ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಜಕೀಯ
ರಾಜ್ಯ ಸಚಿವ ಸಂಪುಟ ವಿಸ್ತರಣೆ `ಇನ್' ಶ್ರೀನಿವಾಸ ಶೆಟ್ರೋ ಪೂಜಾರ್ರೋ

ಉಡುಪಿ : ಇದೇ ತಿಂಗಳು ರಾಜ್ಯ ಸಚಿವ ಸಂಪುಟ ವಿಸ್ತರಣೆ ಯಾಗುತ್ತದೋ ಇಲ್ಲಾ ಮತ್ತೆ ಮುಂದಕ್ಕೆ ಹೋಗುತ್ತದೋ ಗೊತ್ತಿಲ್ಲ. ಆದರೆ ಇಂಥಹದ್ದೊಂದು `ರುಮಾರ್' ಮಾತ್ರ ಹುಟ್ಟಿಕೊಂಡಿದೆ.ಸಚಿವ ಸಂಪುಟಕ್ಕೆ `ಇನ್' ಯಾರಾಗುತ್ತಾರೆ. ಹಾಲಾಡಿ ಶ್ರೀನಿವಾಸ ಶೆಟ್ರೋ ಅಥವಾ ಶ್ರೀನಿವಾಸ ಪೂಜಾರ್ರೋ ಎಂಬ ಲೆಕ್ಕಚಾರ. ಹಾಗೆ ನೋಡಿದರೆ ಈ ಇಬ್ಬರಲ್ಲೂ ಸಚಿವರಾಗುವ ಯೋಗ್ಯತೆಯಿದೆ. ಸಚಿವರಾದರೆ ಸಮರ್ಥವಾಗಿ ನಿಭಯಿಸುವ ತಾಕತ್ತೂ ಇದೆ. ಪ್ರಾಮಾಣಿಕತೆಗೆ ಇಬ್ಬರಲ್ಲೂ ಕೊರತೆಯಿಲ್ಲ. ಎಲ್ಲೂ ಹೆಸರೂ ಕೆಡಿಸಿಕೊಂಡಿಲ್ಲ. ಶ್ರೀನಿವಾಸ ಪೂಜಾರಿ ಅವರ ಹತ್ತಿರ ಮಾತಿನ ಬಂಡವಾಳವಿದ್ದರೆ, ಶ್ರೀನಿವಾಸ ಶೆಟ್ಟಿ ಅವರಿಗೆ ಕುಂದಾಪುರದ `ವಾಜಪೇಯಿ' ಎಂಬ ಬಿರುದಿದೆ. ಈ ಇಬ್ಬರೂ ಜೀ `ಹುಜೂರ್' ಸಂಸ್ಕೃತಿಯವರಲ್ಲ ಅನ್ನೋದು ವಿಶೇಷ.ಇವರಿಗೆ ತಮ್ಮಷ್ಟಕ್ಕೆ ಕೆಲಸಮಾಡೋದು ಗೊತ್ತು. ಲಾಭಿ ಮಾಡೋದು ಗೊತ್ತಿಲ್ಲ. ಸೌಜನ್ಯ, ನಿಷ್ಠೆ, ಪ್ರಾಮಾಣಿಕತೆ, ಎಲ್ಲರೊಟ್ಟ್ಟಿಗೆ ಬೆರೆಯುವ ಗುಣ, ಮನೆಗೆ ಬಂದವರನ್ನು ಹಾಗೆ ಕಳುಹಿಸದೆ ಕೈಲಾಷ್ಟು ಸಹಾಯಮಾಡುವ `ಸಾಪ್ಸೀದಾ' ಮನೋಭವ ಇಬ್ಬರ ಆಸ್ತಿ. ಇವರ ವ್ಯಕ್ತಿತ್ವಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರೇ `ಬಹುಪಾರಾಕು' ಎಂದಿದ್ದಾರೆ. ಶ್ರೀನಿವಾಸ ಶೆಟ್ಟಿ ಮತ್ತು ಶ್ರೀನಿವಾಸ ಪೂಜಾರಿ `ರಾಮಲಕ್ಷ್ಮಣ'ರಂತೆ ಎಂಬ `ಸರ್ಟಿಫಿಕೇಟ್' ಕೂಡಾ ಕೊಟ್ಟಿದ್ದಾರೆ.
