ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಮೂಲ್ಕಿ: ವೃತ್ತಿ ಶಿಕ್ಷಣ, ಧಾರ್ಮಿಕ,ಸಾಂಸ್ಕೃತಿಕ, ಆರೋಗ್ಯ ಕೇಂದ್ರಗಳ ಬೆಳವಣಿಗೆಗಾಗಿ ಸಮಾಜ ಸೇವೆಯಲ್ಲಿ ತಮ್ಮನ್ನು ಎಲೆಮರೆಯ ಕಾಯಿಯಂತೆ ತೊಡಗಿಸಿಕೊಂಡು ಮೂಲ್ಕಿಯ ಅಭಿವೃದ್ಧಿಯ ಹರಿಕಾರರಾಗಿರುವ ರಾಮಕೃಷ್ಣ ಹರಿಪೂಂಜಾರವರು ಮುಂದಿನ ಪೀಳಿಗೆಗೆ ಮಾದರಿಯಾಗಿದ್ದಾರೆ ಎಂದು ಮಾಜಿ ಸಚಿವ ಅಮರನಾಥ ಶೆಟ್ಟಿ ಹೇಳಿದರು.
ಅವರು ಮಂಗಳವಾರ ಮೂಲ್ಕಿಯ ಆಧಿದನ್ ಸಭಾಂಗಣದಲ್ಲಿ ಪರಂಧಾಮಗೈದ ಮೂಲ್ಕಿ ರಾಮಕೃಷ್ಣ ಹರಿ ಪೂಂಜಾ ರವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಮಿತಿಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯ ಅಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ ಮೂಲ್ಕಿಯ ಸರ್ವತೋಮುಖ ಅಭಿವೃದ್ಧಿಗೆ ತನ್ನ ಜೀವನವನ್ನೇ ಆದರ್ಶವಾಗಿ ಇಟ್ಟಕೊಂಡ ಹರಿಪೂಂಜಾರು ಜನರ ಮನದಲ್ಲಿ ಶಾಶ್ವತವಾಗಿ ಉಳಿಯಬೇಕಾದರೆ ಅವರ ಪುತ್ಥಳಿ ಅಥವಾ ಅವರ ರಸ್ತೆಯೊಂದಕ್ಕೆ ಅವರ ಹೆಸರಿಡುವುದು ಸೂಕ್ತ ಎಂದರು.

ಸಾರ್ವಜನಿಕ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆಯನ್ನು ಪ್ರೊ.ಸ್ಯಾಮ್ ಮ್ಯಾಬೆನ್ ವಹಿಸಿದ್ದರು.

ಮಾಜಿ ಶಾಸಕ ಕೆ.ಸೋಮಪ್ಪ ಸುವರ್ಣ,ಡಾ.ಸೀತಾರಾಮ ಶೆಟ್ಟಿ, ನಾಲ್ಕು ಪಟ್ಣ ಮೊಗವೀರ ಸಭಾ ಅಧ್ಯಕ್ಷ ಭಾಸ್ಕರ ಪುತ್ರನ್, ಮೂಲ್ಕಿ ನಗರ ಪಂಚಾಯತ್ನ ಅಧ್ಯಕ್ಷ ಬಿ.ಎಂ.ಆಸಿಫ್, ಮುಖ್ಯಾಧಿಕಾರಿ ಹರಿಶ್ಚಂದ್ರ ಸಾಲ್ಯಾನ್, ಕೆ.ಪಿ.ಸಿಸಿ ಸದಸ್ಯ ಎಂ.ಬಿ.ನೂರ್ ಮಹಮ್ಮದ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಗದೀಶ ಅಧಿಕಾರಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನ ಮಾಜಿ ಅಧ್ಯಕ್ಷ ಸುಚರಿತ ಶೆಟ್ಟಿ, ಕಿನ್ನಿಗೋಳಿ ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪ, ಕೊಲ್ನಾಡುಗುತ್ತು ರಾಮಚಂದ್ರ ನಾಯಕ್ ಹರಿ ಪೂಂಜಾರವರ ಬಗ್ಗೆ ಮಾತನಾಡಿದರು.

ಹರಿಪೂಂಜಾರವರ ಪುತ್ರ ಅರವಿಂದ ಪೂಂಜಾ, ಸಾರ್ವಜನಿಕ ಶ್ರದ್ಧಾಂಜಲಿ ಸಮಿತಿಯ ಶಾರದಾ ಕಾರ್ನಾಡು ಕೃಷ್ಣ ಶೆಟ್ಟಿ, ಸುಂದರ ಶೆಟ್ಟಿ ಕುಬೆವೂರು, ರವಿರಾಜ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ರೊಶನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು, ಮುರಳೀಧರ ಭಂಡಾರಿ ವಂದಿಸಿದರು.

ಚಿತ್ರ - ವರದಿ: ಭಾಗ್ಯವಾನ್ ಮುಲ್ಕಿ.

0 comments:

Post a Comment