ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


"ಕೆಲವು ದಶಕಗಳ ಹಿಂದೆ ಪರಿಪೂರ್ಣವಾಗಿ ಬೆಳೆಯದ,ಸಣ್ಣ ಚಿಗುರಿನಂತ್ತಿದ್ದ, ಯಾರ ಗಮನಕ್ಕೂ ಬಾರದೆ ಎಲ್ಲರಿಂದಲೂ ದೂರಸರಿಯಲ್ಪಡುತ್ತಿದ್ದ ಪತ್ರಿಕೋದ್ಯಮ ವಿಷಯವು ಕಾಲ ಕಳೆದಂತೆ ಯುವ ಪ್ರತಿಭೆಗಳನ್ನು ತನ್ನತ್ತ ಸೆಳೆದುಕೊಂಡು ಹೆಮ್ಮರವಾಗಿ ಬೆಳೆಯುತ್ತಿದೆ" ಎಂದು ಉಜಿರೆ ಎಸ್.ಡಿ.ಎಮ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಹಿರಿಯ ಉಪನ್ಯಾಸಕರಾದ ಪ್ರೊ. ಭಾಸ್ಕರ್ ಹೆಗ್ಡೆಯವರು ತಿಳಿಸಿದರು.
ಕೇವಲ ಇಂಜಿನಿಯರಿಂಗ್,ಐ.ಟಿ-ಬಿ.ಟಿ ಮುಂತಾದುವುಗಳು ಈ ಹಿಂದೆ ಉದ್ಯೋಗ ನೀಡುವುದರಲ್ಲಿದಿದ್ದರೂ,ಬೆಳೆಯುತ್ತಿರುವ ಪತ್ರಿಕೋದ್ಯಮವು ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಯಶಸ್ವೀ ಉದ್ಯೋಗವನ್ನು ಕೊಡಿಸುವಲ್ಲಿ ದಾಪುಗಾಲಿಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಪ್ರೊ.ಭಾಸ್ಕರ್ ಹೆಗ್ಡೆಯವರು ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದವರು ಏರ್ಪಡಿಸಿದ್ದ"ಪತ್ರಿಕಾ ದಿನಾಚರಣೆ"ಯಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡಿದ್ದರು.
ಕೆ.ಪಿ.ಎನ್ ವಾರ್ತಾ ಸಂಸ್ಥೆಯ ಹಿರಿಯ ಛಾಯಾಗ್ರಾಹಕರಾದ ಸುಧಾಕರ್ ಜೈನ್ ಅವರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕುರಿಯನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕು.ಹೆಲನ್ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.ಉಪನ್ಯಾಸಕಿ ಮೌಲ್ಯ ಸ್ವಾಗತಿಸಿದರು.ವರ್ಷಾ ವಂದಿಸಿದರು.

ವರದಿ: ಅಭಿಲಾಷ್

0 comments:

Post a Comment