ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:59 PM

ಬಂಗಾರದ ಫೋನು!

Posted by ekanasu

ಭಕ್ತಿ ಸಿಂಚನ
ಒಂದು ಸಲ ಒಬ್ಬ ಅಮೇರಿಕಾ ದೇಶದವ ಜಗತ್ತಿನ ಎಲ್ಲಾ ಪ್ರಸಿದ್ಧ ಚರ್ಚ್‌ಗಳ ಬಗ್ಗೆ ಒಂದು ಪುಸ್ತಕ ಬರೀಬೇಕು ಅಂತ ಹೊರಟ. ಎಲ್ಲಾ ದೇಶಗಳ ವೈಶಿಷ್ಟ್ಯಪೂರ್ಣ ಚರ್ಚುಗಳ ಬಗ್ಗೆ ಮಾಹಿತಿ ಕಲೆ ಹಾಕಬೇಕು ಅಂತ ಒಂದೊಂದೇ ದೇಶಕ್ಕೆ ಭೇಟಿ ಕೊಡತೊಡಗಿದ.ಮೊದಲು ಚೀನಾ ದೇಶಕ್ಕೆ ಹೋದ.ಅಲ್ಲಿದ್ದ ಪ್ರಸಿದ್ಧ ಚರ್ಚಿಗೆ ಭೇಟಿ ಇತ್ತು ಚರ್ಚಿನ ಫೋಟೋ ತೇಗಿತಾ ಇರಬೇಕಾದ್ರೆ ಅಲ್ಲೊಂದು ಅಚ್ಚರಿ ಕಾಣಿಸ್ತು. ಗೋಡೆ ಒಂದರ ಮೇಲೆ ಬಂಗಾರದ ಫೋನ್ ಒಂದನ್ನು ತೂಗು ಹಾಕಿದ್ರು. ಫೋನ್ ಪಕ್ಕದಲ್ಲೇ ಒಂದು ಬೋರ್ಡ್‌ನಲ್ಲಿ ’ಒಂದು ಕರೆಗೆ ಒಂದು ಸಾವಿರ ಡಾಲರುಗಳು’ ಅಂತ ಬರೆದಿತ್ತು! ಅಮೇರಿಕದ ಪ್ರವಾಸಿಗೆ ಅಚ್ಚರಿಯಾಯಿತು. ಪಾದ್ರಿ ಬಳಿ ಕೇಳಿದ. ’ಇದು ಸ್ವರ್ಗಕ್ಕೆ ಕರೆ ಮಾಡೋಕೆ ಇರೋ ಫೋನು, ಒಂದು ಲಕ್ಷ ಡಾಲರು ಕೊಟ್ಟು ದೇವರೊಂದಿಗೆ ಮಾತನಾಡಬಹುದು’ ಎಂಬ ಉತ್ತರ. ಪ್ರವಾಸಿಗೆ ಅತ್ಯಾಶ್ಚರ್ಯ ಆಯ್ತು. ತನ್ನ ಪ್ರವಾಸದ ಕೊನೆಯಲ್ಲಿ ಇಲ್ಲಿಗೆ ಮತ್ತೆ ಬಂದು ಒಮ್ಮೆ ದೇವರೊಂದಿಗೆ ಕಷ್ಟ-ಸುಖ ಹೇಳ್ಕೋಬೇಕು ಅಂತ ಅಂದುಕೊಂಡು ಅಲ್ಲಿಂದ ಚರ್ಚು ಚರ್ಚು ತಿರುಗ್ತಾ ಜಪಾನಿಗೆ ಹೋದ.
ಅಲ್ಲಿನ ಮುಖ್ಯ ಚರ್ಚಿಗೆ ಹೋದ್ರೆ ಅಲ್ಲೂ ಚೀನಾದಲ್ಲಿ ನೋಡಿದ ಫೋನ್ ತರಹದ್ದೇ ಫೋನ್ ಇಟ್ಟಿದ್ರು! ಮೇಲೊಂದು ಬೋರ್ಡ್ ’ಒಂದು ಕರೆಗೆ ಒಂದು ಸಾವಿರ ಡಾಲರ್ ಮಾತ್ರ’. ‘ಇದು ದೇವರಿಗೆ ಕಾಲ್ ಮಾಡೋಕಿರೋದಾ?’ ಅನುಮಾನ ಬಂದು ಭಕ್ತರನ್ನು ಒಬ್ಬರನ್ನು ಕೇಳಿದ. “ಹೌದು ಹೌದು, ಅಲ್ಲಿ ಕೌಂಟರ್ ಅಲ್ಲಿ ಹಣ ಕೊಟ್ಟು ಕೂಪನ್ ತಗೋಳಿ”. ’ಓ, ಜಪಾನ್‍ನಲ್ಲೂ ಈ ಸೌಲಭ್ಯ ಇದೆ’ ಅಂದುಕೊಂಡು ಅಮೇರಿಕಾದ ಲೇಖಕ ಮುಂದುವರೆದ.
ಅಮೇರಿಕಾದ ಪ್ರವಾಸಿಗೆ ಆಮೇಲೆ ಗೊತ್ತಾದದ್ದು ಏನಂದ್ರೆ ಎಲ್ಲ ದೇಶದ ಮುಖ್ಯ ಚರ್ಚುಗಳಲ್ಲಿ ಈ ಸೌಲಭ್ಯ ಕಲ್ಪಿಸಿದಾರೆ ಅಂತ.
ಹೀಗೆ ಎಲ್ಲಾ ದೇಶದ ಚರ್ಚುಗಳ ಬಗ್ಗೆ ದಾಖಲಿಸುತ್ತಾ ಅಮೇರಿಕನ್ ಲೇಖಕ ಕಡೆಗೆ ಭಾರತಕ್ಕೂ ಬಂದ.

