ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಅದೇ ಮಳೆ... ಅದೇ ರಸ್ತೆ... ಹೊಂಡ ಮಾತ್ರ ಬೇರೆ ಬೇರೆ ಗಾತ್ರ?!

ಉಡುಪಿ : ಯುದ್ದ ಕಾಲದಲ್ಲಿ ಶಶ್ತ್ರಾಭ್ಯಸ ಎಲ್ಲರಿಗೂ ಗೊತ್ತಿರುವ ಸಂಗತಿ. ಯುದ್ಧ ಮುಗಿದ ಮೇಲೆ ಶಸ್ತ್ರಾಭ್ಯಸ! ಇದ್ಯಾವ ಕಂಪನಿಗಾಗಿ ಹುಟ್ಟಿಕೊಂಡ ಹಚ್ಚಹೊಸ ಸ್ಲೋಗನ್ ಅಲ್ಲ. ರಾಷ್ಟ್ರೀಯ ಹೆದ್ದಾರಿ ನಿಗಮದ ಕಾರ್ಯ ವೈಖರಿಗೆ ಹುಟ್ಟಿಕೊಂಡಿದೆ. ಹೊಸ ಪದಪುಂಜದ ಅವಿಷ್ಕಾರಕರು ಮಾತ್ರ ನಾಗರಿಕರು!ಪ್ರಸಕ್ತ ಕಾಲದಲ್ಲಿ ಪೇಟೆ, ಪಟ್ಟಣ ಮತ್ತು ಹಳ್ಳಿ, ಪಳ್ಳಿಗಳಲ್ಲಿ ಜನ ಮಾತಾಡಿಕೊಳ್ಳೋದರ ಸ್ಯಾಂಪಲ್ ಹೀಗಿದೆ. ಅದೇ ಮಳೆ. ಅದೇ ರಸ್ತೆ. ಹೊಂಡ ಮಾತ್ರ ಬೇರೆ ಬೇರೆ ಏಕೆ ಅಂತ. ರಸ್ತೆ, ಮಳೆ ಅದೇ ಆದರೂ ಹೊಂಡಮಾತ್ರ ಜಾಸ್ತಿ.ಯದ್ಧ ಮುಗಿದ ಮೇಲೆ ರಾಷ್ಟ್ರಿಯ ಹೆದ್ದಾರಿ ನಿಗಮ ಬಿಲ್ಲು ಬತ್ತಳಿಕೆ ಹಿಡಿದು ಹೊರಡುವ ಬದಲು, ಮಳೆಗಾಲಕ್ಕೂ ಮುಂಚೆ ಗಾಂಡೀವ ಹಿಡಿದಿದ್ದರೆ ಹೆದ್ದಾರಿ ಸ್ವಲ್ಪಮಟ್ಟಿಗಾದರೂ ಉಳಿಯುತ್ತಿತ್ತು ಎಂಬುದು ಜನರ ಅಂಬೋಣ.ಮಳೆ ಕಳೆದ ಸಾಲಿಗಿಂತ ಕಡಿಮೆ : ಕಳೆದ ಸಾಲಿಗೆ ಹೋಲಿಸಿದರೆ ಈ ಬಾರಿ ಮಳೆ ಏನೇನು ಅಲ್ಲ ಎಂಬುದು ನಾಗರಿಕರ ಅಭಿಮತ. ಮಳೆ ಕಡಿಮೆಬಿದ್ದರೂ ರಸ್ತೆಗಳಲ್ಲಿ ಬಾಯ್ದೆರೆದ ಹೊಂಡಕ್ಕೇನು ಬರವಿಲ್ಲ.ಒವ್ಮೊಮ್ಮೆ ಹೆದ್ದಾರಿಯಲ್ಲಿರೋದು ಹೊಂಡವೋ, ಕಣಿವೆಯೋ, ತೋಡೋ ಎನ್ನೋದು `ಕನ್ಫ್ಯೂಸ್'.

ಮಂಗಳೂರಿನಿಂದ ಹಿಡಿದು ಕಾರವಾರದವರೆಗಿನ ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಪ್ರಯಾಣಿಸುವುದು ನರಕ ಯಾತನೆ. ಹೆದ್ದಾರಿಯಲ್ಲಿ ಹೊಂಡವಿದೆಯೋ, ಹೊಂಡದಲ್ಲಿ ರಸ್ತೆಯಿದೆಯೋ ಎನ್ನೋದು ಗೊತ್ತಾಗೋದಿಲ್ಲ.

