ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:27 PM

ಭಾರತ: ಈಗ ಜನಸಾಗರ...

Posted by ekanasu

ವಿಚಾರ
ವೈಜ್ಞಾನಿಕವಾಗಿ ಮುಂದುವರಿದ ಇಂದಿನ ವಿಶ್ವವು ಅದೆಷ್ಟೋ ಹೊಸ ಹೊಸ ಸಂಶೋಧನೆಗಳನ್ನು ಮಾಡಿ ಸಾಧಿಸಿದಿನದಿಂದ ದಿನಕ್ಕೆ ಅಚ್ಚರಿಯನ್ನೂ ಅದ್ಭುತವನ್ನೂ ಮೂಡಿಸುವ ವೈಜ್ಞಾನಿಕ ಲೋಕವೇ ಆಗಿದೆ ಇಂದಿನ ಜಗತ್ತು. ಜಗತ್ತು ವೈಜ್ಞಾನಿಕವಾಗಿ ಎಷ್ಟು ಮುಂದುವರಿಯುತ್ತಿದೆಯೋ ಜನಸಂಖ್ಯೆಯೂ ದಿನದಿಂದ ದಿನಕ್ಕೆ ಶರವೇಗದಲ್ಲಿ ಏರುತ್ತಾ ಸಾಗುತ್ತದೆ.ಒಂದು ರಾಷ್ಟ್ರದ ಅಭಿವೃದ್ಧಿಯಾಗಬೇಕಾದರೆ ಕೃಷಿ, ಕೈಗಾರಿಕೆ, ಉದ್ಯೋಗ, ಶೈಕ್ಷಣಿಕ ಕ್ಷೇತ್ರಗಳಲ್ಲಿಯೂ ಪ್ರಗತಿಯಾಗುತ್ತಾ ಸಾಗಬೇಕು. ಅಲ್ಲದೆ ಪ್ರಾಮಾಣಿಕವಾಗಿ ದುಡಿಯುವ ಇಚ್ಛಾಶಕ್ತಿಯೂ ಇರಬೇಕು.ವಿಶಾಲವಾದ ಅಮೇರಿಕಾದಂತಹ ರಾಷ್ಟ್ರಗಳಲ್ಲಿ ಭೌಗೋಲಿಕ ವ್ಯಾಪ್ತಿ ಅಧಿಕವಿದೆ. ಜನಸಂಖ್ಯೆಯೂ ಕಡಿಮೆಯಿದೆ. ಅಲ್ಲದೆ ದುಡಿಯುವ ಇಚ್ಛಾಶಕ್ತಿಯೂ ಇದೆ.
ಅಭಿವೃದ್ಧಿ ಶೀಲ ರಾಷ್ಟ್ರವಾದ ಭಾರತದಲ್ಲಿ ಜನಸಂಖ್ಯೆಯಾದರೋ ಸದ್ಯ ನೂರಹತ್ತುಕೋಟಿಗೂ ಮಿಕ್ಕಿದೆ. ಭೂ ವ್ಯಾಪ್ತಿಯು ಅಮೇರಿಕಾದಿಂದ ಎಷ್ಟೋ ಪಟ್ಟು ಕಡಿಮೆಯಿದೆ. ಅಂತೆಯೇ ಜನಸಂಖ್ಯೆಯೂ ಭಾರತದ ಜನಸಂಖ್ಯೆಗಿಂತ 1/5 ಭಾಗ ಮಾತ್ರವಿದೆ. ಅಮೇರಿಕಾದಲ್ಲಿ ಒಂದು ಅಂದಾಜಿನ ಪ್ರಕಾರ ಜಗತ್ತಿನ ಒಟ್ಟು ಜನಸಂಖ್ಯೆಯು 2008ನೇ ಇಸವಿಯಲ್ಲಿ 670 ಕೋಟಿ ಇದೆಯೆಂದು ವಿಶ್ವ ಜನಗಣತಿಯ ಅಂಕಿ ಅಂಶಗಳು ತಿಳಿಸುತ್ತವೆ. ವಿಶ್ವದಲ್ಲಿ ನಿಮಿಷಕ್ಕೆ ಸಾಧಾರಣ 270 ಜನನವಾಗುತ್ತದೆಂದು ವಿಶ್ವ ಜನಸಂಖ್ಯೆಯ ಲೆಕ್ಕಾಚಾರಗಳಿಂದ ತಿಳಿದು ಬರುತ್ತದೆ.