ಪ್ರಾಮಾಣಿಕರು ಸಚಿವರಾಗ ಬೇಕು ಎಂಬ ಉದ್ದೇಶವಿದ್ದರೆ ಶ್ರೀನಿವಾಸ ಶೆಟ್ಟಿ ಅವರಿಗೆ ಸಚಿವ ಸ್ಥಾನ ನಿಕ್ಕಿ. ಇನ್ನು ಬಿಲ್ಲವ ಸಮುದಾಯಕ್ಕೆ ಮನ್ನಣೆ ಕೊಡಬೇಕು ಅಂತಾದರೆ ಶ್ರೀನಿವಾಸ ಪೂಜಾರಿ ಅವರಿಗೆ `ಲಕ್' ಕುದುರಲು ಅಡ್ಡಿಯಿಲ್ಲ.
ಶ್ರೀನಿವಾಸ ಶೆಟ್ಟಿ ಅವರಾಗಲೀ ಶ್ರೀನಿವಾಸ ಪೂಜಾರಿ ಅವರಾಗಲೀ ಸಚಿವ ಸ್ಥಾನಕ್ಕಾಗಿ ಲಾಭಿ ನಡೆಸೋರಲ್ಲ. ಬಿಜೆಪಿ ಮುಖಂಡರು ಇವರ ನಿಷ್ಠೆ ಗುರುತಿಸಿ ಸಚಿವ ಸ್ಥಾನ ಕೊಟ್ಟರೆ ಬೇಡಾ ಎನ್ನಲ್ಲು ಇವರೇನು ಸನ್ಯಾಸಿಗಳಲ್ಲ.
ವರಿಷ್ಠರ ಮಾತುಕತೆ : ಒಂದು ಮೂಲದ ಪ್ರಕಾರ ಬಿಜೆಪಿ ಮುಖಂಡರು ಕೋಟ ಶ್ರೀನಿವಾಸ ಪೂಜಾರಿ ಅವರ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಸಚಿವ ಸ್ಥಾನದ ಜವಾಬ್ದಾರಿ ಹೊರಬಲ್ಲಿರಾ ಎಂದು ಬಿಜೆಪಿ ಮುಖಂಡರು ಕೇಳಿದ್ದಾರೆ ಎನ್ನಲಾಗಿದೆ. ಅದಕ್ಕೆ ಶ್ರೀನಿವಾಸ ಪೂಜಾರಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಅವರ ನಿಕಟವರ್ತಿಗಳು ತಿಳಿಸಿದ್ದಾರೆ. ಹಾಗೇನಾದರೂ ಆದರೆ ಶ್ರೀನಿವಾಸ ಪೂಜಾರಿ ಅವರಿಗೆ ಸಚಿವ ಸ್ಥಾನ ನಿಶ್ಚಿತ.
ಶ್ರೀನಿವಾಸ ಪೂಜಾರಿ ಕೆಳಮಟ್ಟದಿಂದ ರಾಜಕೀಯದಲ್ಲಿ ಮೇಲಕ್ಕೆ ಬಂದವರು. ಇವರ ಪಕ್ಷನಿಷ್ಠೆ ಪ್ರಶ್ನಾತೀತ. ಸಂಘ ಪರಿವಾರದಲ್ಲೂ ಪೂಜಾರಿಗೆ ಒಳ್ಳೆಯ ಹೆಸರಿದೆ. ಅರಳು ಹುರಿದಂತೆ ಮಾತನಾಡುವ ಪೂಜಾರಿ ಅವರು ಮಧ್ಯಮ ವರ್ಗದಿಂದ ಬಂದವರು.