ಹಾಗಂತ ರಾಜ್ಯ ಹೆದ್ದಾರಿ, ಜಿಲ್ಲಾ, ತಾಲೂಕು ಮತ್ತು ಗ್ರಾಮ ಮಟ್ಟದ ರಸ್ತೆಗಳು ನೆಟ್ಟಗಿವೆ ಅಂತಲ್ಲ. ಅವುಗಳೂ ಎಕ್ಕುಟ್ಟಿಹೋಗಿವೆ. ರಸ್ತೆ ಹೊಂಡಯಾವುದು ಅನ್ನೊದನ್ನ ದುರ್ಬೀನ್ ಹಾಕಿ ಹುಡುಕಬೇಕು.

ಪ್ರತಿ ಮಳೆಗಾಲದಲ್ಲಿ ಹೆದ್ದಾರಿ ಎಲ್ಲಿ ಹೊಂಡ ಬೀಳುತ್ತೋ ಅದರ ಪುನರಾವರ್ತನೆ ಆಗುತ್ತಿದೆ. ಹೊಂಡಬೀಳೋ ಜಾಗದ ಸ್ಪಷ್ಟ ಮಾಹಿತಿಯಿದ್ದರೂ ಇದೂವರೆಗೆ ಹೆದ್ದಾರಿ ನಿಗಮಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಆಗದಿರುವುದು ಖೇದಕರ.

ಹೊಂಡ ಎಲ್ಲೆಲ್ಲಿ ಬೀಳುತ್ತೆ : ಶಿರೂರು ಸುಂಕದ ಗುಂಡಿ ಮತ್ತು ಚೆಕ್ಕ್ ಪೋಸ್ಟ್ ಪ್ರತಿಮಳೆಗಾಲಕ್ಕೂ ರಸ್ತೆ ನಗೆದು ಬೀಳುತ್ತೆ. ಶಿರೂರು ಸೇತುವೆ, ಒತ್ತನೆಣಿಯ ಏರು ಮತ್ತು ಇಳಿಜಾರು ಮಳೆಗಾಲದಲ್ಲಿ ಖಾಯಂ ಗಿರಾಕಿ. ಬೈಂದೂರು, ಯಡ್ತೆರೆ, ಬಿಜೂರು, ಉಪ್ಪುಂದ ಶಾಲೆ ಬಾಗಿಲು, ನಾಯ್ಕನಕಟ್ಟೆ, ಕಂಬಕೋಣೆ ಸೇತುವೆ ಕ್ರಾಸ್ನಲ್ಲಿ ರಸ್ತೆಗಳು ಹೋದೆಯಾ ಪಿಶಾಚಿ ಅಂದರೆ ಬಂದೆ ಗವಾಕ್ಷಿಯಲ್ಲಿ ಕತೆ.

ಅರೆಹೊಳೆ ಕ್ರಾಸ್, ನಾವುಂದ, ನೀರೋಣಿ ಮರವಂತೆ ಬೀಚ್ ತ್ರಾಸಿ ಕ್ರಾಸ್, ಮುಳ್ಳಿಕ್ಕಟೆ, ಅರಾಟೆ ತಿರುವು, ಹೆಮ್ಮಾಡಿ, ಜಾಲಾಡಿ ತಲ್ಲೂರು ಕ್ರಾಸ್, ಕುಂದಾಪುರ ಸಂಗಮ ಪರಿಸರ, ಸಂತೆ ಮೈದಾನ, ಶಾಸ್ತ್ರಿ ಪಾರ್ಕ್ , ಬಸ್ರೂರು ಕ್ರಾಸ್, ಕೋಟೇಶ್ವರ, ತೆಕ್ಕಟ್ಟೆ, ಕೊಟ, ಸಾಲಿಗ್ರಾಮ ತಿರುವು, ಸಾಸ್ತಾನ ಪೇಟೆ ಮುಂತಾದ ಕಡೆ ಹೊಂಡದ್ದೇ ಕಾರುಬಾರ್,

