ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ

ತನ್ನ ಬಟ್ಟಲ ಹೆಗ್ಗಣವನ್ನು ಬಿಟ್ಟು ಇನ್ನೊಬ್ಬರ ಬಟ್ಟಲ ನೊಣವನ್ನು ತೋರಿಸುವ ಕೆಟ್ಟ ಚಾಳಿ ಕಾಂಗ್ರೆಸ್ ಪಕ್ಷದ್ದು. ಇದು ಮತ್ತೊಮ್ಮೆ ಸಾಬೀತಾಗಿದೆ. ಬಿ.ಎಸ್.ಯಡಿಯೂರಪ್ಪ ನೇತೃತ್ವದ ಭಾರತೀಯ ಜನತಾ ಪಕ್ಷವು ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಹಿಡಿದುಕೊಂಡಾಕ್ಷಣ ಕಾಂಗ್ರೆಸ್ ಮತ್ತು ಜೆ.ಡಿ.ಎಸ್. ಪಕ್ಷಗಳು ಮೈ ಪರಚಿಕೊಳ್ಳತೊಡಗಿವೆ. ಎಲ್ಲಾದರೂ ಬಿ.ಜೆ.ಪಿ ಸರಕಾರ ತನ್ನ ಪೂರ್ಣಾವಧಿಯನ್ನು ಯಶಸ್ವಿಗೊಳಿಸಿದರೆ ಎಂಬ ಭಯದಿಂದ ಇಲ್ಲಸಲ್ಲದ ಕಸರತ್ತುಗಳನ್ನು ಈ ಎರಡೂ ಪಕ್ಷಗಳು ಇಂದು ಮಾಡುತ್ತಿವೆ. ರಾಜ್ಯದಲ್ಲಿ `ಅವ್ಯವಹಾರಗಳೇ' ತುಂಬಿಕೊಂಡಿವೆ ಎನ್ನುತ್ತಾ ಸದನದಲ್ಲಿ ಕಲಾಪಕ್ಕೆ ಅಡ್ಡಿ ಪಡಿಸಿದ ವಿಪಕ್ಷಗಳು , ಸದನವನ್ನು ಯಶಸ್ವಿಗೊಳಿಸಲು ಬಿಡದೆ ವೃಥಾ ಕಾಲ ಹರಣ ಮಾಡಿದ್ದು ಸುಳ್ಳಲ್ಲ. ಹೇಗಾದರೂ ಸರಿ ಬಿ.ಜೆ.ಪಿ. ಸರಕಾರವನ್ನು ಉರುಳಿಸಿಯೇ ಸಿದ್ಧ ಎಂಬಂತೆ ಈ ಎರಡೂ ಪಕ್ಷಗಳು ಪಣತೊಟ್ಟುಕೊಂಡಿವೆ. ರಾಜ್ಯಸರಕಾರ ಏನೂ ಮಾಡಿಲ್ಲ ಎಂಬ ಈ ವಿಪಕ್ಷಗಳು ತಮ್ಮ ಅಧಿಕಾರಾವಧಿಯಲ್ಲಿ ಏನೆಲ್ಲಾ ಮಾಡಿದ್ದಾರೆ.? ಸರಿ ಮಾಡಿದ್ದ ಕಾರಣಕ್ಕಾಗಿಯೇ ಇಷ್ಟೂ ವರ್ಷಗಳ ಸುಧೀರ್ಘ ಆಡಳಿತವನ್ನು ನಾವು ಮಾಡಿದ್ದೇವೆಂದು ಹೇಳಿಕೊಳ್ಳಬಹುದು. ಆದರೆ ಈ ಬಾರಿಯಾಕೆ ಬಹುಮತಗಳಿಸಿಕೊಳ್ಳಲು ವಿಫಲವಾಯಿತು. ಈ ಎಲ್ಲಾ ಪ್ರಶ್ನೆಗಳನ್ನು ಈಗೆ ಎತ್ತಿದರೆ ಅದು