ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ಚಿಕ್ಕಮಗಳೂರು : ಹಲಸು ಎಲ್ಲಾ ಹಣ್ಣಿನಂತಲ್ಲ! ಎಲ್ಲರ ಕೈಗೆಟಕುವ ಸೋಬಿ ದರದಲ್ಲಿ ಹಲಸಿನ ಹಣ್ಣು ಸಿಗುತ್ತದೆ. ಹಾಗಾಗಿ ಹಸಿದು ಹಲಸಿನ ಹಣ್ಣು ತಿನ್ನು. ಉಂಡು
ಮಾವಿನ ಹಣ್ಣು ತಿನ್ನು ಎಂಬ ಗಾದೆ ಮಾತು ರೂಢಿಯಲ್ಲಿದೆ.ಬೇರೆ ಹಣ್ಣಿಗಿಂತ ಹಲಸು ಕೊಂಚ ವಿಭಿನ್ನ.
ಎಲ್ಲಾ ವರ್ಗದ ಜನರಿಗೆ ಹಲಸೆಂದರೆ ಬಲೂ ಇಷ್ಟ. ಹಲಸಿನ ಹಣ್ಣು ದೇಶವ್ಯಾಪಿ. ತನ್ನಷ್ಟಕ್ಕೆ ದಟ್ಟಡವಿಯಲ್ಲ, ಮನೆ ತೋಟದಲ್ಲಿ ನೀರು ಗೊಬ್ಬರವಿಲ್ಲದೆ ಬೆಳೆಯುತ್ತಿದ್ದ ಹಲಸು ವಾಣಿಜ್ಯ ಬೆಳೆಯಾಗಿ ಬದಲಾವಣೆಗೆ ಕಾಣುತ್ತಿದೆ. ಸ್ವಾಭಾವಿಕವಾಗಿ ಬೆಳೆಯುತ್ತಿದ್ದ ಹಲಸನ್ನು ರೈತರು ವಾಣಿಜ್ಯ ಕೃಷಿಯಾಗಿ ಬೆಳೆಯುತ್ತಿದ್ದಾರೆ. ಮಣ್ಣಿನ ಗುಣ, ಹವಮಾನ ಬದಲಾದಂತೆ ಹಲಸಿನ ರುಚಿ, ಆಕಾರ ಮತ್ತು ಬಣ್ಣದಲ್ಲೂ ಅಲ್ಪಸ್ವಲ್ಪ ಬದಲಾವಣೆಯಾಗಿದೆ.

ಹಲಸಿನ ರಾಜ
ರಾಜ್ಯದ ನಾನಾ ಭಾಗಗಳಲ್ಲಿ ಹಲಸಿನ ಕೃಷಿ ನಡೆಯುತ್ತಿದೆ. ಆದರೆ ಚಿಕ್ಕಮಗಳೂರು ಜಿಲ್ಲೆ ಸಖಾರಾಯಪಟ್ಟಣದ ಹಲಸಿನ ಹಣ್ಣು ರುಚಿಯೋ ರುಚಿ. ಹಾಗಾಗಿ ಸಖರಾಯಪಟ್ಟಣದ ಹಲಸಿನ ಹಣ್ಣಿಗೆ ಡಿಮ್ಯಾಂಡೋ ಡಿಮ್ಯಾಂಡ್. ಸಖರಾಯಪಟ್ಟಣದಲ್ಲಿ ಹಲಸಿನ ಹಣ್ಣಿನದ್ದೇ ಘಮಾಘಮ. ವಿವಿಧ ನಮೂನೆಯ ಹಲಸಿನ ಹಣ್ಣು ರಸ್ತೆ ಬದಿಯಲ್ಲಿ ರಾಶಿ ರಾಶಿ. ಒಂದೆಡೆ ಕೊಳ್ಳುವವರ ಧಾವಂತ, ಮತ್ತೊಂದೆಡೆ ಗಿರಾಕಿಗಳ
ಆಕರ್ಷಿಸುವ ಸರ್ಕಸ್ ನಡೆಯುತ್ತಿದೆ. ಇವುಗಳ ನಡುವೆ ಸಖರಾಯಪಟ್ಟಣದ ಹಲಸು ರಾಜ್ಯದ ನಾನಾ ಭಾಗಗಳಿಗೆ ರವಾನೆಯಾಗುತ್ತ್ತಿವೆ. ಸಖರಾಯಪಟ್ಟನದ ಹಲಸಿಗೆ ಈಪಾಟಿ ಬೇಡಿಕೆ ಏಕೆಂದರೆ ಉತ್ತರ ಸಿಂಪಲ್! ಸಖರಾಯಪಟ್ಟಣದ ಹಲಸಿಗೆ ಸಕ್ಕರೆ ರುಚಿಯಿದೆ. ಹಲಸಿನ ಹಣ್ಣಿನ ರಾಜ ಎಂದು ಸಖರಾಯಪಟ್ಟಣದ ಹಲಸು ಗುರುತಿಸಿಕೊಂಡಿದೆ.