ಕೋಟದಲ್ಲೊಂದು ಇವರ ಸ್ಟುಡಿಯೋ ಇದೆ. ಸ್ಟುಡಿಯೋ ಇವರಿಗೆ ಆಫೀಸು ಹೌದು. ಬಗಲಿಗೆ ಕ್ಯಾಮರಾ ತೂಗುಹಾಕಿ ಕೊಂಡು ಫೋಟೋಗ್ರಫಿ ಮಾಡುತ್ತಿದ್ದ ಇವರಿಗೆ ಜನಸಾಮಾನ್ಯರೊಟ್ಟಿಗೆ ಬೆರೆಯುವ ಸೌಜನ್ಯವಿದೆ. ಬಡತನವನ್ನು ಹತ್ತಿರದಿಂದ ಕಂಡಿದ್ದರಿಂದ ಬಡವರ ತೊಂದರೆ ತಾಪಾತ್ರಯಗಳ ಸ್ಪಷ್ಟ ಅರಿವಿದೆ. ಕೋಟದಲ್ಲಿ ಇವರು ಅಂದು ಶ್ರೀನಿವಾಸಣ್ಣ ಆಗಿದ್ದರೂ, ಶಾಸಕರಾಗಿ ಆಯ್ಕೆಯಾದ ಮೇಲೂ ಅದೇ ಶ್ರೀನಿವಾಸಣ್ಣ! ಅಧಿಕಾರ ಪದವಿ ಬಂದರೆ ಜನ `ಚೇಂಜ್' ಆಗುತ್ತಾರೆ ಎನ್ನುವ ಮಾತಿದೆ. ಆದರೆ ಅದು ಶ್ರೀನಿವಾಸ ಪೂಜಾರಿ ಅವರಿಗೆ ಅನ್ವಯಿಸುವುದಿಲ್ಲ. ಅಂದೂ, ಇಂದೂ ಶುದ್ಧ ಹಸ್ತರಾಗಿದ್ದಾರೆ. ಹಿಂದೆ ಹೇಗೆ ಜನರಿಗೆ ಸಿಗುತ್ತಿದ್ದರೋ ಇಂದೂ ಹಾಗೆ ಸಿಗುತ್ತಾರೆ. ಹೊಟೇಲ್ನಲ್ಲಿ `ಒನ್ಬೈಟೂ' ಕಾಫಿ ಹೀರುತ್ತಾ ಹರಟೆ ಹೊಡೆಯುತ್ತಾರೆ. ಶ್ರೀನಿವಾಸ ಪೂಜಾರಿ ಎಂಎಲ್ಸಿ ಆದರೂ ಒಂದು ಚೂರು ಬದಲಾಗಿಲ್ಲ. ಹಾಗಾಗಿ ಇವರನ್ನು ಯಾರು ಬೇಕಾದರೂ ಎಷ್ಟು ಹೊತ್ತಿಗಾದರೂ `ಮೀಟ್' ಮಾಡಬಹುದು. ಕಚೇರಿಯಲ್ಲಿ ಕುಳಿತು ಕಷ್ಟಸುಖ ಹಂಚಿಕೊಳ್ಳಬಹುದು ಎನ್ನೋದು ಜನಸಾಮಾನ್ಯರ ಅಂಬೋಣ.
ಜಾತಿವಾರು ಲೆಕ್ಕಾಚಾರ : ಸಚಿವ ಸಂಪುಟ ವಿಸ್ತರಣೆಗೆ ಜಾತಿವಾರು ಪ್ರಧಾನತೆ ಕೊಟ್ಟರೆ ಬಿಲ್ಲವ ಸಮಾಜಲೆಕ್ಕಕ್ಕೆ ಬರುತ್ತದೆ. ರಾಜ್ಯ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಈಡಿಗ ಸಮುದಾಯದ ಹಾಲಪ್ಪ ರಾಜಿನಾಮೆ ನಂತರ ಬಿಲ್ಲವ ಸಮುದಾಯಕ್ಕೆ ಸೇರಿದವರು ಸಚಿವ ಸಂಪುಟದಲ್ಲಿ ಇಲ್ಲ.
ಬೇಳೋರು ಬೆಂಬಲಿಗರು ಈಡಿಗ ಸಮುದಾಯಕ್ಕೆ ಅವಕಾಶ ಕೊಡುವಂತೆ ಒತ್ತಡ ಹಾಕುತ್ತಿದ್ದರೂ, ಅಲ್ಲೊಂದು ಇಲ್ಲೊಂದು ಹೇಳಿಕೆ ನೀಡಿ ರಾಜ್ಯಾಧ್ಯಕ್ಷರ ಸಿಟ್ಟಗೆ ಬೇಳೂರು ಕಾರಣರಾಗಿದ್ದಾರೆ. ಇನ್ನು ಜಾಲಪ್ಪ ಪುತ್ರ ನರಸಿಂಹಮೂರ್ತಿ ನಿಗಮ ಮಂಡಳಿಗೆ ರಾಜಿನಾಮೆ ಕೊಟ್ಟು ಮತ್ತೆ ಹಿಂದಕ್ಕೆ ಪಡೆದು ತಾನೂ ಸಚಿವ ಆಕಾಂಕ್ಷಿ ಎಂದು `ಇನ್ಡೈರೆಕ್ಟ್ ' ಆಗಿ ಸಂದೇಶ ರವಾನಿಸಿದ್ದಾರೆ. ಇನ್ನು ಹಾಲಪ್ಪ ಸಂಪುಟಕ್ಕೆ ಬರೋ ಕಾಲ ದೂರವೇ ಇದೆ. ಹಾಗೆ ನೋಡಿದರೆ ಬೇಳೂರು ಮತ್ತು ನರಸಿಂಹಮೂರ್ತಿ ಅವರ ಹಾಗೆ ಶ್ರೀನಿವಾಸ ಪೂುಜಾರಿ `ಮಿನಿಸ್ಟರ್' ಮಾಡಿ ಎಂದು ಒತ್ತಡ ಹಾಗೂ ಲಾಭಿ ಮಾಡಿಲ್ಲ. ಸಮುದಾಯದ ಮುಖಂಡರ ಮೂಲಕ ಒತ್ತಡ ಹಾಕಿಲ್ಲ. ಶ್ರೀನಿವಾಸ ಪೂಜಾರಿ ಅವರೊಟ್ಟಿಗೆ ಬಿಜೆಪಿ ನಾಯಕರು ಮಾತನಾಡಿದ್ದು ಶ್ರೀನಿವಾಸ ಪೂಜಾರಿ ಬೆಂಬಲಿಗರಲ್ಲಿ ಆಸೆ ಹುಟ್ಟು ಹಾಕಿದೆ.