ಭಾರತದ ಮುಖ್ಯ ಚರ್ಚೊಂದನ್ನು ನೋಡಿ ಹೊರಗಡೆ ಬರುತ್ತಾ ಇರಬೇಕಾದ್ರೆ ಪಕ್ಕನೆ ನೆನಪಾಯಿತು. ಭಾರತದಲ್ಲೂ ಬಂಗಾರದ ಫೋನ್ ಇದೆಯ ಅಂತ. ಅಲ್ಲಿ ಇಲ್ಲಿ ಕಣ್ಣು ಹಾಯಿಸಿದ ಮೇಲೆ ಮೂಲೆಲಿ ಕಾಣಿಸಿಯೇ ಬಿಡ್ತು.
ಹತ್ತಿರ ಹೋಗಿ ನೋಡಿದ್ರೆ ಯಥಾಪ್ರಕಾರ ಬೋರ್ಡ್ ಒಂದು ಇತ್ತು. ಆದರೆ ಅದರ ಮೇಲೆ ಬರೆದಿದ್ದು “ಒಂದು ಕರೆಗೆ ಒಂದು ರೂಪಾಯಿ” ಅಮೇರಿಕನ್‍ಗೆ ಹೊಟ್ಟೆ ತೋಳಸೋ ಅಷ್ಟು ಆಶ್ಚರ್ಯ ಆಯಿತು. ’ಇದು ದೇವರಿಗೆ ಕರೆ ಮಾಡೋಕೆ ಇಟ್ಟ ಫೋನಾ?’ ಪಾದರಿಗಳನ್ನ ಕೇಳಿದ. “ಹೌದು ಮಗು”. ’ಎಲಾ! ಉಳಿದ ದೇಶಗಳಲ್ಲಿ ಒಂದು ಲಕ್ಷ ಡಾಲರ್ ಇರೋದು ಇಲ್ಲಿ ಬರಿ ಒಂದು ರುಪಾಯಿ?!’ ಯಾಕೆ ಸುಮ್ಮನೆ ಹೊಟ್ಟೆಲಿಟ್ಗೊಂಡು ಸಂಕಟ ಪಡೋದು ಅಂತ ಪಾದರಿಗಳನ್ನ ಕೇಳಿದ. ” ನಾನು ಬೇರೆ ಬೇರೆ ದೇಶಗಳಲ್ಲಿ ಇದೇ ತರಹದ ಫೋನ್ ನೋಡಿದಿನಿ. ಅಲ್ಲೆಲ್ಲ ಒಂದು ಕರೆಗೆ ಒಂದು ಲಕ್ಷ ಡಾಲರ್ ಚಾರ್ಜ್ ಮಾಡ್ತ ಇದಾರೆ. ಇಲ್ಯಾಕೆ ಬರಿ ಒಂದು ರೂಪಾಯಿ?”

ಪಾದರಿ ತಣ್ಣನೆ ಸ್ವರದಲ್ಲಿ ಉತ್ತರಿಸಿದರು…

ಓದುಗರೇ ಉತ್ತರ ಏನಿರಬಹುದು.. ಊಹಿಸಿ ನೋಡೋಣ…
*
*
*
*
*
*
*
*
*
*
*
*
*
*
*
*
*
*
*
*
*
*
*
*
*
*
*
*
*
*
*
*
*
*
*
*
*
*

“ಓ ಅದಾ.. ಇಂಡಿಯಾದಿಂದ ಸ್ವರ್ಗ ಲೋಕಲ್ ಕಾಲ್ ಅಲ್ವಾ.. ಅದ್ಕೆ ಬರಿ ಒಂದು ರುಪಾಯಿ”!!!
ಜೈ ಭಾರತಾಂಬೆ!
(ಓದಿದಷ್ಟೂ ಇನ್ನೂ ಇನ್ನೂ ಓದಬೇಕೆನಿಸುವ http://hareraama.in ಓದಿ.ಶ್ರೀ ಗುರುಗಳ ಇನ್ನಷ್ಟು ವಚನಾಮೃತಗಳಿವೆ....
- ಸಂ.)

2 comments:

ಕನ್ನಡಬ್ಲಾಗ್ ಲಿಸ್ಟ್ said...

uttama kateyanu prakatisidere dhanyavadagalu

ಕನ್ನಡಬ್ಲಾಗ್ ಲಿಸ್ಟ್ said...

uttama kateyanu prakatisidere dhanyavadagalu

Post a Comment