ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಸೆ.2 ರಿಂದ 7

ಮೂಡಬಿದಿರೆ: ಲಲಿತಕಲಾ ಅಕಾಡೆಮಿ ಚೆನ್ನೈ ಪ್ರಾಂತೀಯ ಶಾಖೆ ಹಾಗೂ ಮೂಡಬಿದಿರೆಯ ಆಳ್ವಾಸ್ ಎಜುಕೇಷನ್ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ 6 ದಿನಗಳ ಅಂತರ್ ಪ್ರಾಂತೀಯ (ಇಂಟರ್ ರೀಜನಲ್) ಕಲಾವಿದರ ಶಿಬಿರ ( "ಪೈಂಟರ್ಸ್ ಕ್ಯಾಂಪ್" )ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಕ್ಯಾಂಪಸ್ ನಲ್ಲಿ ನಡೆಯಲಿದೆ.ಲಲಿತಕಲಾ ಅಕಾಡೆಮಿ ಇದೇ ಮೊದಲ ಬಾರಿಗೆ ಮೂಡಬಿದಿರೆಯಲ್ಲಿ ಆಯೋಜಿಸುತ್ತಿರುವ ಈ ಶಿಬಿರವನ್ನು ಸೆ.2ರಂದು ಬೆಳಗ್ಗೆ 11ಗಂಟೆಗೆ ಆಳ್ವಾಸ್ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಉದ್ಘಾಟಿಸಲಿದ್ದಾರೆ. ಸೆ.7ರ ತನಕ ಶಿಬಿರ ನಿರಂತರವಾಗಿ ನಡೆಯಲಿದೆ.ಕೇಂದ್ರ ಲಲಿತಕಲಾ ಅಕಾಡೆಮಿ ಸದಸ್ಯ, ಹಿರಿಯ ಕಲಾವಿದ ಜೆ.ಎಂ.ಎಸ್.ಮಣಿ ಸಭಾಧ್ಯಕ್ಷತೆ ವಹಿಸುವರು. ಕರ್ನಾಟಕ, ಕೇರಳ, ಆಂಧ್ರ, ಮಹಾರಾಷ್ಟ್ರ, ತಮಿಳ್ನಾಡು, ಗೋವಾ ಮೊದಲಾದ ಕಡೆಗಳಿಂದ ಬಂದ 24ಕಲಾವಿದರು ಈ ಶಿಬಿರದಲ್ಲಿ ಪಾಲ್ಗೊಂಡು ಎರಡೆರಡು ಕಾಲಕೃತಿಗಳನ್ನು ರಚಿಸಲಿದ್ದಾರೆ.ವಿವಿಧ ಪ್ರಾಂತ್ಯಗಳಲ್ಲಿರುವ ಹಿರಿಯ ಕಲಾವಿದರನ್ನು ಒಂದೆಡೆ ಕಲೆಹಾಕಿ ಕಲಾಭಿವ್ಯಕ್ತಿಗೊಳಿಸುವ ಮೂಲಕ ಈ ಪರಿಸರದ ಜನತೆಗೆ ಹಿರಿಯ ಕಲಾವಿದರೊಂದಿಗೆ ಉತ್ತಮ ಒಡನಾಟಮೂಡಿಸುವುದು ಹಾಗೂ , ಕಲೆಯ ವೈವಿಧ್ಯತೆಗಳ ಹಾಗೂ ಸಾಧ್ಯತೆಗಳ ಕುರಿತಾದ ವಿಭಿನ್ನ ನೋಟಗಳನ್ನು ಪ್ರದರ್ಶಿಸುವುದು ಶಿಬಿರದ ಉದ್ದೇಶವಾಗಿದೆ.ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆ ತನ್ನ ವಿರಾಸತ್ ಹಾಗೂ ನುಡಿಸಿರಿಗಳ ಸಂದರ್ಭದಲ್ಲಿ ಆಯೋಜಿಸುತ್ತಿರುವ ರಾಷ್ಟ್ರೀಯ ಮಟ್ಟದ ಕಲಾಶಿಬಿರಗಳಿಂದ ಆಸಕ್ತಿಹೊಂದಿದ ಲಲಿತಕಲಾ ಅಕಾಡೆಮಿ ಈ ಬಾರಿಯ ಶಿಬಿರವನ್ನು ಆಳ್ವಾಸ್ ನಲ್ಲಿ ನಡೆಸಲುದ್ದೇಶಿಸಿದ್ದು ಉಲ್ಲೇಖಾರ್ಹ. ಅಕಾಡೆಮಿಯು ಕಳೆದಬಾರಿ ಗೋವಾದಲ್ಲಿ ಪ್ರಾಂತೀಯ ಕಲಾವಿದರ ಶಿಬಿರ ನಡೆಸಿತ್ತು.ಶಿಬಿರದಲ್ಲಿ ರಾಷ್ಟ್ರೀಯಮಟ್ಟದಲ್ಲಿ ಹೆಸರು ಪಡೆದ 19ಪುರುಷ ಹಾಗೂ 5ಮಹಿಳಾ ಕಲಾವಿದರು ಪಾಲ್ಗೊಳ್ಳಲಿದ್ದಾರೆ.

0 comments:

Post a Comment