ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಕಾರವಾರ : ಇಡೀ ಪ್ರಪಂಚದಲ್ಲಿಯೇ ತೀರ ಅಪರೂಪ ಹಾಗೂ ಅಪಾಯದ ಅಂಚಿನಲ್ಲಿರುವ ರೋಟನ್ಸ ಫ್ರೀಟೇಲ್ಡ(wroughotons free-tailed bat) ವೈಜ್ಞಾನಿಕ ಹೆಸರು ಅಟೋಮೊಪ್ಸ ರೋಟನಿ(Otomops wroughotoni) ಯೆಂಬ ಪ್ರಭೇದದ ಬಾವಲಿಯು ಜೋಯಡಾ ತಾಲೂಕಿನ ಕುಂಡಲ ಹಾಗೂ ಡಿಗ್ಗಿಯ ರಣಮಂಡಲ ಅರಣ್ಯ ಪ್ರದೇಶದ ಕಗ್ಗತ್ತಲಿನ ಬೃಹತ್ ಗುಹೆಗಳಲ್ಲಿ ಗೋಚರಿಸಿವೆ. ಧಾರವಾಡದ ಗ್ರೀನ್ ಅರ್ಥ ಸಂಸ್ಥೆ ಹಾಗೂ ಜೋಯಡಾದ ಕ್ಯೂಬ್ರಾಡ್ ಸಂಸ್ಥೆಯ ಸಂಶೋಧನಾ ಸದಸ್ಯರು ಇತ್ತೀಚಿಗೆ ಕೈಕೊಂಡ ಜೀವವೈವಿಧ್ಯ ನಡಿಗೆ ಅಧ್ಯಯನ ಚಾರಣದ ವೇಳೆ ಇಂಥ ದಾಖಲೆಯ ವಿಷಯವನ್ನು ಬಹಿರಂಗಗೊಳಿಸಿದ್ದಾರೆ. ಇತ್ತೀಚೆಗೆ ಡಿಗ್ಗಿ ಅರಣ್ಯ ಪ್ರದೇಶದಲ್ಲಿ ಕಂಡು ಬಂದ ಥಿಯೋಬಾಲ್ಡ ಟೊಂಬ(theobald's tomb)ಬಾವಲಿಯನ್ನು ಕಂಡು ಹಿಡಿದ ಬೆನ್ನಲ್ಲೇ ಇಂಥದೊಂದು ಅಪರೂಪದ ಇನ್ನೊಂದು ಬಾವಲಿ
ರೋಟನ್ಸ ಫ್ರೀಟೇಲ್ಡ ಬಾವಲಿ ಗೋಚರವಾದ ಹಿನ್ನೆಲೆಯಲ್ಲೇ ಜೋಯಡಾದ ಅರಣ್ಯ-ಗುಡ್ಡಗಳು ಹಾಗೂ ಗುಹೆಗಳು ಸಾಕಷ್ಟು ವಿರಳ ಜೀವ ವೈವಿಧ್ಯತೆಯನ್ನು ಹೊಂದಿವೆಯೆಂಬ ಅಂಶವನ್ನು ಬೆಳಕಿಗೆ ತರಲಾಗಿದೆ.ಇಡೀ ಭಾರತದಲ್ಲಿಯೇ ಕೇವಲ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ತಳೇವಾಡಿ ಹಾಗೂ ಕೃಷ್ಣಾಪುರ ಗ್ರಾಮಗಳನ್ನೊಳಗೊಂಡ ಮಹಾದಾಯಿ ನದಿಯ ಸುತ್ತಲಿನ ಅರಣ್ಯ ಕ್ಷೇತ್ರದಲ್ಲಿ ಮಾತ್ರವೇ ಈ ಬಾವಲಿಯನ್ನು ಕಾಣಬಹುದೆಂಬ ಭ್ರಮೆಗೆ ಈಗ ತೆರೆ ಬಿದ್ದಿದೆ. ಈ ಬಾವಲಿಯ ಹಾಗೂ ಇನ್ನುಳಿದ ಅರಣ್ಯ ಪ್ರಭೇದದ ನೆಪವೊಡ್ಡಿ ಬೆಳಗಾವಿ, ಪುಣೆ ಹಾಗೂ ಗೋವಾದ ಕೆಲ ಸಂಘ-ಸಂಸ್ಥೆಗಳು ಕಳಸಾ-ಬಂಡೂರಾ ಹಾಗೂ ಮಹಾದಾಯಿ ತಿರುವು ಯೋಜನೆಗೆ ತಡೆವೊಡ್ಡುತ್ತಿದ್ದವು. ಇದರಿಂದಾಗಿಯೇ ಅಲ್ಲಿಯ ಸುತ್ತಲಿನ ಗ್ರಾಮಗಳ ಜನರು ಸಹ ಕೆಲ ತೊಂದರೆಗಳನ್ನು ಅನುಭವಿಸಬೇಕಾಯಿತು.

