ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಮೂಡಬಿದಿರೆ: ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ಆ.15ರಂದು ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ಬೆಳಗ್ಗೆ 9.30ಕ್ಕೆ ಸರಿಯಾಗಿ ಸ್ವಾತಂತ್ರ್ಯೋತ್ಸವವನ್ನು ಅಭೂತಪೂರ್ವವಾಗಿ ನಡೆಸಲುದ್ದೇಶಿಸಲಾಗಿದೆ. ಆಳ್ವಾಸ್ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳು, ಉಪನ್ಯಾಸಕರು, ಸಿಬ್ಬಂದಿವರ್ಗ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು ಏಕಕಾಲದಲ್ಲಿ 8ಸಾವಿರಕ್ಕೂ ಅಧಿಕ ಮಂದಿ ಧ್ವಜವಂದನೆ ಸಲ್ಲಿಸಲಿದ್ದಾರೆ. ಇದು ಅಭೂತಪೂರ್ವಕಾರ್ಯಕ್ರಮವಾಗಿ ಮೂಡಿಬರಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿಕ್ಷಣಸಂಸ್ಥೆಯೊಂದು ಏಕಕಾಲದಲ್ಲಿ ಒಂದೆಡೆ ಎಂಟುಸಾವಿರಕ್ಕೂ ಮಿಕ್ಕಿದ ಸಂಖ್ಯೆಯಲ್ಲಿ ವ್ಯವಸ್ಥಿತವಾಗಿ ಶಿಸ್ತುಬದ್ಧವಾಗಿ ಸೇರಿಕೊಂಡು ರಾಷ್ಟ್ರಧ್ವಜಕ್ಕೆ ಗೌರವವಂದನೆ ಸಲ್ಲಿಸುವುದು ಹಾಗೂ ಸ್ವಾತಂತ್ರ್ಯೋತ್ಸವವನ್ನು ಗೌರವಪೂರ್ಣವಾಗಿ ಆಚರಿಸುತ್ತಿರುವುದು ಗಮನಾರ್ಹ ಸಂಗತಿಯಾಗಿದೆ. ಮಂಗಳೂರು ವಿ.ವಿ. ಇಂಗ್ಲಿಷ್ ವಿಭಾಗದ ರೀಡರ್ ಡಾ.ರವಿಶಂಕರ ರಾವ್ ಮುಖ್ಯಅತಿಥಿಗಳು. ನಿಗಧಿತ ಸಮಯಕ್ಕೆ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ.
ಹುಟ್ಟುಹಬ್ಬ ಆಚರಣೆ: ಇದೇ ಸಂದರ್ಭದಲ್ಲಿ ಮಿಜಾರುಗುತ್ತು ಆನಂದ ಆಳ್ವರ 91ನೇ ಹುಟ್ಟುಹಬ್ಬದ ಆಚರಣೆಯೂ ನಡೆಯಲಿದೆ. ಸಹರಾ ಎಜ್ಯುಕೇಷನ್ ಟ್ರಸ್ಟ್ ಮಂಗಳೂರು ಇದರ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಅತಿಥಿಗಳು. ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಬಾಲಕ ಬಾಲಕಿಯರ ವಸತಿಗೃಹಗಳ ಉದ್ಘಾಟನೆ, ಪದವಿಪೂರ್ವ ಕಾಲೇಜಿನ ಬಾಲಕರ ವಸತಿಗೃಹಗಳ ಉದ್ಘಾಟನೆಯೂ ನಡೆಯಲಿವೆ.

0 comments:

Post a Comment