ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

"ಮಾಧ್ಯಮ : ಪ್ರಸ್ತುತಸ್ಥಿತಿ"

ಮೂಡಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಪ್ರವರ್ತಿತ ಆಳ್ವಾಸ್ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಆ.13 ಮತ್ತು 14ರಂದು ಮಂಗಳೂರು ವಿ.ವಿ. ಮಟ್ಟದ ಎರಡು ದಿನಗಳ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. "ಮಾಧ್ಯಮ : ಪ್ರಸ್ತುತಸ್ಥಿತಿ" (ಮೀಡಿಯಾ: ಪ್ರಸೆಂಟ್ ಸಿನಾರಿಯೋ) ವಿಷಯದಲ್ಲಿ ಆಳ್ವಾಸ್ ಕಾಲೇಜು ವಿದ್ಯಾಗಿರಿಯ ಶಿವರಾಮ ಕಾರಂತ ವೇದಿಕೆಯಲ್ಲಿ ಕಾರ್ಯಾಗಾರ ನಡೆಯಲಿದೆ.
13ರಂದು ಬೆಳಗ್ಗೆ 9.30ಕ್ಕೆ ಪತ್ರಕರ್ತ ಬಾಲಕೃಷ್ಣ ಹೊಳ್ಳ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ವಹಿಸುವರು. ಪ್ರಾಂಶುಪಾಲ ಪ್ರೊ.ಕುರಿಯನ್ ಉಪಸ್ಥಿತರಿರುವರು. ಆ.14ರಂದು ಸಂಜೆ 3ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಪತ್ರಕರ್ತ ರೊನಾಲ್ಡ್ ಅನಿಲ್ ಫೆರ್ನಾಂಡೀಸ್ ಮುಖ್ಯ ಅತಿಥಿಗಳು. ಪ್ರಾಂಶುಪಾಲ ಪ್ರೊ.ಕುರಿಯನ್ ಉಪಸ್ಥಿತರಿರುವರು.ಒಟ್ಟು ನಾಲ್ಕು ಗೋಷ್ಠಿಗಳು ನಡೆಯಲಿವೆ. ಪ್ರಥಮ ಗೋಷ್ಠಿಯಲ್ಲಿ ಪತ್ರಕರ್ತ ಈಶ್ವರ ದೈತೋಟ, ದ್ವಿತೀಯ ಗೋಷ್ಠಿಯಲ್ಲಿ ಕ.ರಾ.ಮು.ವಿ.ವಿ. ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಶೈಲೇಶ್ ರಾಜ್ ಅರಸ್ ಉಪನ್ಯಾಸ ನೀಡುವರು. ತೃತೀಯ ಗೋಷ್ಠಿಯಲ್ಲಿ ಚಂದನ ವಾಹಿನಿಯ ಉಪನಿರ್ದೇಶಕ ಎ.ಎಸ್. ಚಂದ್ರಮೌಳಿ, ಹಾಗೂ ನಾಲ್ಕನೇ ಗೋಷ್ಠಿಯಲ್ಲಿ ಮಣಿಪಾಲ ಸಮುದಾಯ ರೇಡಿಯೋ ಸಂಯೋಜಕ ಕೆ.ಶ್ಯಾಮ್ ಭಟ್ ಉಪನ್ಯಾಸ ನೀಡುವರು. ಮಂಗಳೂರು ವಿ.ವಿ. ಮಟ್ಟದ ಪತ್ರಿಕೋದ್ಯಮ ವಿದ್ಯಾರ್ಥಿಗಳು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಾಕ್ಷ್ಯಚಿತ್ರ ಬಿಡುಗಡೆ: ಉದ್ಘಾಟನಾ ಸಮಾರಂಭದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಸಿದ್ಧಪಡಿಸಿದ 3 ಸಾಕ್ಷ್ಯಚಿತ್ರಗಳ ಬಿಡುಗಡೆ ನಡೆಯಲಿವೆ. `ಕ್ಯಾಫಿಟೇರಿಯಾ: ಇದು ನಮ್ಮ ಏರಿಯಾ' , `ಕಾಂತಾಬಾರೆ ಬೂದಾಬಾರೆ ' ಹಾಗೂ `ತುಳು ಗ್ರಾಮ ' ವಿಷಯದಲ್ಲಿ ಸಿದ್ಧಪಡಿಸಿದ ಸಾಕ್ಷ್ಯಚಿತ್ರಗಳನ್ನು ಬಿಡುಗಡೆಗೊಳಿಸಲಾಗುತ್ತದೆ.

0 comments:

Post a Comment