ಜುಲೈ ತಿಂಗಳ 11ರಂದು ವಿಶ್ವಜನಸಂಖ್ಯಾದಿನವೆಂದು ಆಚರಿಸಲಾಗುತ್ತದೆ. ಪ್ರತೀ ಹತ್ತು ವರ್ಷಗಳಿಗೊಮ್ಮೆ ಜನಗಣತಿಯನ್ನು ನಡೆಸಲಾಗುತ್ತದೆ. ಈ ಮೊದಲಿನ ಜನಗಣತಿಯು 2001ರಲ್ಲಿ ನಡೆಯಿತು. ಮುಂದಿನದು 2011ರಲ್ಲಿ ಜರಗಲಿದೆ. ಆಗ ಜಗತ್ತಿನ ಜನಸಂಖ್ಯೆಯ ನಿಖರವಾದ ಲೆಕ್ಕಾಚಾರಗಳು ದೊರೆಯಬಹುದು. ಈ ಜನಸಂಖ್ಯೆಯಲ್ಲಿ ಚೀನಾ, ಹಾಗೂ ಭಾರತದ್ದೇ ಸಿಂಹಪಾಲು.
ಭಾರತಕ್ಕೆ ಸ್ವಾತಂತ್ರ್ಯ ಲಭಿಸುವಾಗ ಇಲ್ಲಿಯ ಜನಸಂಖ್ಯೆಯು 30ರಿಂದ 40ಕೋಟಿಯಷ್ಟಾಗಿತ್ತು . ಈಗ 110ಕೋಟಿಗೂ ಮಿಕ್ಕಿದೆ ಎಂದರೆ ಸ್ವಾತಂತ್ರ್ಯಾನಂತರದ ವರ್ಷಗಳಲ್ಲಿ ಏರಿಕೆ ಎಷ್ಟು ವೇಗವಾಗಿ ಸಾಗಿದೆ ಎಂಬುದೇ ಅಚ್ಚರಿ ಮೂಡಿಸುತ್ತದೆ.
ಭಾರತವು ಒಂದು ಪ್ರಜಾಪ್ರಭುತ್ವ ರಾಷ್ಟ್ರ. ಜಾತ್ಯಾತೀತ ರಾಷ್ಟ್ರವೆಂಬ ಹೆಗ್ಗಳಿಕೆ ಬೇರೆ. ಸಂವಿಧಾನ ಪದ್ಧತಿಯಂತೆ ಆಢಳಿತ ವ್ಯವಸ್ಥೆ ಅಲ್ಲದೆ ಲೋಕರಾಷ್ಟ್ರಗಳಲ್ಲಿ ಅತೀದೊಡ್ಡ `ಲಿಖಿತ' ಸಂವಿಧಾನವೆಂಬ ಪ್ರಶಂಸೆಯೂ ಇದೆ. ಆದರೆ ಸಂವಿಧಾನ ಬದ್ಧವಾಗಿ ಸರಕಾರದ ವ್ಯವಸ್ಥೆ ಇದೆಯೋ ಅಥವಾ ರಾಜಕಾರಣಿಗಳ ಸ್ವಾರ್ಥ ಸಾಧನೆಯ ಫಲವೋ ? ಭಾರತದಲ್ಲಿ ಎಲ್ಲಾ ಪ್ರಜೆಗಳೂ ಸಮಾನರಲ್ಲ. ಜಾತ್ಯಾತೀತ ರಾಷ್ಟ್ರದಲ್ಲಿ ಜಾತಿ ಮಥ ಪಂಥಗಳಿಗೇ ಹೆಚ್ಚಿನ ಒತ್ತು.

ಭಾರತದಲ್ಲಿ ಕಾಶ್ಮೀರ ರಾಜ್ಯಕ್ಕೆ ಹೆಚ್ಚಿನ ಪ್ರಾಧಾನ್ಯತೆ. ಸಂವಿಧಾನದ ವಿಧಿ 370ರ ಪ್ರಕಾರ ಅಲ್ಲಿಗೆ ಹೆಚ್ಚಿನ ಸ್ಥಾನಮಾನ. ಅಲ್ಲಿಯವರು ಭಾರತದ ಎಲ್ಲಿಯೂ ಸಲ್ಲುವರು. ವ್ಯಾಪಾರ , ಉದ್ಯೋಗ, ಭೂಮಿ ಖರೀದಿ ಮುಂತಾದ ವಿಚಾರಗಳಲ್ಲಿ ಭಾರತದ ಮೂಲೆಯಲ್ಲಿಯೂ ಅವರಿಗೆ ಮುಕ್ತವಕಾಶವಿದೆ. ಇನ್ನು ಉಳಿದ ರಾಜ್ಯದ ಪ್ರಜೆಗಳು ಕಾಶ್ಮೀರದಲ್ಲಿ ಆಸ್ತಿ ಪಾಸ್ತಿಯನ್ನು ಹೊಂದುವಂತಿಲ್ಲ. ಖಾಯಂ ಆಗಿ ನೆಲೆಸುವಂತಿಲ್ಲವೆನ್ನುವಾಗ ಭಾರತದ ಎಲ್ಲಾ ಪೌರರೂ ಸಮಾನರಲ್ಲ ಕೆಲವರು ಮಾತ್ರ ಹೆಚ್ಚು ಸಮಾನರು ಎಂಬುದು ಅರ್ಥವಾಗುತ್ತದೆ.

