ಈಗಾಲೇ ನಾಟಿ ಕಾರ್ಯ ಮುಗಿಯಬೇಕಾಗಿದ್ದರೂ, ಮಳೆಯ ಅಭವದಿಂದ ನೀರಾಶ್ರಿತ ಗದ್ದೆಗಳ ನಾಟಿ ನಿಲುಗಡೆಯಾಗಿತ್ತು. ರೈತರು ತಮ್ಮ ಹೊಂಡದ ಗದ್ದೆಗಳ ನಾಟಿ ಮುಗಿಸು ಮಕ್ಕಿ ಗದ್ದೆಗಳ ನಾಟಿ ಶುರುಮಾಡಬೇಕೆನ್ನುವಷ್ಟರಲ್ಲಿ ಮಳೆ ಕೈಕೊಟ್ಟಿತ್ತು. ಗದ್ದೆಯಲ್ಲಿನ ಅಗೆ ಬಲಿತು ನಾಟಿಗೆ ಸಜ್ಜಾಗಿದ್ದರೂ ರೈತರು ಮಳೆಯಿಲ್ಲದೆ ನಾಟ ಮಾಡಲಾಗದೆ ಕೈಚೆಲ್ಲಿದ್ದರು. ಕಳೆದ ಮೂರು ದಿನದಿಂದ ಸುರಿಯತ್ತಿರುವ ಮಳೆ ಮಕ್ಕಿಗದ್ದೆಗಳನ್ನು ನೀರಿಂದ ತೋಯಿಸಿದೆ. ಹಾಗಾಗಿ ರೈತರ ಓ ಬೇಲೆ ಪದ ಮತ್ತು ನಾಟಿ ಹೆಂಗಸರ ಕಲರವ ಸದ್ದು ನಿರಂತರ.

ಅಪಾಯವೂ ಉಂಟು : ಕಳೆದ ಮೂರು ದಿನದಿಂದ ಮಳೆ ಸುರಿಯುತ್ತಿರುವರಿಂದ ಅಪಾಯವೂ ಉಂಟು. ಅಲ್ಲೊಂದು ಇಲ್ಲೊಂದು ಅವಗಢಗಳು ನಡೆದಿದ್ದರೂ ಮಳೆ ಇದೂವರೆಗೆ ಹೆಚ್ಚಿನ ಹಾನಿ ಉಂಟುಮಾಡಿಲ್ಲ. ಮಳೆ ಜೊತೆಗೆ ಗಾಳಿ ಹೋರು ಕಡಿಮೆಯಿರುವದು ಸ್ವಲ್ಪ ನೆಮ್ಮದಿ ತಂದಿದೆ. ಆದರೆ ನೀರಿನ ಅಬ್ಬರ ಮತ್ತು ಸಮುದ್ರದ ಉಬ್ಬರ ಹೆಚ್ಚಿತ್ತಿರುವದು ತೆಲೆನೋವಿನ ಸಂಗತಿ.

ಘಾಟಿಯಲ್ಲಿ ಮಳೆ ಸುರಿಯುತ್ತಿರುವುದರಿಂದ ಸೌಪರ್ಣಿಕಾ, ಚಕ್ರಾ, ವಾರಾಹಿ, ನೇತ್ರವಾತಿ, ಸ್ವರ್ಣಾ ನದಿಯ ನೀರಿನ ಹರಿವು ಹೆಚ್ಚಿದೆ. ಹೀಗೆ ಮಳೆ ಮುಂದುವರಿದರೆ ತಗ್ಗೆ ಪ್ರದೇಶದಲ್ಲಿ ನೆರೆ ಬರುವ ಅಪಾಯವಿದೆ. ಸಾಗರ, ಹೊಸನಗರ, ತೀರ್ಥಹಳ್ಳಿ,ಶೃಂಗೇರಿಯಲ್ಲೂ ಮಳೆ ಜೋರಾಗಿಯೇ ಶುರು ಹಚ್ಚಿಕೊಂಡಿದೆ. ಹಾಗಾಗಿ ಅಲ್ಲಿನ ಅಡಿಕೆ ಕೃಷಿಕರಿಗೆ ಕೊಳೆ ರೋಗದ ಭೀತಿ ಎದುರಾಗಿದೆ.

