ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ
ಐವತ್ತು ಮತ್ತು ಅರವತ್ತರ ದಶಕಗಳ ಮಾತು. ನಾನಾಗ ವಿದ್ಯಾರ್ಥಿ. ದೂರದರ್ಶನವಾಗಲೀ ಅಂತರ್ಜಾಲವಾಗಲೀ ಇಲ್ಲದಿದ್ದ ಕಾಲವದು. ಹಿಂದಿ ಚಲನಚಿತ್ರಗಳೆಂದರೆ ನನಗಾಗ ಬಲು ಇಷ್ಟ. ಕಾರಣ ಅವುಗಳಲ್ಲಿರುತ್ತಿದ್ದ ಮಧುರವಾದ ಹಾಡುಗಳು ಮತ್ತು ಸಾಕಷ್ಟು ಹಿಂದಿ ಚಿತ್ರಗಳಲ್ಲಿ ನಾವಾಗ ಕಾಣುತ್ತಿದ್ದ ಪ್ರಶಾಂತ ಕಾಶ್ಮೀರದ ಸುಂದರ ದೃಶ್ಯಗಳು. ಕಾಶ್ಮೀರದಲ್ಲಿ ಚಿತ್ರೀಕರಣವು ಭಾರತೀಯ ಚಲನಚಿತ್ರಗಳಿಗೆ, ಅದರಲ್ಲೂ ಹೆಚ್ಚಾಗಿ ಹಿಂದಿ ಚಲನಚಿತ್ರಗಳಿಗೆ ಆ ದಿನಗಳಲ್ಲಿ ಸಾಮಾನ್ಯ ಸಂಗತಿಯಾಗಿತ್ತು. ಎಪ್ಪತ್ತರ ದಶಕದಲ್ಲೂ ಕಾಶ್ಮೀರದಲ್ಲಿ ಚಿತ್ರೀಕರಣ ಭರಾಟೆಯಿಂದ ನಡೆಯುತ್ತಿತ್ತು. 'ಕಾಶ್ಮೀರ್ ಕೀ ಕಲಿ', 'ಜಂಗ್ಲಿ', 'ಜಬ್ ಜಬ್ ಫೂಲ್ ಖಿಲೆ', 'ವಖ್ತ್', 'ಬೈರಾಗ್', ಕಭೀ ಕಭೀ', 'ಆಪ್ ಕೀ ಕಸಮ್', 'ರೋಟಿ', ಇಂತಹ ಚಿತ್ರಗಳ ಸಾಲುಸಾಲೇ ಆ ದಿನಗಳಲ್ಲಿ ನಮಗೆ ಸುಂದರ-ಪ್ರಶಾಂತ ಕಾಶ್ಮೀರದ ದರ್ಶನ ಮಾಡಿಸುತ್ತಿದ್ದವು. ಜೀವನದಲ್ಲೊಮ್ಮೆ ಕಾಶ್ಮೀರಕ್ಕೆ ಭೆಟ್ಟಿ ನೀಡಬೇಕೆಂಬ ಬಯಕೆ ಆಗ ಬಹುತೇಕ ಭಾರತೀಯರದಾಗಿತ್ತು. ಅದೇ ಕಾಶ್ಮೀರ ಈಗ ಹೊತ್ತಿ ಉರಿಯುತ್ತಿದೆ. ವ್ಯಕ್ತಿಯೊಬ್ಬನ ಸಾವು ನೆಪವಾಗಿ ಅಲ್ಲಿ ಕಳೆದ ಜೂನ್ 12ರಂದು ಭುಗಿಲೆದ್ದ ಹಿಂಸಾಚಾರ ಮೂರು ವಾರ ಕಳೆದರೂ ಇನ್ನೂ ನಿಂತಿಲ್ಲ. ಶ್ರೀನಗರದಲ್ಲಿ ಎದ್ದ ಜ್ವಾಲೆ ಈಗ ಜಮ್ಮುವಿಗೂ ಹಬ್ಬಿದೆ. ಈಗಾಗಲೇ ನಲವತ್ತಕ್ಕೂ ಹೆಚ್ಚು ಮಂದಿ ಪ್ರಾಣ ತೆತ್ತಿದ್ದಾರೆ. 'ಲಷ್ಕರ್-ಎ-ತಯ್ಬಾ' ಉಗ್ರ ಸಂಘಟನೆ ಹಿಂಸಾಚಾರವನ್ನು ಪ್ರೋತ್ಸಾಹಿಸುತ್ತಿದೆ. ಕಾಶ್ಮೀರದ ಹೆಸರೆತ್ತಿದರೆ ಈಗ ಭಾರತೀಯರು ಬೆಚ್ಚಿಬೀಳುವಂತಾಗಿದೆ. ಹೇಗಿದ್ದ ಕಾಶ್ಮೀರ ಹೇಗಾಯಿತು!

ಎಚ್. ಆನಂದರಾಮ ಶಾಸ್ತ್ರೀ

0 comments:

Post a Comment