ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಮೂಲ್ಕಿ :ಎನ್ ಕೌಂಟರ್ ಅಂದ್ರೆ ಏನು ಸರ್..?, ಪೋಲೀಸ್ ಸ್ಟೇಶನ್ ಫಿಲ್ಮಿನಲ್ಲಿ ನೋಡಿದ್ದೇವೆ ಅದು ಈತರಹ ಯಾಕಿಲ್ಲ ? ನಮ್ಮ ರಕ್ಷಣೆಗೆ ಇನ್ನೊಬ್ಬರನ್ನು ಕೊಂದರೆ ಅದು ಅಪರಾದವಾ, ಕಳ್ಳ ಕಾಕರನ್ನು ಇರಿಸುವ ಸೆರೆಮನೆ ಎಲ್ಲಿ..? ಇದು ಮೂಲ್ಕಿ ಠಾಣೆಗೆ ಕಳೆದ ಕೆಲವು ದಿನಗಳಿಂದ ಸ್ಥಳೀಯ ಶಾಲೆಯ ವಿದ್ಯಾ ರ್ಥಿಗಳು ಭೇಟಿ ನೀಡಿದಾಗ ಕೇಳುತ್ತಿರುವ ಬಹು ಮುಖ್ಯ ಪ್ರಶ್ನೆಗಳು.ಯುವ ಜನತೆಯಲ್ಲಿ ಮುಖ್ಯವಾಗಿ ಮಕ್ಕಳಿಗೆ ಪೊಲೀಸರ ಮೇಲೆ ವಿಶ್ವಾಸ ಇರಬೇಕು ಮತ್ತು ಪೋಲೀಸರ ಕಾರ್ಯ ವೈಖರಿಯ ಬಗ್ಗೆ ಮಕ್ಕಳಿಗೆ ತಿಳಿಸಬೇಕು ಎಂಬ ಎನ್ನುವ ದೃಷ್ಠಿಯಿಂದ ಸ್ಥಳೀಯ ಠಾಣೆಗೆ ಭೇಟಿ ನೀಡುವ ಕಾರ್ಯಕ್ರಮವು ಪೊಲೀಸ್ ಕಮಿಷನರೇಟ್ ಆದ ನಂತರ ಹಲವಾರು ಯೋಜನೆಗಳನ್ನು ಆಯುಕ್ತರು ತರುತ್ತಿದ್ದು ಅದರಂತೆ ಈ ಕಾರ್ಯಕ್ರಮ ಮೂಲ್ಕಿಯಲ್ಲಿಯೂ ನಡೆಯುತ್ತಿದೆ.ಠಾಣೆಯ ಹೆಡ್ ಕಾನ್ಸ್ಟೇಬಲ್ ಚಂದಪ್ಪನವರು ಪೊಲೀಸರಲ್ಲಿ ಇರುವ ಬಂದೂಕು, ಬುಲ್ಲೆಟ್, ಕೈಕೋಳ, ಗಲಭೆನಿಯಂತ್ರಣಕ್ಕೆ ಬಳಸುವ ಪಂಪ್ ಆಕ್ಷನ್ ಗನ್, ಲಾಟಿಗಳು, ಕೆಲಸ ಏನು ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಯುವಂತೆ ಸರಳವಾಗಿ ಸವಿವರವಾಗಿ ತಿಳಿಸಿದರು.
ಮೂಲ್ಕಿ ಸಬ್ ಇನ್ಸ್ಪೆಕ್ಟರ್ ಮುನಿಸ್ವಾಮಿ ನೀಲಕಂಠಯ್ಯ ಎಳೆಯ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ ಪೊಲೀಸರ ಕಾರ್ಯವೈಖರಿ,ಪೋಲೀಸ್ ಆಗಲು ಬೇಕಾದ ವಿದ್ಯಾಭ್ಯಾಸ, ಸೇನೆ, ಐಎಎಸ್, ಸಿಐಡಿ, ಸಿಒಡಿ, ಸಿಬಿಐ, ಎನ್ಸಿಸಿ, ಅಪರಾದ, ಕಳವು, ಆರೋಪಿಗಳ ತನಿಖೆ, ಮಹಿಳೆಯರ ಮೇಲಿನ ದೌರ್ಜನ್ಯ, ಬಾಲ ಅಪರಾದಿಗಳು, ಗುಪ್ತಚರ ಇಲಾಖೆ, ಠಾಣೆಯಲ್ಲಿನ ಇಲಾಖೆಯ ಸಿಬ್ಬಂದಿಗಳು, ಅವರ ಕಾರ್ಯಕ್ಷೇತ್ರ, ಜಿಲ್ಲಾಧಿಕಾರಿ, ತಹಶೀಲ್ದಾರ್, ನ್ಯಾಯಾಧೀಶರ ಅಧಿಕಾರ, ಹಾಗೂ ವಿದ್ಯಾರ್ಥಿಗಳಲ್ಲಿ ಇರುವ ಕಾನೂನು ಜವಬ್ದಾರಿಗಳನ್ನು ತಿಳಿಸಿ ಯಾವುದೇ ತೊಂದರೆ ಅಥವಾ ಅಫರಾಧ ಸಂಭವಿಸಿದಲ್ಲಿ ತಕ್ಷಣ ಠಾಣೆಯನ್ನು ಸಂಪರ್ಕಿಸುವ ವಿಧಾನ ತಿಳಿಸಿದರು.

ಚಿತ್ರ-ವರದಿ: ಭಾಗ್ಯವಾನ್ ಸನಿಲ್

0 comments:

Post a Comment