ನಾನಾವಿದ ಹಲಸು

ಹಲಸಿನ ಹಣ್ಣಿಗೆ ನಾನಾ ವಿಧ ಆಕಾರವಿದೆ. ರುಚಿಯಲ್ಲೂ ಬದಲಾವಣೆಯಿದೆ. ಬೆಳ್ವಾ, (ಇಂಬಾ) ಬೊಕ್ಕೆ, ನಾಟಿ ಹಲಸು, ಚಂದ್ರ ಬೊಕ್ಕೆ ಮತ್ತು ರುದ್ರಾಕ್ಷಿ ಬೊಕ್ಕೆ ಹಾಗೂ ಸಕ್ಕರೆ ಬೊಕ್ಕೆ ಮುಂತಾದ ಹತ್ತು ಹಲವು ಬಗೆಯಿವೆ. ಬೆಳ್ವಾ ಹಲಸಿನ ಹಣ್ಣಿನ ತೊಳೆ ನೋಳೆ ನೊಳೆಯಾಗಿರೋದ್ರಿಂದ ಹಲಸು ಪ್ರಿಯುರನ್ನು ಆಕರ್ಷಿಸಲು ಅಷ್ಟೊಂದು ಸಫಲವಾಗಿಲ್ಲ. ಬಳ್ವಾ ಹಣ್ಣು ತಿನ್ನೋದು ಸುಲಭ. ಬಾಯಿಗೆ ಹಾಕಿದರೆ ಅಡೆ ತಡೆಯಿಲ್ಲದೆ ನೇರ ಗುಳುಂ. ಬೊಕ್ಕ ಹಣ್ಣು ಹಾಗಲ್ಲ ಅಗಿದು ತಿನ್ನಬೇಕು. ಹೆಬ್ಬಲಸು, ದೀವ್ಹಲಸು ಹಲಸಿನ ಜಾತಿಗೆ ಸೇರಿವೆ. ಬೆಬ್ಬಲಸು ಬಳಕೆ ಕಡಿಮೆ. ದೀವ್ಹಲಸನ್ನು ಅಡುಗೆಗೆ ಬಳಸಲಾಗುತ್ತದೆ. ಹಾಗೆ ಚಿಪ್ಸ್, ಹಪ್ಪಳ, ಬಜ್ಜಿಯಾಗಿ ದೀವ್ಹಲಸು ಹೊಟ್ಟೆ ಸೇರುತ್ತದೆ. ಹೆಬ್ಬಲಸು ಕಪಿ ಸೈನಿಕರಿಗೆ ಇಷ್ಟವಂತೆ. ಹೆಬ್ಬಲಸು ಕಾರದಲ್ಲಿ ಚಿಕ್ಕದಾಗಿದ್ದು, ತೊಳೆ ಮತ್ತು ಬೀಜಗಳು ಕಿರಿದಾಗಿರುತ್ತವೆ. ರುಚಿ ಸಾಧಾರಣ. ಮಲೆನಾಡಿನಲ್ಲಿ ಆಗೊಮ್ಮೆ, ಈಗೊಮ್ಮೆ ಅಡುಗೆಗೆ ಹೆಬ್ಬಲಸು ಬಳಸೋದು ಉಂಟು. ಜನಪ್ರಿಯತೆ ಮಾತ್ರ ಸಿಕ್ಕಿಲ್ಲ. ಇನ್ನು ಬೊಕ್ಕೆ ವಿಷಯಕ್ಕೆ ಬಂದರೆ ಬಾಯಲ್ಲಿ ನೀರು ತರಿಸುತ್ತದೆ. ಜನ ಇಷ್ಟ ಪಡೋದು ಬೊಕ್ಕೆ ಹಲಸಿನ ಹಣ್ಣು. ರುಚಿ, ಗಾತ್ರ, ಪರಿಮಣ ಎಲ್ಲದರಲ್ಲೂ ಬೊಕ್ಕೆ ಹಲಸಿಗೆ ವೈವಿಧ್ಯತೆಯಿದೆ. ಒಟ್ಟಾರೆ ಹಲಸು ಬಹುಉಪಯೋಗಿ. ವೇಸ್ಟ್ ಅನ್ನೋದಿಲ್ಲ. ಹಲಸೆಂದರೆ ಜಾನುವಾರುಗಳಿಗೂ ಇಷ್ಟ.ಕರಡಿಗೆ ಹಲಸು, ಜೇನು ಸಿಕ್ಕರಂತೂ ಸುಗ್ರಾಸ ಭೋಜನ!

