ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಕೀ ರಂ ನಾಗರಾಜ್ ಇನ್ನಿಲ್ಲ. ಅವರ ಸಾವಿನ ಮೂಲಕ ನಾವು ಹಳೆಗನ್ನಡ, ನಡುಗನ್ನಡ ಮತ್ತು ಹೊಸಕನ್ನಡ ಕ್ಕಿದ್ದ ಬೆಳಕಿನ್ದಿಯೊಂದನ್ನು ಶಾಶ್ವತವಾಗಿ ಕಳೆದುಕೊಂಡೆವು. ಕುಮಾರವ್ಯಾಸ ಮತ್ತು ಬೇಂದ್ರೆ ಮತ್ತೆ ಬಡವಾದರು. ೧೮ನೇ ಶತಮಾನದ ಅನೇಕ ತತ್ವಪದಕಾರರನ್ನು ಇನ್ನು ಕೇಳುವವರಿಲ್ಲ. ನಾಡಿನ ತುಂಬಾ ಹರಡಿಕೊಂಡಿರುವ ಅವರ ಅಸಂಖ್ಯ ಶಿಷ್ಯರುಗಳಿಗೆ ಮಾರ್ಗ ದರ್ಶನ ಮಾಡುವ ನಿಜದ ಗುರು ಈಗ ಮರೆಯಾದರು. ಕೀ ರಂ ಹೆಚ್ಚು ಬರೆದಿಲ್ಲ. ಬರೆಯುವ ಬಗ್ಗೆ ಅವರಿಗೆ ಅಂತಹ ಒಲವೂ ಇರಲಿಲ್ಲ. ಆದರೆ ನಮ್ಮ ಜನಪದರ ಹಾಗೆ ಅವರು ತಮ್ಮ ಮೌಖಿಕ ವಿಮರ್ಶೆಯ ಮೂಲಕ ಜನರನ್ನು ಸುಲಭವಾಗಿ ತಲುಪಿ ಬರೆಹಗಳ ಮಿತಿಯನ್ನು ನಾಡಿಗೆ ತೋರಿಸಿದರು.
ಕನ್ನಡ ವಿ ವಿ ಯಲ್ಲಿ ನಾನು ಕೀ ರಂ ಅವರ ಜೊತೆಗಿದ್ದೆ. ಸಾಹಿತ್ಯ ಮತ್ತು ಜಾನಪದವನ್ನು ಸಂಸ್ಕೃತಿಯೊಂದರ ವಿಭಿನ್ನ ಅಭಿವ್ಯಕ್ತಿಗಳೆಂದು ಭಾವಿಸಿದ್ದ ಅವರು ಪಂಪನ ಕಾವ್ಯವನ್ನು ಓದಿದ ಮರು ಕ್ಷಣದಲ್ಲಿ ಅವರು ತಾಳಮದ್ದಳೆಯ ಬಗ್ಗೆ ಮಾತಾಡುತ್ತಿದ್ದರು. ಹುಲಿಗೆಮ್ಮ ದೈವದ ಪಾಯಸ ಪವಾಡದೊಂದಿಗೆ ಕುಮಾರವ್ಯಾಸನ ಕಾವ್ಯದ ದ್ರೌಪದಿ ಸ್ವಯಂವರದ ಭಾಗವನ್ನು ಜೋಡಿಸುತ್ತಿದ್ದರು. ಮೈಲಾರ ಲಿಂಗನ ಜಾತ್ರೆಯನ್ನು ಬೇಂದ್ರೆ ಕಾವ್ಯದೊಡನೆ ಇರಿಸಿ ಸಂಭ್ರಮಿಸುತ್ತಿದ್ದರು. ಈ ಬಗೆಯ ಅವರ ಚಿಂತನಾ ವಿನ್ಯಾಸವು ನಮ್ಮನ್ನು ಸಾಹಿತ್ಯ-ಜಾನಪದಗಳ ಕೃತಕ ವಿಭಜನೆಗಳ ಆಚೆ ಕೊಂಡೊಯ್ಯುತ್ತಿದ್ದವು. ಬಹುದೊಡ್ಡ ದಾರ್ಶನಿಕ ಕೀ ರಂ. ನಿಧನಕ್ಕೆ ಡಾ.ಪುರುಷೋತ್ತಮ ಬಿಳಿಮಲೆ ಸಂತಾಪ ವ್ಯಕ್ತಪಡಿಸಿದ್ದಾರೆ.

0 comments:

Post a Comment