ಹಂಗಾರಕಟ್ಟೆ, ಮಾಬುಕಳ, ಬ್ರಹ್ಮಾವರ, ಉಪ್ಪೂರು, ಸಂತೆಕಟ್ಟೆ, ಉಡುಪಿಯ ನಿಟ್ಟೂರು, ಉದ್ಯಾವರ ತಿರುವು, ಕಾಪು, ಕಟಪಾಡಿ, ಪಾಂಗಳ ಮುಂತಾದಕಡೆ ಆನೆ ಮುಳಿಗೇಳುವಷ್ಟು ದೊಡ್ಡ ಹಂಡ ಬಿದ್ದಿರುತ್ತವೆ. ವಾಹನ ಚಾಲಕರು ಒಂದು ಹೊಂಡ ತಪ್ಪಿಸಲು ಹೋಗಿ ಹತ್ತುಹೊಂಡಕ್ಕೆ ವಾಹನ ಹಾರಿಸಬೆಕಾಗುತ್ತದೆ. ವಾಹನದಲ್ಲಿ ಹಿಂದೆ ಕುಳಿತವರ ಸ್ಥಿತಿ ದೇವರಿಗೆ ಪ್ರೀತಿ. ಪ್ರಯಾಣಿಕರ ಬೆನ್ನು ಹುರಿ ಗಟ್ಟಿಯಿದ್ದರೆ ಅಡ್ಡಿಯಿಲ್ಲ .ಎಲ್ಲಾ ಅಂತಾದರೆ ಅಪಾಯ ಕಟ್ಟಿಟ್ಟ ಬುತ್ತಿ.

ಸೇತುವೆಯಲ್ಲೂ ಹೊಂಡ : ರಸ್ತೆ ಮಳೆಗಾಲದಲ್ಲಿ ಹೊಂಡ ಬೇಳೋದು ಮಾಮೂಲು. ಆದರೆ ಸೇತುವೆಯ ಮೇಲ್ಮೈಕೂಡಾ ಹೊಂಡಗಳಿಂದ ಭರ್ತಯಾಗಿದೆ.

ಅರಾಟೆ ಸಮೀಪ ಸೌಪರ್ಣಿಕಾ ನದಿಗೆ ಹಾಕಿದ ದೊಡ್ಡ ಸೇತುವೆಲ್ಲಿ ಸಿಮೆಂಟ್ ಕತ್ತೆದ್ದು ಹತ್ತಾರು ಹೊಂಡಗಳು ಸೃಷ್ಟಿಯಾಗಿದೆ. ರಾಜಾಡಿ ಸೇತುವೆ ಯಾವಾಗ ನೆಗೆದುಬೀಳುತ್ತೋ ಗೊತ್ತಿಲ್ಲ. ಕುಂದಾಪುರ ಸಮೀಪ ಹಾಲಾಡಿ ಹೊಳೆಯ ಎರಡೂ ಸೇತುವೆಯಲ್ಲಿ ಸಿಮೆಂಟ್ ಹೊಪ್ಪಳಿಕೆಯೆದ್ದು, ಕಬ್ಬಿಣಿದ ರಾಡ್ ಹೊರಗೆ ಇಣುಕುತ್ತಿವೆ. ಒಂದೊಂದು ಸೇತುವೆಯಲ್ಲೂ ತರಾವರಿ ಹೊಂಡಗಳು ಸಾಮಾನ್ಯ. ಶಿರೂರಿಂದ ಮಂಗಳೂರು ವರೆಗಿನ ಯಾವ ಸೇತುವೆಯೂ ಹೊಂಡದಿಂದ ಮುಕ್ತವಾಗಿಲ್ಲ.

ಸೇತುವೆ ಹೊಂಡ ವಾಹನ ಚಾಲಕರನ್ನು ದಣಿಸುವ ಜೊತೆಗೆ ವಿದೇಶಿ ತಂತ್ರಜ್ಞಾನದ ಮ್ಯಾಟ್ರಿಕ್ಸ್ ಲೇಪನ ಮತ್ತೊಂದು ತಲೆನೋವು. ಸೇತುವೆ ಮೇಲೆ ಲೇಪಿಸಿದ ಮ್ಯಾಟ್ರಕ್ಸ್ ಬಿಸಿಲಿಗೆ ಕರೆಗಿ, ಸೇತುವೆ ಮೇಲೆಲ್ಲಾ ಗುಪ್ಪೆ,ಗುಪ್ಪೆಯಾಗಿ ಶೇಖರಣಯಾಗಿದೆ. ಒಟ್ಟಾರೆ ಹೆದ್ದಾರಿ ಪ್ರಯಾಯಣ ಬಲು ತ್ರಾಸಾಗಿ ಪರಿಣಮಿಸಿದೆ.

