ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಮೂಡಬಿದಿರೆ: ಒಂದೊಮ್ಮೆ ದೇಶಪ್ರೇಮದ ಸಂಕೇತವಾಗಿದ್ದ ಖಾದಿ ಇಂದು ಭ್ರಷ್ಟತೆಯ ಸಂಕೇತವಾಗಿ ರಾರಾಜಿಸುತ್ತಿದೆ ಎಂದು ಮಂಗಳೂರು ವಿ.ವಿ. ಆಂಗ್ಲವಿಭಾಗದ ರೀಡರ್ ಡಾ.ರವಿಶಂಕರ್ ರಾವ್ ಖೇದ ವ್ಯಕ್ತಪಡಿಸಿದರು.ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ಮೂಡಬಿದಿರೆಯ ವಿದ್ಯಾಗಿರಿಯಲ್ಲಿ ರವಿವಾರ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ಗೈದು ಮಾತನಾಡಿದರು.ಆಳ್ವಾಸ್ ಸಮೂಹ ಸಂಸ್ಥೆಗಳ 8ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿವೃಂದ ಶಿಸ್ತಿನಿಂದ ಪಾಲ್ಗೊಂಡ ಸಭೆಯನ್ನುದ್ದೇಶಿಸಿ ಮಾತನಾಡಿದ ರವಿಶಂಕರ್, ಮನೋಭಾವ, ಸಂಬಂಧ, ಯೋಚನಾಶಕ್ತಿ ಇವುಗಳ ಮೇಲೆ ಅವಕಾಶಗಳು ತೆರೆದಿರುತ್ತವೆ ಎಂದು ಹೇಳಿದರು.
ದೇಶದುದ್ದಗಲಕ್ಕೊಮ್ಮೆ ಅವಲೋಕಿಸಿದರೆ ಶೇ.60ಕ್ಕಿಂತಲೂ ಅಧಿಕ ಮಂದಿ ಇಂದು ರು.20ಕ್ಕಿಂತಲೂ ಕಡಿಮೆ ಹಣದಲ್ಲಿ ದಿನದೂಡುವ ಸ್ಥಿತಿ ಕಂಡುಬರುತ್ತಿದೆ. ಸಮಾನತೆ , ಸಮೃದ್ಧಿ,ಶಾಂತಿಯ ಭಾವಗಳ ನಡುವೆಯೂ ನಿರಾಶೇ, ಅವಮಾನ, ಹತಾಶೆಗಳು ವೈಭವೀಕರಿಸುತ್ತಿದೆ ಎಂದು ಮಾರ್ಮಿಕವಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಆಡಳಿತಾಧಿಕಾರಿ ಡಾ.ಪ್ರಭಾಕರ ಶೆಟ್ಟಿ ಉಪಸ್ಥಿತರಿದ್ದರು. ಮಿಜಾರುಗುತ್ತು ಆನಂದ ಆಳ್ವ ಅವರ 91ನೇ ಹುಟ್ಟುಹಬ್ಬದ ಆಚರಣೆ, ಕುಮಾರಧಾರಾ, ಕಾವೇರಿ, ಗಂಗಾ ಹಾಸ್ಟೆಲ್ ಗಳ ಉದ್ಘಾಟನಾ ಸಮಾರಂಭವೂ ನಡೆಯಿತು.
0 comments:

Post a Comment