ಹತ್ತು ಹಲವು ಬಗೆ


ಜನಪ್ರಿಯ ಹಲಸನ್ನು ಮಲೆನಾಡಿನಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಮುಖ್ಯವಾಗಿ ಚಿಕ್ಕಮಗಳೂರು ಜಿಲ್ಲೆಯ ಸಖಾರಾಯಪಟ್ಟಣದಲ್ಲಿ ಬೆಳೆಯಲಾಗುವ ಹಲಸಿನ ಹಣ್ಣಿಗೆ ಇತರ ರಾಜ್ಯಗಳಲ್ಲಿಯೂ ಬೇಡಿಕೆಯಿದೆ. ಹಲಸು ಸಾಮಾನ್ಯವಾಗಿ ಸಂಡಿಗೆ, ಹಪ್ಪಳ, ಪಲ್ಯ, ಸಂಭಾರು ಮತ್ತು ಪಾಯಸಕ್ಕೆ ಬಳಸಲಾಗುತ್ತದೆ. ಹಲಸಿನ ಮರ ಪೀಠೋಪಕರಣಗಳ ತಯಾರಿಕೆಗೆ ಬಳಕೆಯಾಗುವುದರಿಂದ ಹಲಸಿನ ಮರಗಳು ಕಡಿಮೆಯಾಗುತ್ತ್ತಿದೆ. ಇದರಿಂದ ಹಲಸಿನ ಬೆಳೆ ಕಡಿಮೆಯಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಸಖಾರಾಯಪಟ್ಟಣದಲ್ಲಿ ರೈತರು ತಮ್ಮ ಅಡಿಕೆ ತೋಟದಲ್ಲಿ ಹಲಸನ್ನು ಯಥೇಚ್ಛವಾಗಿ ಬೆಳೆಯುತ್ತಿದ್ದಾರೆ. ಸಖಾರಾಯ ಪಟ್ಟಣದ ಹಲಸು ರುಚಿಯಲ್ಲಿ ಹೆಸರುವಾಸಿ. ಇಲ್ಲಿನ ಕೃಷಿಕರು ಹಲಸನ್ನು ಉಪಬೆಳೆಯಾಗಿಯೂ ಬೆಳೆಯುತ್ತಾರೆ. ಸಖಾರಾಯಪಟ್ಟಣದಲ್ಲಿ ಹೆಚ್ಚಾಗಿ ಚಂದ್ರ ಬೊಕ್ಕೆ ಮತ್ತು ರುದ್ರಾಕ್ಷಿ ಬೊಕ್ಕೆ ಬೆಳೆಯಲಾಗುತ್ತಿದೆ. ಇಲ್ಲಿನ ಹಲಸು ಸಕ್ಕರೆಯಷ್ಟು ಸಿಹಿಯಾಗಿದ್ದು, ತಿನ್ನಲು ರುಚಿಯಾಗಿರುತ್ತದೆ ಸಖರಾಯಪಟ್ಟಣದ ಕೆಲವು ಕಡ ಹಲಸಿನ ಹಣ್ಣನ್ನು ಇಡಿಯಾಗಿ ಮಾರಾಟ ಮಾಡಿದರೆ, ಇನ್ನು ಕೆಲವೆಡೆ ತೊಳೆ ತೆಗೆದು ಮಾರಾಟ ಮಾಡುತ್ತಾರೆ. ಕಡೂರು ಚಿಕ್ಕಮಗಳೂರು ರಾಜ್ಯ ಹೆದ್ದಾರಿಯಲ್ಲಿ ಸಾಗುವ ಪ್ರವಾಸಿಗರು ಹಲಸಿನ ಹಣ್ಣಿನ ರುಚಿಯನ್ನು ಸವಿದೇ ಮುಂದಕ್ಕೆ ಸಾಗುತ್ತಾರೆ. ಬೇರೆ ಬೇರೆ ಕಡೆಯಿಂದ ಬಂದವರು ಹಣ್ಣನ್ನು ಮನೆಗಳಿಗೆ ಕೊಂಡು ಹೋಗುತ್ತಾರೆ. ಸಕರಾಯಪಟ್ಟಣದಲ್ಲಿ ಎರಡನೇ ಬೆಳೆಯಾಗಿ ಬೆಳೆಯಲಾಗುತ್ತಿರುವ ಹೆಲಸು ಬೆಳೆಗಾರರಿಗೆ ಹಾಗೂ ಮಾರಾಟಗಾರರಿಗೆ ಲಾಭ ತರುತ್ತಿದೆ. ಹಲಸು ಒಗಟಿಗೂ ಸಿಕ್ಕಿದೆ.
ಅಜ್ಜಿ ಮೈಯಲ್ಲಾ ಕಜ್ಜಿ ಅಂದರೆ..... ಹಲಸಿನ ಕಾಯಿ! ಹಸು ಹಾಲಿಳಿಸುತ್ತಿಲ್ಲವಾ ? ಹಾಗಾದರೆ ಹಲಸಿನ ಸೋರೆ ಹಾಕಿ ಹಾಲು ಹಿಂಡಲು
ಕೂರಿ!

ಶ್ರೀಪತಿ ಹೆಗಡೆ ಹಕ್ಲಾಡಿ

0 comments:

Post a Comment