ಅಪ್ರಸ್ತುತ ಎಂಬ ಮಾತು ಕೇಳಿಬಂದೀತು. ಆದರೂ ಪ್ರಜ್ಞಾವಂತರೆನಿಸಿಕೊಂಡಿರುವ , ಫುಂಖಾನು ಪುಂಖ ಮಾತನಾಡುವ ಕಾಂಗ್ರೆಸ್ನ ಹಿರಿಯ ಮುಖಂಡರೆನಿಸಿಕೊಂಡವರೂ , ಅಪ್ಪಾ ಮಕ್ಕಳ ಪಕ್ಷದ ಮಹಾ ಮೇಧಾವಿಗಳೂ ಇಂದು ಈ ಒಂದು ಅಂಶಕ್ಕೆ ಉತ್ತರ ನೀಡಲೇ ಬೇಕಾಗಿದೆ."ಇಷ್ಟು ವರ್ಷಗಳ ಅವಧಿಯಲ್ಲಿ ತಮ್ಮ ಸರಕಾರ ಅಧಿಕಾರವಿದ್ದಾಗ ಲೋಕಾಯುಕ್ತರಿಗೆ ಪರಮಾಧಿಕಾರ ನೀಡುವ ಕುರಿತು ಯಾಕೆ ಚಕಾರವೆತ್ತಿರಲಿಲ್ಲ.?", ಬೆಂಗಳೂರಿನಲ್ಲಿ ಎರ್ರಾಬಿರ್ರಿಯಾಗಿ ಬೇಕಾದಂತೆಲ್ಲಾ ಬಂಗಲೆ, ಸೈಟುಗಳನ್ನು ಪಕ್ಷದ ಶಾಸಕ, ಮಂತ್ರಿಗಳು ಮಾಡಿದ್ದು ಯಾರ ಹಣದಿಂದ?, ಅದೂ ಇರಲಿ ಯಡಿಯೂರಪ್ಪ ಮುಖ್ಯಮಂತ್ರಿಯಾದಂದಿನಿಂದ `ಕೋಟಿ ' ಲೆಕ್ಕದಲ್ಲಿ ಯೋಜನೆಗಳಿಗೆ ಭರವಸೆ ನೀಡುತ್ತಿದ್ದಾರೆಂಬ ಮಾತೆತ್ತುವ ನೀವೆಲ್ಲಾ ತಮ್ಮ ಅವಧಿಯಲ್ಲಿ ಘೋಷಣೆ ಕೂಗಿದ ಅದೆಷ್ಟೋ ಯೋಜನೆಗಳು `ವಂಶಪಾರಂಪರ್ಯದಂತೆ' ಮುಂದುವರಿಯುತ್ತಾ ಹೋದರೂ ಕೊನೆ ಕಾಣಿಸಲು ಯಾಕೆ ಸಾಧ್ಯವಾಗಿಲ್ಲ...? ಆ ಸಂದರ್ಭದಲ್ಲಿ ಬಿಡುಗಡೆಗೊಂಡ ದುಡ್ಡು ಯಾರ ಖಜಾನೆ ಸೇರಿದ್ದವು ? ರೈತರಲ್ಲದವರನ್ನು ರೈತರೆಂದು ಬಿಂಭಿಸುತ್ತಾ , ಹಣದ ಬಲದಿಂದ ಜನಭಲ ಪ್ರದರ್ಶಿಸುವ ನೀವು ಪ್ರತಿಭಟನೆಗಾಗಿ ಬಾಡಿಗೆ ವ್ಯಕ್ತಿಗಳನ್ನು ಕರೆತಂದು ಗಲಭೆಯೆಬ್ಬಿಸಿದ್ದು ಮರೆತುಹೋಗಿದ್ದವೇ..? ಮುಸಲ್ಮಾನರ ವೋಟ್ ಬ್ಯಾಂಕ್ಗೋಸ್ಕರ ಅಮಾಯಕ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಪ್ರಯತ್ನ ತಮ್ಮ ಸರಕಾರದ ಅವಧಿಯಲ್ಲಿ ಆಗಿದ್ದಲ್ಲವೆ?.

