ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಆಟ - ಅವಲೋಕನ

ಬೆಂಗಳೂರು: ಕಾಮನ್ವೆಲ್ತ್ ಕ್ರೀಡಾ ಕೂಟದ ಕ್ವೀನ್ಸ್ ಬ್ಯಾಟನ್ 70 ಕಾಮನ್ವೆಲ್ತ್ ದೇಶಗಳು ಮತ್ತು ಭಾರತದ ಹಲವು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಸಂಚರಿಸಿ ಸೆಪ್ಟೆಂಬರ್ 1, 2010 ರಂದು ರಾಜ್ಯಕ್ಕೆ ತಮಿಳುನಾಡಿನಿಂದ ಚಾಮರಾಜನಗರದ ಗಡಿಭಾಗವಾದ ಚಿಕ್ಕನಹಳ್ಳಿಗೆ ಮದ್ಯಾಹ್ನ 12.30 ಗಂಟೆಗೆ ಆಗಮಿಸಲಿದೆ. ಕ್ವೀನ್ಸ್ ಬ್ಯಾಟನ್ ರಾಜ್ಯಕ್ಕೆ ಆಗಮಿಸಿದಾಗ, ಕರ್ನಾಟಕ ಓಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಕೆ. ಗೋವಿಂದರಾಜ ಮತ್ತು ಸಂಸದರು ಸ್ವಾಗತಿಸಲಿದ್ದಾರೆ. ಈ ವಿಷಯವನ್ನು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ ಜವಳಿ, ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಗೂಳಿಹಟ್ಟಿ ಡಿ. ಶೇಖರ್ ಅವರು ಕ್ವೀನ್ಸ್ ಬ್ಯಾಟನ್ ರಿಲೆಯು ರಾಜ್ಯದ ಮೈಸೂರು, ಬೆಂಗಳೂರು, ಹಾಸನ, ಮಂಗಳೂರು ಮತ್ತು ಕಾರವಾರ ಜಿಲ್ಲೆಗಳಲ್ಲಿ ಸಂಚರಿಸಲಿದೆ. ಸೆಪ್ಟೆಂಬರ್ 07, 2010 ರಂದು ಕಾರವಾರದ ಮುಖಾಂತರ ಗೋವಾ ರಾಜ್ಯಕ್ಕೆ ತೆರಳಲಿದೆ ಎಂದರು. ಸೆಪ್ಟೆಂಬರ್ 1, 2010 ರಂದು ಚಾಮರಾಜನಗರದ ಬಂಡಿಪುರ, ಗುಂಡ್ಲುಪೇಟೆ, ನಂಜನಗೂಡು ಮಾರ್ಗವಾಗಿ ಸಂಚರಿಸಿ ಮದ್ಯಾಹ್ನ 3.00 ಗಂಟೆಗೆ ಮೈಸೂರು ನಗರವನ್ನು ತಲುಪಿ ನಗರದಲ್ಲಿ ಸಂಚರಿಸಲಿದೆ. ಸಂಜೆ 07.00 ಗಂಟೆಗೆ ಅರಮನೆಯ ಆವರಣದಲ್ಲಿ ಮೈಸೂರು ನಾಡಿನ ಸಂಸ್ಕೃತಿ ಮತ್ತು ಚರಿತ್ರೆಯನ್ನು ಸಾರುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಸಚಿವರು ತಿಳಿಸಿದರು.ಸೆಪ್ಟೆಂಬರ್ 2, 2010 ರಂದು ಕ್ವೀನ್ಸ್ ಬ್ಯಾಟನ್ ರಿಲೆಯು ಮೈಸೂರಿನಿಂದ ಹೊರಟು ಬೆಂಗಳೂರಿಗೆ ಸಂಜೆ 03.00 ಗಂಟೆಗೆ ಆಗಮಿಸಲಿದೆ. ಕ್ವೀನ್ಸ್ ಬ್ಯಾಟನ್ ರಿಲೆಯನ್ನು ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಸಂಜೆ 4.00 ಗಂಟೆಗೆ ಮಾನ್ಯ ಮುಖ್ಯಮಂತ್ರಿಗಳು ಬರಮಾಡಿಕೊಳ್ಳಲಿದ್ದಾರೆ. ಅಂಚೆ ಇಲಾಖೆಯು ಸಿದ್ದಪಡಿಸಿರುವ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಸಂಬಂಧಿಸಿದ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಗುವುದು. ರಿಲೆಯಲ್ಲಿ ಮಾಜಿ ಬ್ಯಾಡಮಿಂಟನ್ ವಿಶ್ವ ಚಾಂಪಿಯನ್ ಪ್ರಕಾಶ್ ಪಡಕೋಣೆ, 60ರ ದಶಕದ ಖ್ಯಾತ ಓಟಗಾರ ಕೆನೆತ್ ಪೊವೆಲ್ ಹಾಗೂ ರಾಜ್ಯದ ಅರ್ಜುನ್ ಮತ್ತು ದ್ರೋಣಾಚಾರ್ಯ ಪ್ರಶಸ್ತಿ ವಿಜೇತರು, ಹೆಸರಾಂತ ಅಂತರ್ ರಾಷ್ಟ್ರೀಯ ಕ್ರೀಡಾಪಟುಗಳು, ವಿವಿಧ ಕ್ರೀಡಾ ಸಂಸ್ಥೆಯ ಪದಾಧಿಕಾರಿಗಳು, ಶಾಲಾ ಮಕ್ಕಳು, ಸಚಿವರು, ಶಾಸಕರು, ಮಹಾ ಪೌರರು, ಚಲನಚಿತ್ರ ನಟ-ನಟಿಯರು, ಗಣ್ಯ ವ್ಯಕ್ತಿಗಳು ಪಾಲ್ಗೊಳ್ಳಲಿದ್ದಾರೆ. ಸಂಜೆ 7.00 ಗಂಟೆಗೆ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಸೆಪ್ಟೆಂಬರ್ 02, 2010 ರಂದು ಕಾಮನ್ವೆಲ್ತ್ ಕ್ರೀಡಾಕೂಟದ ಕ್ವೀನ್ಸ್ ಬ್ಯಾಟನ್ ರಿಲೇಯು ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಸಂಚರಿಸಲಿದೆ. ಸೆಪ್ಟೆಂಬರ್ 3, 2010 ರಂದು ಬೆಂಗಳೂರಿನಲ್ಲಿಯೇ ಉಳಿಯಲಿದೆ.