ಪ್ರವಾಸಿತಾಣಗಳು ಬಣ ಬಣ : ಚಿಕ್ಕಮಗಳೂರು ಹೊರತು ಪಡಿಸಿ ಉಳಿದ ಪ್ರದೇಶದಲ್ಲಿರುವ ಪ್ರವಾಸಿ ತಾಣಗಳಲ್ಲಿ ಜನರ ಸಂಖ್ಯೆ ಕಡಿಮೆಯಾಗಿದೆ. ಚಿಕ್ಕಮಗಳೂರು ಮಾತ್ರ ಇದಕ್ಕೆ ಹೊರತಾಗಿದೆ. ಮುಳ್ಳಯ್ಯಗಿರು ಮತ್ತು ಬಾಬಾಬುಡನ್ಗಿರಿಯಲ್ಲಿ ಪ್ರವಾಸಿಗಳ ಸಂಖ್ಯೆ ಏರಿಕೆಯಾಗಿದೆ. ಮಳೆಗಾಲದಲ್ಲಿ ಮುಳ್ಳಯ್ಯಗಿರಿ ಮತ್ತು ಚಂದ್ರದ್ರೋಣ ಪರ್ವತಗಳು ಹೆಚ್ಚು ರೋಚಕತೆಯನ್ನು ಪಡೆಯುವುದರಿಂದ ಪ್ರವಾಸಿಗರು ಆಕರ್ಷಿತರು. ಮಳೆಗಾಲದ `ಸ್ಪೆಷಾಲಿಸ್ಟ್` ಎಂದೇ ಗುರುತಿಸಿಕೊಂಡ ಜೋಗಾ ಕೂಡಾ ಪ್ರವಾಸಿಗರನ್ನ್ನು ಆಕರ್ಷಿಸಲು ಹಿಂದೆಬಿದ್ದಿಲ್ಲ.

ಕರಾವಳಿ ತೀರ ಪ್ರದೇಶ ಮತ್ತು ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಹೇಳಿಕೊಳ್ಳುವಂತಿಲ್ಲ.ಮಳೆಯ ಜೋರಿಂದಾಗಿ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಕೂಡಾ ಕಡಿಮೆಯಾಗಿದೆ. ಕೊಲ್ಲೂರು, ಹಟ್ಟಿಯಂಗಡಿ, ಆನೆಗುಡ್ಡೆ, ಕಮಲಶಿಲೆ, ಉಡುಪಿ, ಧರ್ಮಸ್ಥಳ, ಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು ಮುಂತಾದ ಯಾತ್ರಾ ಸ್ಥಳದಲ್ಲಿ ಭಕ್ತರ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿದೆ. ಯಾತ್ರಾ ಸ್ಥಳಕ್ಕೆ ಹೋಗುವ ಹೆಚ್ಚಿನ ಬಸ್ಸುಗಳು ಖಾಲಿ ಖಾಲಿ.

ಇದೂವರೆಗೆ ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಕಳೆದ ಬಾರಿ ಸುರಿದ ಅರ್ಧದಷ್ಟು ಮಳೆ ಬಿದ್ದಿಲ್ಲ. ಮಳೆರಾಯನಿಗೇನು ಮುನಿಸುಕರಗಿ ನೀರಾಗಿ ಧರೆಗೆ ಇಳಿಯುತ್ತಿದೆ. ಮಳೆ ಬರಲಿ ಆದರೆ ಅಪಾಯ ಬೇಡಾ ಅಂತಾರೆ ನಾಗರಿಕರು.


ಶ್ರೀಪತಿ ಹೆಗಡೆ ಹಕ್ಲಾಡಿ

1 comments:

udupi suddhi said...

good story

Post a Comment