ಯುದ್ಧ ಮುಗಿದಮೇಲೆ : ಹೆಚ್ಚಿನವರ ಅಭಿಪ್ರಾಯದ ಪ್ರಕಾರ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಯಲ್ಲಿ ನೀರು ಹರಿಯುವುದು ಮತ್ತು ಶೇಖರಣೆ ರಸ್ತೆಯ ಅವನತಿಗೆ ಕಾರಣ ಎನ್ನುತ್ತಾರೆ. ಮತ್ತೆ ಕೆಲವೆಡೆ ರಸ್ತೆಯಲ್ಲಿ ವಜಿರೇಳುವುದು ರಸ್ತೆ ಹಾಳಾಗಲು ಮತ್ತೊಂದು ಕಾರಣ. ನೀರಿನ ಪಸೆ ಹೆಚ್ಚಿರುವ ರಸ್ತೆಗಳು ಯಥಾಪ್ರಕಾರ ಮಳೆಗಾದಲ್ಲಿ ಹಾಳು ಬೀಳುತ್ತದೆ. ಇದರಲ್ಲಿ ಅಚ್ಚರಿಯ ಸಂಗತಿಯೆಂದರೆ ಪ್ರತಿ ಮಳೆಗಾಲದಲ್ಲೂ ಹಾಳಾಗುವ ಭಗದಲ್ಲೇ ರಸ್ತೆ ಕಿತ್ತು ಹೋಗುತ್ತಿದೆ.

ಮಳೆಗಾಲಕ್ಕೂ ಮುನ್ನಾ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ ಇಲಾಖೆ ರಸ್ತೆ ಬದಿಗಿನ ಚರಂಡಿಗಳನ್ನು ಹದ್ದು ಬಸ್ತಿನಲ್ಲಿಡುವುದರಿಂದ ರಸ್ತೆ ಹಾಳಾಗುವುದನ್ನು ಸ್ವಲ್ಪವಾದರೂ ತಡೆಯಬಹುದು ಎಂದು ನಾಗರಿಕರು ತಿಳಿಸಿದ್ದಾರೆ.ಅರ್ಧ ಮಳೆಗಾಲ ಮುಗಿದ ಮೇಲೆ ಹೆದ್ದಾರಿ ನಿಗಮ ಗಟಾರಗಳ ಕ್ಲೀನಿಂಗ್ಗೆ ಹೊರಟಿದ್ದು ಯುದ್ಧ ಮುಗಿದ ಮೇಲೆ ಶಸ್ತ್ರಾಭ್ಯಸ ಮಾಡಿದಂತೆ ಎಂದು ಪ್ರಯಾಣಿಕರು ಕಿಚಾಯಿಸುತ್ತಾರೆ.

ಪ್ರತೀ ವರ್ಷ ಹಾಳಾಗುವ ರಸ್ತೆಯ ಭಗವನ್ನು ಸರ್ವಋತು ರಸ್ತೆಯನ್ನಾಗಿ ಬದಲಾಯಿಸಿದರೆ ಪ್ರತಿವರ್ಷ ಮಳೆಗಾಲದಲ್ಲಿ ರಸ್ತೆ ಹಾಳಾಗೋದನ್ನು ತಪ್ಪಿಸಬಹುದಾಗಿದೆ. ಆದರೆ ಹಾಗಾಗುತ್ತಿಲ್ಲ.ಮತ್ತದೇ ಹೊಂಡ. ಅದೇ ಪ್ರತಿಭಟನೆ, ನಂತರ ಪ್ಯಾಚ್ ಹಾಕುವ ಚರ್ವಿತ ಚರ್ವಣ ನಡೆಯುತ್ತಲೇ ಇರುತ್ತದೆ. ರಸ್ತೆ ಹೊಂಡದಿಂದಾಗಿ ಘನ ವಾಹನ ಚಾಲಕರಿಗೆ ಸರ್ಕಸ್ ವೃತ್ತ. ದ್ವಿಚಕ್ರ ಸವಾರರಿಗೆ ಪ್ರಾಣ ಸಂಕಟ.ಹೆದ್ದಾರಿಯಲ್ಲಿ ಹೊಂಡಗಳಿವೆ `ಹುಷಾರ್' ಚಾಲಕರೇ!

ಶ್ರೀಪತಿ ಹೆಗಡೆ ಹಕ್ಲಾಡಿ

0 comments:

Post a Comment