ಅಳಿವಿನಂಚಿನಲ್ಲಿರುವ ಈ ರೋಟನ್ಸ ಫ್ರೀಟೇಲ್ಡ ಬಾವಲಿ ಕೊಂಬೋಡಿಯಾದಲ್ಲಿ ಹಾಗೂ ಇತ್ತೀಚಿಗೆ ನ್ಯಾಗಾಲಾಂಡ್ನ ಅರಣ್ಯ ಗುಹೆಗಳಲ್ಲಿ ಮಾತ್ರ ಕಂಡು ಬಂದಿವೆ. ಬೆಳಗಾವಿಯ ಖಾನಾಪುರ ತಾಲ್ಲೂಕಿನ ಬಾರಾಪೇಡಿ ಗುಹೆಯ ಬಾವಲಿಯ ನೆಪವೊಡ್ಡಿ ಮಹಾದಾಯಿ ಹಾಗೂ ಕಳಸಾ-ಬಂಡೂರಾ ತಿರುವು ಯೋಜನೆಗಳಿಗೂ ಅನುಮತಿ ನೀಡಬಾರದೆಂದು ಕೆಲ ಸಂಸ್ಥೆಗಳು ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವಾಲಯಕ್ಕೆ ಮನವಿಯನ್ನು ಸಲ್ಲಿಸಿದ್ದವು. ಅದರೆ ಈ ಬಾವಲಿಯು ಉತ್ತರ ಕನ್ನಡ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಗೋಚರಿಸಿದ ಹಿನ್ನೆಲೆಯಲ್ಲಿ ಧಾರವಾಡದ ಸೆಂಟರ್ ಫಾರ್ ಗ್ರೀನ್ ಅರ್ಥ ಸಂಸ್ಥೆಯು ಇನ್ನು ಹೆಚ್ಚಿನ ಸಂಶೋಧನೆಯನ್ನು ಕೈಗೊಳ್ಳುವುದಾಗಿ ಡಾ: ಧೀರಜ್ ತಿಳಿಸಿದ್ದಾರೆ.ಕಳೆದ ಮೂವತ್ತು ವರ್ಷಗಳಿಂದ ದೇಶದಲ್ಲೆಡೆ ಚಾರಣ ಕೈಕೊಂಡಿರುವ ಹಾಗೂ ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ತೆರೆಮರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗಂಗಾಧರ ಕಲ್ಲೂರ ತಿಳಿಸುವಂತೆ ಪಶ್ಚಿಮ ಘಟ್ಟಗಳ ಗೊಂಡಾರಣ್ಯಗಳಲ್ಲಿ ಮಾನವ ಸಂಪರ್ಕವಿರದ ಅನೇಕ ಗುಹೆಗಳಲ್ಲಿ ಇಂಥ ಬಾವಲಿಗಳನ್ನು ಕಾಣಬಹುದಾಗಿದೆ. ಕನರ್ಾಟಕ ಹಾಗೂ ಗೋವಾ ಗಡಿಯ ಅರಣ್ಯ ಪ್ರದೇಶಗಳಲ್ಲಿ ಅನೇಕ ಅಪರೂಪದ ಪ್ರಭೇಧಗಳಿವೆಯೆಂದು ತಿಳಿಸಿದ್ದಾರೆ. ಬಾವಲಿಗಳಲ್ಲದೇ ಇನ್ನೂ ಅನೇಕ ವಿರಳ ಸರೀಸೃಪಗಳ ಪ್ರಭೇದಗಳು, ಸಸ್ಯಗಳು ಜೋಯಡಾದ ಡಿಗ್ಗಿ ಅರಣ್ಯ ಪ್ರದೇಶದಲ್ಲಿವೆ. ಈ ಕುರಿತು ಹೆಚ್ಚಿನ ಸಂಶೋಧನೆ ಅಗತ್ಯವಿದೆಯೆಂದು ಕ್ಯೂಬ್ರಾಡ್ ಸಂಸ್ಥೆಯ ಪ್ರತಿನಿಧಿ ರವಿ ಡೇರೆಕರ್ ಹಾಗೂ ಜಯಾನಂದ ಡೇರೆಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

0 comments:

Post a Comment