ಭಾರತದ ಜನಸಂಖ್ಯೆ ಏರಿಕೆಗೆ ಬಾಂಗ್ಲಾದೇಶ ಹಾಗೂ ಪಾಕಿಸ್ಥಾನಗಳಿಂದ ನುಸುಳಿ ಬಂದು ಭಾರತದ ನಾನಾ ರಾಜ್ಯಗಳಲ್ಲಿ ಅದರಲ್ಲೂ ಬಂಗಾಳ ಹಾಗೂ ಈಶಾನ್ಯರಾಜ್ಯಗಳಲ್ಲಿ ನೆಲೆಸಿದವರು ಅಧಿಕ. ಅವರ ಸಂಖ್ಯೆ ಮೂರು ಕೋಟಿಗೂ ಮಿಗಿಲಾಗಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೆ ಇಲ್ಲಿನ ಪೌರತ್ವವನ್ನು ಪಡೆಯಲು ಹಾಗೂ ಇಲ್ಲಿಯೇ ಖಾಯಂ ಆಗಿ ನೆಲೆ ನಿಲ್ಲಲೂ ಸ್ಥಳೀಯರ ಹಾಗೂ ರಾಜಕಾರಣಿಗಳ ಕುಮ್ಮಕ್ಕಿನಿಂದ ಸಫಲರೂ ಆಗಿದ್ದಾರೆ.

ಕೇರಳದಲ್ಲಿ 248 ಪಾಕ್ ಪ್ರಜೆಗಳು ಅಕ್ರಮವಾಗಿ ವಾಸ್ತವ್ಯವಿರುವುದಾಗಿ ಕೇರಳದ ಗೃಹಸಚಿವರು ವಿಧಾನ ಸಭೆಯಲ್ಲಿ ಇತ್ತೀಚೆಗೆ ತಿಳಿಸಿದ್ದಾರೆ.
ಭಾರತದ ಇತರ ರಾಜ್ಯಗಳಲ್ಲಿಯೂ ಅವರ ಸಂಖ್ಯೆಯು ಎಷ್ಟು ಇದೆಯೆಂದು ಊಹಿಸಲೂ ಸಾಧ್ಯವಿಲ್ಲ. ಭಾರತದಲ್ಲಿ ಅಲ್ಪಸಂಖ್ಯಾತರನ್ನು ಓಲೈಸುವ ದೃಷ್ಟಿಯಿಂದ ಹಾಗೂ ಕಾನೂನಿನಲ್ಲಿ ಸಡಿಲಿಕೆಗಳು ಹಾಗೂ ಹೆಚ್ಚಿನ ಸೌಲಭ್ಯಗಳು ಕೊಡಲ್ಪಡುತ್ತದೆ. ಒಂದು ಪ್ರಜಾಪ್ರಭುತ್ತ ರಾಷ್ಟ್ರದಲ್ಲಿ ಎರಡು ರೀತಿಯ ಕಾನೂನುಗಳಿಗೆ ಅವಕಾಶವಿರುವುದೇ ದುರಂತ. ಆದುದರಿಂದ ಭಾರತದ ಎಲ್ಲಾ ಪ್ರಜೆಗಳಿಗೂ ಏಕರೀತಿಯ ಸಮಾನ ನಾಗರೀಕ ಸಂಹಿತೆ ಯನ್ನು ತರಬೇಕು ಹೊರತು ಮತ, ಧರ್ಮಗಳ ಆದಾರದಲ್ಲಿಲ್ಲ.

