ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಮೂಡಬಿದಿರೆ: ಭೂತಾನ್ ರಾಜ್ಯಸಭಾ ಸದಸ್ಯ ಟ್ಸೆರಿಂಗ್ ದೋರ್ಜು ಮೂರು ದಿನಗಳ ಭೇಟಿಗಾಗಿ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನಕ್ಕೆ ಬುಧವಾರ ಆಗಮಿಸಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆ ಅತ್ಯಂತ ಪ್ರಕೃತಿ ರಮಣೀಯವಾಗಿದ್ದು ಆರೋಗ್ಯಪೂರ್ಣವಾಗಿದೆ. ನಿಸರ್ಗ ಸೌಂದರ್ಯದೊಂದಿಗೆ ಇಲ್ಲಿನ ಜನತೆ ವಿಶಾಲ ಹೃದಯಿಗಳಾಗಿದ್ದಾರೆ ಎಂದವರು ತಿಳಿಸಿದರು.ಶೈಕ್ಷಣಿಕ, ಸಾಂಸ್ಕೃತಿಕ ವಿಚಾರದಲ್ಲಿ ಈ ಜಿಲ್ಲೆ ಮುಂದಿದೆ ಎಂದು ಸಂತಸ ವ್ಯಕ್ತಪಡಿಸಿದರು. ಆಳ್ವಾಸ್ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಗುರುವಾರದಂದು ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ವೀಕ್ಷಣೆ, ಆಳ್ವಾಸ್ ಶೋಭಾವನ, ಆನಂದಮಯ ರೆಸಾರ್ಟ್ ಗೆ ಭೇಟಿನೀಡಲಿರುವರು. ಶುಕ್ರವಾರದಂದು (ಸೆ.3)ರಂದು ಬೆಳಗ್ಗೆ 9ರಿಂದ 11ರ ತನಕ ಭೂತಾನ್ ನಲ್ಲಿರುವ ಶಿಕ್ಷಣ ಸಂಸ್ಥೆಗಳಿಗೆ ಅರ್ಥಶಾಸ್ತ್ರ, ವಾಣಿಜ್ಯ, ಇತಿಹಾಸ, ಗಣಿತ, ಅಕೌಂಟೆನ್ಸಿ,ಭೋಗೋಳ ವಿಷಯಗಳ ಉಪನ್ಯಾಸಕ ಸಂದರ್ಶನವನ್ನು ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ನಡೆಸಲಿದ್ದಾರೆ.


1 comments:

BIDIRE said...

nice photos sir.............and also report

Post a Comment