ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಮೂಡಬಿದಿರೆ: 1930 ಕಡೆಂಲೆ ಪರಾರಿ ಮನೆತನದಲ್ಲಿ ಜನಿಸಿದ ಹಿರಿಯ ಸಾಹಿತಿ ಪತ್ರಕರ್ತ ಪರಿಸರ ಹೋರಾಟಗಾರ ಕೆ.ಜೆ ಶೆಟ್ಟಿ ಕಡಂದಲೆ ನಿಧನರಾದರು. ದಿಟ್ಟನಿಲುವಿನ ಬರಹಗಾರ, ನಿವೃತ್ತ ಶಿಕ್ಷಕ, ಜನಪರ ಕಾಳಜಿ ಹೋರಾಟಗಾರ ,ಚಿತ್ರ ನಿರ್ಮಾಪಕ ಕೆ.ಜೆ ಶೆಟ್ಟಿ ಕಡಂದಲೆ (80) ತೀವ್ರ ಅನಾರೋಗ್ಯದಿಂದ ಸ್ವಗೃಹದಲ್ಲಿ ಇಂದು ನಿಧನರಾದರು. ಪತ್ನಿ, ಮಕ್ಕಳು ಅಪಾರ ಬಂಧುಗಳನ್ನು ಅಗಲಿದ್ದಾರೆ. ಕಥೆ ,ಕಾದಂಬರಿ ,ಕವನ ನಗೆಬರಹ, ವಿಡಂಬನಾ ಬರಹ,ಅಂಕಣ ಬರಹಗಳ ಮೂಲಕ ಜನಮನ್ನಣೆ ಗಳಿಸಿದ್ದಲ್ಲದೆ ಸೂಕ್ಷ್ಮ ವಿಚಾರಗಳ ಮೂಲಕ ತಮ್ಮ ಲೇಖನಿ ಜಳಪಿಸುತ್ತಾ ದಿಟ್ಟ ಪತ್ರಕರ್ತರೆಂಬ ಖ್ಯಾತಿಗೆ ಪಾತ್ರರಾಗಿದ್ದರು. ಏಂಜಲ್ ಹಾರ್ಡ್ ಬಣ್ಣದ ಕಂಪೆನಿ ಕಡಂದಲೆ ಯಲ್ಲಿ ತಳವೂರಲು ಹೊರಟಾಗ ಕಡಂದಲೆ ಶಾಂಭವಿ ನದೀ ಹಿತರಕ್ಷಣಾ ಸಮಿತಿ ರೂಪಿಸಿ ಹೋರಾಟಮಾಡಿ ಅದನ್ನು ಅರ್ಧದಲ್ಲೇ ಬಂದ್ ಮಾಡುವಲ್ಲಿ ಯಶಸ್ವಿಯಾದವರು. ಅದಕ್ಕಾಗಿ ಬಳ್ಳಾರಿ ಜೈಲುವಾಸ ಅನುಭವಿಸಿದ್ದರು. ಪಾಡ್ದನ ಆಧಾರಿತ ತುಳುನಾಡ ಸಿರಿ , ಅಬ್ಬಗದಾರಗ ಕೃತಿಗಳು , 8ನಗೆಬರಹ ಸಂಕಲನ, 2 ಕಥಾ ಸಂಕಲನ, ವರದಕ್ಷಿಣೆ ಕನ್ನಡ ಚಲನಚಿತ್ರ ನಿರ್ಮಿಸಿ ಜನಮೆಚ್ಚುಗೆ ಗಳಿಸಿದ್ದಾರೆ. ಚಂದನ ಮಾಸಿಕ ಪತ್ರಿಕೆಯನ್ನು 15ವರ್ಷ ನಡೆಸಿದ್ದಾರೆ.ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಅವರನ್ನರಸಿ ಬಂದಿವೆ.

0 comments:

Post a Comment