ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ ಕನ್ನಡ ನಾಡುನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ -2010 ರ ಉದ್ಘಾಟನೆಯನ್ನು ಕನ್ನಡದ ಪ್ರಸಿದ್ಧ ಕವಿ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ನೆರವೇರಿಸಲಿದ್ದಾರೆ. ಅಕ್ಟೋಬರ್ 29ರಂದು ಬೆಳಗ್ಗೆ 9:30ಕ್ಕೆ ಸಮ್ಮೇಳನದ ಉದ್ಘಾಟನೆ ನಡೆಯಲಿದೆ ಎಂದು ಡಾ. ಎಂ.ಮೋಹನ ಆಳ್ವ ತಿಳಿಸಿದ್ದಾರೆ. ಸಮ್ಮೇಳನವು ಕನ್ನಡ ಮನಸ್ಸು ಜೀವನ ಮೌಲ್ಯಗಳು
ಎಂಬ ಪರಿಕಲ್ಪನೆಯಡಿ ಅಕ್ಟೋಬರ್ 29 ರಿಂದ 31ರವರೆಗೆ ವೈದೇಹಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಕವಿ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಇವರು ಕನ್ನಡದ ಪ್ರಸಿದ್ಧ ಕವಿ ಮತ್ತು ನಾಟಕಕಾರರು, ಸಿಂದಾಬಾದನ ಆತ್ಮಕತೆ , ಕ್ರಿಯಾಪರ್ವ , ಒಣಮರದ ಗಿಳಿಗಳು, ಋತುವಿಲಾಸ , ಎಷ್ಟೊಂದು ಮುಗಿಲು , ಅಮೇರಿಕಾದಲ್ಲಿ ಬಿಲ್ಲು ಹಬ್ಬ , ವಿಮುಕ್ತಿ , ಭೂಮಿಯು ಒಂದು ಆಕಾಶ , ನದೀತೀರದಲ್ಲಿ , ಮೂವತ್ತು ಮಳೆಗಾಲ , ಉತ್ತರಾಯಣ ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.ಹೆಜ್ಜೆಗಳು , ಒಂದು ಸೈನಿಕ ವೃತ್ತಾಂತ , ಕತ್ತಲೆಗೆ ಎಷ್ಟು ಮುಖ , ಚಿತ್ರಪಟ ,ಅಗ್ನಿವರ್ಣ, ಉರಿಯ ಉಯ್ಯಾಲೆ , ಕಂಸಾಯಣ , ಊರ್ಮಿಳಾ , ಮಂಥರೆ, , ಮೇಘಮಾನಸ , ಮೊದಲಾದ ನಾಟಕಗಳನ್ನು , ಹಕ್ಕಿಗಳು , ಹೂವಿನ ಶಾಲೆ, ಸೋನಿಪದ್ಯಗಳು , ಅಳಿಲು ರಾಮಾಯಣ ಮತ್ತು ಸುಣ್ಣದ ಸುತ್ತು ಮೊದಲಾದ ಮಕ್ಕಳ ಸಾಹಿತ್ಯ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಕೇಂದ್ರ ಸಾಹಿತ್ಯ ಅನುವಾದ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ , ದೇವರಾಜ ಬಹದ್ದೂರ್ ಪ್ರಶಸ್ತಿ , ಮೈಸೂರು ಅನಂತಸ್ವಾಮಿ ಪ್ರಶಸ್ತಿ ,ಡಿ.ವಿ.ಜಿ.ಪ್ರಶಸ್ತಿ , ಆರ್ಯಭಟ ಪ್ರಶಸ್ತಿ , ಬಿ.ಎಚ್. ಶ್ರೀಧರ್ ಪ್ರಶಸ್ತಿ, ದಿನಕರ ದೇಸಾಯಿ
ಪ್ರತಿಷ್ಠಾನ ಪ್ರಶಸ್ತಿ , ಮೊದಲಾದ ಹಲವು ಗೌರವಗಳು ಇವರಿಗೆ ಸಂದಿದೆ. ಚಿನ್ನಾರಿ ಮುತ್ತ , ಕೊಟ್ರೇಶಿ ಕನಸು , ಮುಕ್ತ ಮುಕ್ತ ,
ಮತದಾನ , ಯಾವ ಜನ್ಮದ ಮೈತ್ರಿ , ಸವಿಗಾನ , ಚಿತ್ರಶಾಲೆ, ಕ್ರೌರ್ಯ ಮೊದಲಾದ ಟಿ.ವಿ. ಧಾರವಾಹಿ ಮತ್ತು ಸಿನಿಮಾಗಳಲ್ಲಿ ಇವರ
ಹಾಡು , ಸಂಭಾಷಣೆ ಪ್ರಸಾರಗೊಂಡಿದೆ. ಇವರ ಭಾವ ಗೀತೆಗಳು ಧ್ವನಿಸುರುಳಿಗಳಾಗಿ ಅಪಾರ ಜನಪ್ರೀತಿಯನ್ನು ಪಡೆದಿದೆ.

0 comments:

Post a Comment