ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:02 PM

ಪೂರ್ವಭಾವೀ ಸಭೆ

Posted by ekanasu

ರಾಜ್ಯ - ರಾಷ್ಟ್ರ
ಮಂಗಳೂರು:ಪ್ರತಿಷ್ಠಿತ ಕಾಮನ್ ವೆಲ್ತ್ ಕ್ರೀಡಾಕೂಟ -2010 ನವದೆಹಲಿಯಲ್ಲಿ ಅಕ್ಟೋಬರ್ 3ರಿಂದ 14 ರವರೆಗೆ ನಡೆಯಲಿದ್ದು, ಈ ಸಂಬಂಧ ದೇಶದ ವಿವಿಧ ರಾಜ್ಯಗಳಲ್ಲಿ ಕ್ರೀಡಾಕೂಟದ ಬಗ್ಗೆ ಜಾಗೃತಿ ಮೂಡಿಸಲು ಕ್ವೀನ್ಸ್ ಬ್ಯಾಟನ್ ರಿಲೇ ತಂಡ ವಿವಿಧ ರಾಜ್ಯಗಳಲ್ಲಿ ಸಂಚರಿಸಲಿದೆ.
ತಂಡ ದಕ್ಷಿಣ ಕನ್ನಡ ಜಿಲ್ಲೆಗೆ ಸೆಪ್ಟೆಂಬರ್ 5 ರಂದು ಹಾಸನದಿಂದ ಆಗಮಿ ಸಲಿದ್ದು, ಶಿರಾಡಿ ಘಾಟಿಯಲ್ಲಿ ರಿಲೇ ತಂಡವನ್ನು ಎದುರು ಗೊಳ್ಳಲಾ ಗುವುದು. ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೆಮಾರ್ ಅವರು ತಂಡವನ್ನು ಸ್ವಾಗತಿಸುವರು. ನಗರದ ಮಹಾವೀರ ಸರ್ಕಲ್ ನಲ್ಲಿ ಮಂಗಳೂರು ಮೇಯರ್ ಅವರು ರಿಲೇ ತಂಡವನ್ನು ಸ್ವಾಗತಿ ಸುವರು ಎಂದು ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಅವರು ಸಭೆಗೆ ತಿಳಿಸದರು.ಜಿಲ್ಲಾಧಿ ಕಾರಿಗಳ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಜಿಲ್ಲೆಯಲ್ಲಿ ಕ್ರೀಡೆಯ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯ ಕ್ರಮದಲ್ಲಿ ವಿದ್ಯಾರ್ಥಿ ಗಳನ್ನು ಸಕ್ರಿಯ ಪಾಲ್ಗೊಳಿ ಸುವಿಕೆ ಬಗ್ಗೆ ಆ ಮೂಲಕ ಶಿಕ್ಷಣೇತರ ಅದರಲ್ಲೂ ಮುಖ್ಯವಾಗಿ ಕ್ರೀಡೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಲು ಈ ಅವಕಾಶವನ್ನು ಬಳಸಿ ಕೊಳ್ಳ ಲಾಗುವುದು ಎಂದರು. ಕ್ವೀನ್ಸ್ ಬ್ಯಾಟನ್ ರಿಲೇ ತಂಡ ಹಾದು ಹೋಗುವ ರಸ್ತೆಯಲ್ಲಿ ಎಲ್ಲ ಗ್ರಾಮ ಪಂಚಾಯಿ ತಿಗಳಿಗೆ ಹಾಗೂ ನಗರ ಪಂಚಾಯಿತಿಗಳಿಗೆ ಮಾಹಿತಿ ನೀಡಿ ರಸ್ತೆ ಸಿಂಗರಿಸಿ ಸ್ವಾಗತ ಕೋರಲು ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಯವರಿಗೆ ಸೂಚಿಸಿದರು. ಮಂಗಳೂರಿನಲ್ಲಿ ಮಹಾವೀರ ಸರ್ಕಲ್ ನಿಂದ ಕದ್ರಿ, ಲಾಲ್ ಬಾಗ್, ಎಂಜಿ ರಸ್ತೆ, ಪಿ ವಿ ಎಸ್, ಜ್ಯೋತಿ ಮುಖಾಂತರ ಪುರಭವನ ದವರೆಗೆ ರಿಲೇ ಓಟದ ಬಳಿಕ ನಗರದ ಪುರಭವನದಲ್ಲಿ 125 ನಿಮಿಷ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಿಲೇ ತಂಡದಲ್ಲಿ 26 ವಾಹನಗಳಲ್ಲಿ 98 ಅಧಿಕಾರಿಗಳು ಆಗಮಿಸುವರು.
ಯುವಜನಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಪಾಂಡುರಂಗ ಗೌಡ, ಸಹಾಯಕ ಆಯುಕ್ತರಾದ ಡಾ. ಹರೀಶ್ ಕುಮಾರ್, ಪ್ರಭುಲಿಂಗ ಕವಳಿಕಟ್ಟಿ, ಆಹಾರ ಮತ್ತು ನಾಗರೀಕರ ಸರಬರಾಜು ಇಲಾಖೆ ಉಪನಿರ್ದೇಶಕರಾದ ವೃಷಭರಾಜೇಂದ್ರ ಮೂರ್ತಿ, ಮಹಾ ನಗರ ಪಾಲಿಕೆ ಕಂದಾಯಧಿಕಾರಿ ಮೇಘನಾ, ಸಹಾಯಕ ಕಾರ್ಯದರ್ಶಿ ಚಂದ್ರಶೇಖರ ಮಸಗುಪ್ಪಿ, ಸ್ವಾಗತ ಸಮಿತಿಯ ಸದಸ್ಯರಾದ ಸೀತಾರಾಂ ಕುಲಾಲ್, ಕೆ.ತೇಜೋಮಯ, ಸುನೀಲ್ ಸೇರಿದಂತೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಕ್ರೀಡಾ ವಲಯದ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

0 comments:

Post a Comment