ಸೆಪ್ಟೆಂಬರ್ 04 ರಂದು ಬೆಂಗಳೂರಿನಿಂದ ಹೊರಟ ಬ್ಯಾಟನ್ ರಿಲೇ ಹಾಸನ, ಸೆಪ್ಟೆಂಬರ್ 5 ರಂದು ಮಂಗಳೂರು, ಸೆಪ್ಟೆಂಬರ್ 06 -ಉಡುಪಿ, ಕಾರವಾರ, ಅನಂತರ ಸೆಪ್ಟೆಂಬರ್ 7 ರಂದು ಗೋವಾ ರಾಜ್ಯಕ್ಕೆ ತೆರಳಲಿದೆ.

ರಾಜ್ಯದಲ್ಲಿ ಕ್ವೀನ್ಸ್ ಬ್ಯಾಟನ್ ರಿಲೇಯನ್ನು ರಾಜ್ಯ ಸರ್ಕಾರವು ಕರ್ನಾಟಕ ಒಲಂಪಿಕ್ ಸಂಸ್ಥೆ, ರಾಜ್ಯ ಅಥ್ಲೆಟಿಕ್ ಸಂಸ್ಥೆ ಮತ್ತು ಇನ್ನಿತರ ಕ್ರೀಡಾ ಸಂಸ್ಥೆಗಳ ಸಹಕಾರದೊಂದಿಗೆ ಸಂಘಟಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಲಾಗಿದೆಯೆಂದು ಸಚಿವರು ತಿಳಿಸಿದರು.

0 comments:

Post a Comment