ಬ್ರಹ್ಮಾವರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಅನ್ವೇಷಣೆಯಲ್ಲಿದ್ದಾಗ ಕಣ್ಣಿಗೆ ಬಿದ್ದವರು ಶ್ರೀನಿವಾಸ ಪೂಜಾರಿ.ಮೂರು ಬಾರಿ ಬ್ರಹ್ಮಾವರದಲ್ಲಿ ಚುನಾವಣೆಗೆ ನಿಂತು ಪರಾಜಿತರಾದರೂ ಅಥಿರಥ ಮಹಾರಥರಿಗೆ ಗಿಟುಕು ನೀರು ಕುಡಿಸಿದ್ದರು.
ಪ್ರಥಮಭರಿ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಇವರು ನಿರಾಯಾಸವಾಗಿ ಗೆದ್ದು ಬಂದರು. ಮಂಗಳೂರು ಮತ್ತು ಉಡುಪಿ ಜಿಲ್ಲೆಯ ಹೆಚ್ಚಿನ ಪಂಚಾಯ್ತಿಗಳು ಕಾಂಗ್ರೆಸ್ ಹಿಡಿತದಲ್ಲಿದ್ದರೂ ಇವರು ಎಂಎಲ್ಸಿ ಆದರು. ಇದಕ್ಕೆ ಇವರ ವ್ಯಕ್ತಿತ್ವವೇ ಕಾರಣ. ಪಕ್ಷಾತೀತವಾಗಿ ಎಲ್ಲಾ ಪಂಚಾಯ್ತಿ ಪ್ರತಿನಿಧಿಗಳು ಬೆಂಬಲಿಸಿದ್ದರು. ಚುನಾವಣೆಗೆ ಮುಂಚೆಯೇ ಶ್ರೀನಿವಾಸ ಪೂಜಾರಿ ಗೆಲುವು ನಿಶ್ಚಯವಾಗಿತ್ತ. ಈ ಬಾರಿ ಇವರು ಅವಿರೋಧವಾಗಿ ವಿಧಾನ ಪರಿಷತ್ಗೆ ಆಯ್ಕೆಯಾಗಿದ್ದಾರೆ.
ಶ್ರೀನಿವಾಸ ಪೂಜಾರಿ : ಸಚಿವ ಸ್ಥಾನದ ಆಕಾಂಕ್ಷಿಯಂತೂ ನಾನಲ್ಲ. ಸಚಿವ ಸ್ಥಾನಕ್ಕಾಗಿ ಲಾಭಿ ಕೂಡಾ ನಡೆಸಿಲ್ಲ. ಸಜ್ಜನ, ಪ್ರಮಾಣಿಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಸಚಿವ ಸ್ಥಾನ ಸಿಗೋದಾರೆ ಹಾಗೂ ರಾಜ್ಯ ಗೃಹ ಸಚಿವ ಡಾ.ವಿ.ಎಸ್. ಆಚಾರ್ಯ ಅವರಿಗೆ ಕಿರಿಕಿರಿ ಆಗೋದಾದರೆ ನಾನು ಸಚಿವ ಸ್ಥಾನದಿಂದ ಗಾಮದ ದೂರು. ಒಮ್ಮೆ ಬಿಲ್ಲವ ಸಮುದಾಯಕ್ಕೆ ಸಂಪುಟದಲ್ಲಿ ಪ್ರಧಾನತೆ ನೀಡಬೇಕು ಅಂತಾದರೆ ನಾನು ಬಿಲ್ಲವ ವರ್ಗಕ್ಕೆ ಸೇರಿದ್ದೇನೆ ಎಂದು ಶ್ರೀನಿವಾಸ ಪೂಜಾರಿ ಮಾಮರ್ಿಕವಾಗಿ ಪ್ರತಿಕ್ರಿಯಿಸಿದ್ದಾರೆ.
