ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಮುಲ್ಕಿ : ಬೆಳಗಾವಿಯಲ್ಲಿ ಹೆಣ್ಣುಮಗಳೊಬ್ಬಳು ಕೇವಲ 3ನೇ ತರಗತಿಯ ವರೆಗೆ ಓದಿ ಗೃಹಿಣಿಯಾಗಿದ್ದುಕೊಂಡು ದೇವದಾಸಿ ಪದ್ದತಿಯಿಂದ ಶೋಷಿತ ಹೆಣ್ಣುಗಳಿಗೆ ಪದವಿವರೆಗಿನ ವಿದ್ಯಾಬ್ಯಾಸಕ್ಕೆ ಸಹಕರಿಸಿ ಅಥವಾ ಅವರಿಗೆ ಸ್ವ ಉದ್ಯೋಗ ತರಬೇತಿಕೊಡಿಸಿ ಸ್ವಾವಲಂಭಿಗಳಾಗಿ ಮಾಡುತ್ತಾ ಅವರ ವಿವಾಹ ಕಾರ್ಯಕ್ಕೆ ಸಹಕರಿಸಿ ಅಂಗವಿಕಲರು ಮತ್ತು ಸಮಾಜದ ದೀನ ವರ್ಗಗಳ ಮಕ್ಕಳನ್ನು ಸುಸಕ್ಷಿತರಾಗಿಸುವಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟ ಬೆಳಗಾವಿಯ ಸುವರ್ಣ ಶಂಭು ಬಡಿಗೇರ ರವರಿಗೆ ಭಾನುವಾರ ಮುಲ್ಕಿ ಬಿಲ್ಲವ ಸಂಘದಲ್ಲಿ ಸಮಾಜ ಪರಿವರ್ತನೆಯ ಹರಿಕಾರ ಶ್ರೀ ನಾರಾಯಣ ಗುರುಗಳ ಸಂಸ್ಮರಣೆಯಲ್ಲಿ ಸುರತ್ಕಲ್ ಶ್ರೀ ಗುರು ಚಾರಿಟೇಬಲ್ ಟ್ರ್ರಸ್ಟ್ ಆಶ್ರಯದಲ್ಲಿ ಸದಾನಂದ ಸುವರ್ಣರು ಪ್ರಾಯೋಜಿಸಿದ ಶ್ರೀ ನಾರಾಯಣ ಗುರು ಶ್ರೇಷ್ಠ ಸಮಾಜ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಪ್ರಶಸ್ತಿ ಹಸ್ತಾಂತರಿಸಿದ ಹಿರಿಯ ಕವಿ ಡಾ.ಬಿ.ಎ.ಸನದಿ ಮಾತನಾಡಿ,ಶ್ರೀನಾರಾಯಣ ಗುರುಗಳ ತತ್ವ ಆದರ್ಶಗಳು ಎಂದಿಗೂ ಮತ್ತು ಎಲ್ಲಿಯೂ ಸ್ವೀಕೃತವಾಗುವುದರಿಂದ ದೇಶದಾದ್ಯಂತ ಮತ್ತು ವಿಶ್ವ ಮಟ್ಟದಲ್ಲಿ ತಿಳುವಳಿಕೆ ಮೂಡಲು ಅವರ ತತ್ವ ಗ್ರಂಥಗಳನ್ನು ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಭಾಷಾಂತರಗೊಳಿಸಲು ಇಲ್ಲಿನ ಸುಶಿಕ್ಷಿತರು ಮತ್ತು ಲೇಖಕರು ಪ್ರಯತ್ನಿಸಬೇಕು ಎಂದ ಅವರು ಶ್ರೀ ನಾರಾಯಣ ಗುರುಗಳ ಬಗ್ಗೆ ತಿಳಿಯದ ಆದರೆ ಅವರ ತತ್ವದಂತೆ ದೀನ ವರ್ಗದ ಜನರಿಗಾಗಿ ಶ್ರಮಿಸುತ್ತಿರುವ ಬಡಿಗೇರ ರವರಿಗೆ ನೀಡುವ ಪ್ರಶಸ್ತಿ ಇತರರಿಗೆ ಮಾದರಿಯಾಗಿದೆ ಹಾಗೂ ಸಮಾಜದ ಕುಲೀನ ವರ್ಗದವರು ಬಡುಗೇರಾ ರವರ ಕಾರ್ಯಗಳನ್ನು ಮಾದರಿಯಾಗಿಸಿ ಕಾರ್ಯಕೈಗೊಳ್ಳಬೇಕು ಅಥವಾ ಸಹಕಾರ ನೀಡುವಂತವರಾಗಬೇಕು ಎಂದರು.