ಕುಟುಂಬ ಯೋಜನೆ ವಿವಾಹ ಕಾನೂನು ಬಹುಸಂಖ್ಯಾತರಿಗೆ ಕಡ್ಡಾಯ ಆದರೆ ಅಲ್ಪಸಂಖ್ಯಾತರೆಂದು ಕರೆಯಲ್ಪಡುವ ಇಸ್ಲಾಂ ಧರ್ಮದವರಿಗೆ ಅದು ವಿರೋಧವಂತೆ. ಅವರಿಗೆ ಅವರ ವೈಯಕ್ತಿಕ ಕಾನೂನಿನಂತೆ ಸಾಧ್ಯವಿಲ್ಲ ಎಂಬ ಪ್ರತಿರೋಧ . ಇದರಿಂದಾಗಿ ಜನಸಂಖ್ಯೆಯು ದಿನೇ ದಿನೇ ಏರುತ್ತಾ ಹೋಗುತ್ತದೆ.ಒಬ್ಬ ಇಸ್ಲಾಂ ಧರ್ಮದವನು ಮೂರೋ ನಾಲ್ಕೋ ಮುದುವೆಯಾಗಿ ಎಷ್ಟೋ ಮಕ್ಕಳನ್ನು ಪಡೆದರೂ ತಪ್ಪಲ್ಲ. ಬಹುಸಂಖ್ಯಾತರೆಂದು ಕರೆಯಲ್ಪಡುವವರು ಏಕಪತ್ನೀ ವೃತರಾಗಿ ಎರಡು ಮಕ್ಕಳಿಂದ ಹೆಚ್ಚು ಮಕ್ಕಳನ್ನು ಪಡೆಯುವಂತಿಲ್ಲ. ಮತಾಂತರ , ಲವ್ ಜೆಹಾದ್ ಮೊದಲಾದವುಗಳೂ ಜನಸಂಖ್ಯಾ ಹೆಚ್ಚಳದಲ್ಲಿ ಮುಖ್ಯಪಾತ್ರವಹಿಸುತ್ತವೆ. ಇದೇರೀತಿ ಭಾರತದ ಜನಸಂಖ್ಯೆಯು ಏರುತ್ತಾ ಇದ್ದರೆ ಮುಂದಿನ ವರ್ಷಗಳಲ್ಲಿ ಭಾರತದ ಜನಸಂಖ್ಯೆಯ ಪ್ರಮಾಣ ಎಷ್ಟಾಗಬಹುದೆಂದು ಊಹಿಸಲೂ ಸಾಧ್ಯವಿಲ್ಲ.

ಜಾಗತೀಕರಣ, ಕೈಗಾರಿಕೆಗಳಿಗೆ ಮಿತಿಮೀರಿದ ಪ್ರೋತ್ಸಾಹವೆಂಬ ಕಾರಣದಿಂದಾಗಿ ಕೃಷಿ ಭೂಮಿ ನಶಿಸುತ್ತಾ ಹೋಗುವುದಲ್ಲದೆ ಕೈಗಾರಿಕಾ ಘಟಕಗಳಿಂದ ಹೊರಸೂಸುವ ಗಾಳಿ, ತ್ಯಾಜ್ಯಗಳಿಂದಾಗಿ ವಾಯುಮಾಲಿನ್ಯ ಪರಿಸರಮಾಲಿನ್ಯ ಕಲುಷಿತ ನೀರು ಸೇವನೆಗಳಿಂದ ಹೆಚ್ಚುತ್ತಿರುವ ಅನಾರೋಗ್ಯ ಅಂಗವಿಕಲತೆಗಳು ಜನರ ಮೇಲೆ ಎಷ್ಟು ಪರಿಣಾಮವನ್ನು ಬೀರುತ್ತದೆಯೆಂಬುದು ನಗ್ನಸತ್ಯ.ಜನಸಂಖ್ಯೆ ಏರಿದಂತೆಲ್ಲಾ ಭೂಮಿಯ ವ್ಯಾಪ್ತಿಯು ಏರುವುದಿಲ್ಲ. ಅಲ್ಲದೆ ಫಲವತ್ತಾದ ಕೃಷಿ ಭೂಮಿಗಳೂ ದೊಡ್ಡ ದೊಡ್ಡ ಕೈಗಾರಿಕಾ ಕಂಪೆನಿಗಳ ಪಾಲಾಗುತ್ತವೆ. ಇದರಿಂದಾಗಿ ಕೃಷಿ ಪ್ರಮಾಣವು ಕುಂಠಿತವಾಗುತ್ತಾ ಸಾಗುತ್ತದೆ. ಇನ್ನು ಕೆಲವೇ ವರ್ಷಗಳಲ್ಲಿ ಭಾರತದಂತಹ ಅಭಿವೃದ್ಧಿಶೀಲ ದೇಶಗಳಲ್ಲಿ ಒಪ್ಪೊತ್ತಿನ ತುತ್ತು ಅನ್ನಕ್ಕೂ ಮೂಲಭೂತ ಸೌಕರ್ಯಗಳಿಗೂ ಪರದಾಡುವ ಸ್ಥಿತಿ ಬರುವುದರಲ್ಲಿ ಸಂದೇಹವಿಲ್ಲ.

- ಚಂದ್ರಶೇಖರ ಭಟ್ ಆದೂರು.

0 comments:

Post a Comment