ಒಟ್ಟಾರೆ ಶ್ರೀನಿವಾಸ ಪೂಜಾರಿ ಹೆಸರು ಸಚಿವರ ಪಟ್ಟಿಯಲ್ಲಿ ಕೇಳಿಬರುತ್ತಿದೆ. ಸಂಪುಟ ಸೇರುತ್ತರೋ ಬಿಡುತ್ತಾರೋ ಮೂಂದಿನ ಮಾತು. ಸದ್ಯ ಶ್ರೀನಿವಾಸ ಪೂಜಾರಿ ಹೆಸರು `ರೇಸ್'ನಲ್ಲಿದೆ. ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ್ತು ಕೋಟ ಶ್ರೀನಿವಾಸ ಪೂಜಾರಿ ಸಂಪುಟದಲ್ಲಿ ಸ್ಥಾನ ಸಿಗಲಿ, ಸಗದೇ ಇರಲಿ ಅದಕ್ಕಾಗಿ ಹಪಹಪಿಸುವರಂತೂ ಅಲ್ಲ.

ಹರಿಕೃಷ್ಣ ಬಂಟವಾಳ : ಶ್ರೀನಿವಾಸ ಪೂಜಾರಿ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕರೆ ಅದು ಹಿಂದುಳಿದ ವರ್ಗಕ್ಕೆ ಪ್ರಧಾನತೆ ಸಿಕ್ಕಂತಾಗುತ್ತದೆ.ಮಂಗಳೂರು ಮತ್ತು ಉಡುಪಿ ಜಿಲ್ಲೆಯಲ್ಲಿ ಬಿಲ್ಲವರು ಬಹುಸಂಖ್ಯಾತರಾಗಿದ್ದಾರೆ. ಬಿಲ್ಲವ ಸಮಾಜದವರಾದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸಚಿವ ಸ್ಥಾನ ಸಿಕ್ಕರೆ ಇದು ಬಿಲ್ಲವರೊಟ್ಟಿಗೆ ಹಿಂದುಳಿದವರಿಗೂ ಆಧ್ಯತೆ ಸಿಕ್ಕಂತಾಗುತ್ತದೆ ಎಂದು ಬಿಲ್ಲವ ಮುಖಂಡ ಹರಿಕೃಷ್ಣ ಬಂಟ್ವಾಳ ಈ ಕನಸಿಗೆ ತಿಳಿಸಿದ್ದಾರೆ.

ಸ್ವಾಮೀಜಿ ಲೆಟರ್ : ಧರ್ಮಸ್ಥಳ ಶ್ರೀ ರಾಮ ಕ್ಷೇತ್ರ ಕನ್ಯಾಡಿ ಮಠದ ಶ್ರೀ ಬ್ರಹ್ಮಾನಂದ ಸ್ವಾಮೀಜಿ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರಬರೆದಿದ್ದಾರೆ ಎಂದು ತಿಳಿದು ಬಂದಿದೆ. ಸಂಪುಟ ಪುನರ್ರಚನೆ ಸಂದರ್ಭದಲ್ಲಿ ಬಿಲ್ಲವ ಸಮಾಜ ಕಡೆಗಣಿಸಬಾರದು. ಅವಳಿ ಜಿಲ್ಲೆಯಲ್ಲಿ ಬಿಲ್ಲವರು ಪ್ರಭಲರಾಗಿದ್ದಾರೆ. ಬಿಲ್ಲವ ಸಮಾಜದ ಪ್ರತಿನಿಧಿಯಾದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಸ್ವಾಮೀಜಿ ಈಗಾಗಲೇ ಮುಖ್ಯಮಂತ್ರಿಗಳಿಗೆ ಕಾಗದ ಬರೆದಿದ್ದಾರೆ ಎಂದು ತಿಳಿದುಬಂದಿದೆ.ಶ್ರೀಪತಿ ಹೆಗಡೆ ಹಕ್ಲಾಡಿ

0 comments:

Post a Comment