ಶ್ರೀ ನಾರಾಯಣ ಗುರುಗಳ ಸಂಸ್ಮರಣೆ ಮಾಡಿದ ಮಾಜಿ ಶಾಸಕ ಮತ್ತು ಯಕ್ಷಗಾನ ಎಕಾಡಮಿ ಅಧ್ಯಕ್ಷ ಕುಂಬ್ಳೆ ಸುಂದರ ರಾವ್ ಮಾತನಾಡಿ ನಾರಾಯಣ ಗುರುಗಳು ವಿಶ್ವ ಮಾನ್ಯರು ಅವರನ್ನು ಒಂದು ಸಮಾಜ ಅಥವಾ ಪ್ರದೇಶಕ್ಕೆ ಸೀಮಿತಗೊಳಿಸದೆ ಅವರ ತತ್ವಗಳನ್ನು ವಿಶ್ವ ಮಟ್ಟಕ್ಕೆ ಪ್ರಸರಿಸುವುದು ಪ್ರಸ್ತುತ ಪರಿಸ್ಥಿತಿಯಲ್ಲಿ ಅಗತ್ಯ ಎಂದರು.

ಪ್ರಶಸ್ತಿ ಪ್ರಾಯೋಜಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ರಂಗ ಕರ್ಮಿ ಸದಾನಂದ ಸುವರ್ಣರು ಮಾತನಾಡಿ, ಕೇವಲ ಪ್ರಚಾರಕ್ಕೆ ಪೂರಕವಾಗಿ ಸಮಾಜ ಸೇವೆಗಳು ಮತ್ತು ಪ್ರಶಸ್ತಿಗಳು ಇರುವ ಈ ಕಾಲ ಘಟ್ಟದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಮಹಿಳೆಯೊಬ್ಬರು ತಮ್ಮ ಮನೆ ಮತ್ತು ಸಮಾಜದ ವಿರೋಧವನ್ನು ಲೆಕ್ಕಿಸದೆ ಪ್ರಚಾರ ರಹಿತ ದೀನವರ್ಗದ ಸೇವೆಯಿಂದ ಗುರಿತಿಸಲ್ಪಡುವಂತಾಗಿರುವುದು ಬಹಳ ಸಂತೋಷ ಎಂದ ಅವರು ಮುಂದೇಯೂ ಈ ಪ್ರಶಸ್ತಿ ಶ್ರೀ ನಾರಾಯನ ಗುರುಗಳ ತತ್ವದಂತೆ ಯಾವುದೇ ಜಾತಿ,ಮತ,ವರ್ಗ ಮತ್ತು ಪ್ರದೇಶದ ಕಟ್ಟುಪಾಡುಗಳಿಲ್ಲದೆ ಸ್ವತಂತ್ರವಾಗಿ ಅರ್ಹರಿಗೆಮಾತ್ರ ಸೀಮಿತವಾಗಿರುತ್ತದೆ ಎಂದರು.

ಈ ಸಂದರ್ಭ ಮಾಜಿ ಶಾಸಕ ಕೆ.ಸೋಮಪ್ಪ ಸುವರ್ಣ, ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ರಾಘು ಸುವರ್ಣ,ಮೂಲ್ಕಿ ಲಯನ್ಸ್ ಅಧ್ಯಕ್ಷ ಕಿಶೋರ್ ಶೆಟ್ಟಿ, ಮೂಲ್ಕಿ ರೋಟರಿ ಅಧ್ಯಕ್ಷ ಬಾಲಚಂದ್ರ ಸನಿಲ್,ಮೂಲ್ಕಿ ಜೇಸಿಐ ಅಧ್ಯಕ್ಷ ಧನಂಜಯ ಮಟ್ಟು,ಯುವವಾಹಿನಿ ಮೂಲ್ಕಿ ಘಟಕದ ಅಧ್ಯಕ್ಷ ಜಯ ಕುಮಾರ್ ಕುಬೆವೂರು,ಸುರತ್ಕಲ್ ಘಟಕದ ಅಧ್ಯಕ್ಷ ಜಯರಾಮ ವೇದಿಕೆಯಲ್ಲಿದ್ದರು. ಈ ಸಂದರ್ಭ ಇಂಜಿನಿಯರ್ ವಿದ್ಯಾರ್ಥಿಗಳಿಗೆ ವಿದ್ಯಾ ನಿಧಿ ವಿತರಿಸಲಾಯಿತು.

ಶ್ರೀ ಗುರು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಯೋಗೀಶ್ ಕೋಟ್ಯಾನ್ ಸ್ವಾಗತಿಸಿದರು. ಅಪ್ಪು ಮಾಸ್ತರ್ ಕಟಪಾಡಿ, ವಿಜಯ ಕುಮಾರ್ ಕುಬೆವೂರು,ಡಾ.ಗಣೇಶ್ ಅಮೀನ್ ಸಂಕಮಾರ್ ಅತಿಥಿ ಪರಿಚಯ ನಡೆಸಿದರು. ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟಿ ಜಯಾನಂದ ಎಂ.ವಂದಿಸಿದರು.

0 comments:

Post a Comment