ಇಷ್ಟೇ ಏಕೆ ನೈಸ್ ವಿಚಾರದಲ್ಲಿ ಚಕಾರ ವೆತ್ತುತ್ತಿರುವ ಜೆ.ಡಿ.ಎಸ್. ಮುಖಂಡ ದೇವೇಗೌಡರು ಹೇಳುವ ಅಂಶಗಳು ಎಷ್ಟರ ಮಟ್ಟಿಗೆ ಸಮರ್ಪಕವಾಗಿವೆ? ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿದ್ದ ಅವಧಿಯಲ್ಲಿ ಬಳ್ಳಾರಿ ಸೇರಿದಂತೆ ರಾಜ್ಯದ ಇತರ ಕಡೆಗಳಲ್ಲಿ ನಡೆದ ಅಕ್ರಮ ಗಣಿಗಾರಿಕೆಯನ್ನು `ಕಾಂಗ್ರೆಸ್ - ಜೆ.ಡಿ.ಎಸ್' ಸಕ್ರಮ ಎನ್ನುತ್ತದೆಯೇ ... ?
ಕಾಂಗ್ರೆಸ್ ಪಕ್ಷ ಹಲವು ಇದೇ ರಾಜ್ಯದಲ್ಲಿ ಗದ್ದುಗೆಯೇರಿ ಕುಳಿತಿತ್ತು. ಆ ಸಂದರ್ಭಗಳಲ್ಲಿ ಅವ್ಯವಹಾರಗಳ ಮಹಾಪೂರವನ್ನೇ ಎಸಗಿದೆ ಎಂಬುದನ್ನು ಇದೀಗ ಮರೆತು ಬಿಟ್ಟಿದೆ. ಜೆ.ಡಿ.ಎಸ್. ಬಹು ಪ್ರಾಮಾಣಿಕತೆಯನ್ನು ಇಂದು ತೋರಿಸುತ್ತಿದೆ. ಈ ಎರಡೂ ಪಕ್ಷಗಳೂ `ಸಭ್ಯತೆ'ಯ ಮುಖವಾಡದಲ್ಲಿ ಜನತೆಯನ್ನು ಹಾದಿತಪ್ಪಿಸುತ್ತಿದೆ ಎಂಬುದರಲ್ಲಿ ಸಂದೇಹವಿಲ್ಲ. ಹಾಗಂದಮಾತ್ರೆಕ್ಕೆ ಭಾರತೀಯ ಜನತಾ ಪಕ್ಷ ಎಲ್ಲಾ ವಿಷಯದಲ್ಲೂ ಸರಿಯಾಗಿದೆ ಎಂದೇ ನಿಲ್ಲ. ಈ ಪಕ್ಷದಲ್ಲೂ ಆಂತರಿಕ ಕಲಹಗಳು, ಗೊಂದಲಗಳು ಇವೆ. ಅಧಿಕಾರ ಕೈ ಗೆ ಸಿಕ್ಕಿದೆ. ಅದನ್ನು ಐದು ವರುಷಗಳ ಕಾಲ ಯಾವುದೇ ಗೊಂದಲವಾಗದಂತೆ ಮುನ್ನಡೆಸಬೇಕೆಂಬ ಒಮ್ಮತ ಈ ಪಕ್ಷದೊಳಗೂ ಇದ್ದಂತಿಲ್ಲ. ಅದು ಬಂದದ್ದೇ ಆದಲ್ಲಿ ಭಾರತೀಯ ಜನತಾ ಪಕ್ಷ ಕಾಂಗ್ರೆಸ್ ಮತ್ತು ಜೆ.ಡಿ.ಎಸ್ ಮಾಡಿದ ಸಾಧನೆಗಳಿಗಿಂತೆಲ್ಲ ಹಲವು ಹೆಜ್ಜೆಗಳಷ್ಟು ಇನ್ನೂ ಮುಂದುವರಿಯುವುದರಲ್ಲಿ ಸಂದೇಹವೇ ಇಲ್ಲ.

0 comments:

Post a Comment