ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಮೀಸಲು ಕ್ಷೇತ್ರದ ಶಾಸಕ ಎ, ನಾರಾಯಣಸ್ವಾಮಿ, ರಾಜ್ಯ ವಿಧಾನ ಪರಿಷತ್ ಸದಸ್ಯ ಸಿ. ಹೆಚ್. ವಿಜಯ ಶಂಕರ್, ಗದಗ ಜಿಲ್ಲೆಯ ನರಗುಂದ ಶಾಸಕ ಸಿ. ಸಿ. ಪಾಟೀಲ್, ಬೆಂಗಳೂರು ನಗರ ಜಿಲ್ಲೆಯ ಯಶವಂತಪುರ ಕ್ಷೇತ್ರದ ಶಾಸಕಿ ಕುಮಾರಿ ಶೋಭಾ ಕರಂದ್ಲಾಜೆ, ರಾಜ್ಯ ವಿಧಾನ ಪರಿಷತ್ ಸದಸ್ಯ ವಿ, ಸೋಮಣ್ಣ ಹಾಗೂ ಮೈಸೂರು ಜಿಲ್ಲೆಯ ಕೃಷ್ಣರಾಜಾ ಕ್ಷೇತ್ರದ ಶಾಸಕ ಎಸ್. ಎ. ರಾಮದಾಸ್ ರಾಜ್ಯ ಸಚಿವ ಸಂಪುಟಕ್ಕೆ ಸಂಪುಟ ದರ್ಜೆ ಸಚಿವರಾಗಿ ಇಂದು ಸೇರ್ಪಡೆಯಾಗುವುದರೊಂದಿಗೆ ಬಹು ನಿರೀಕ್ಷಿತ ರಾಜ್ಯ ಸಂಪುಟ ವಿಸ್ತರಣೆಯಾಗಿದೆ.
ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕಿಕ್ಕಿರಿದ ಜನಸ್ತೋಮದ ನಡುವೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಸಮ್ಮುಖದಲ್ಲಿ ರಾಜ್ಯಪಾಲ ಹಂಸ ರಾಜ ಭಾರಧ್ವಾಜ್ ಅವರು ನೂತನ ಸಚಿವರಿಗೆ ಅಧಿಕಾರ ಹಾಗೂಗೌಪ್ಯತಾ ಪ್ರಮಾಣ ವಚನ ಬೋಧಿಸಿದರು. ಪ್ರತಿ ಸಚಿವರೂ ಕನ್ನಡ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ಅಭಿಮಾನಿಗಳ ಕರತಾಡನ ಹಾಗೂ ಹರ್ಷೋದ್ಘಾರ ಮುಗಿಲು ಮುಟ್ಟುತ್ತಿತ್ತು. ಎ, ನಾರಾಯಣಸ್ವಾಮಿ ಅವರು ಭಗವಂತನ ಹಾಗೂ ಸತ್ಯ-ನಿಷ್ಠೆಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಸಿ. ಹೆಚ್. ವಿಜಯ ಶಂಕರ್, ಸಿ. ಸಿ. ಪಾಟೀಲ್ ಹಾಗೂ ಶೋಭಾ ಕರಂದ್ಲಾಜೆ ಅವರು ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ವಿ. ಸೋಮಣ್ಣ ಅವರು ಸಿದ್ಧಗಂಗಾ ಮಠಾಧೀಶರ ಹಾಗೂ ಶ್ರೀ ಯಡಿಯೂರು ಸಿದ್ಧಲಿಂಗೇಶ್ವರ ಸ್ವಾಮಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಎಸ್. ಎ. ರಾಮದಾಸ್ ಅವರು ತಾಯಿ ಹಾಗೂ ಸತ್ಯ-ನಿಷ್ಠೆಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದರು. ಸಮಾರಂಭದಲ್ಲಿ ಯಡಿಯೂರಪ್ಪ ಅವರ ಸಚಿವ ಸಂಪುಟದ ಹಲವು ಸದಸ್ಯರು ಪಾಲ್ಗೊಂಡಿದ್ದರು.


ರಂಗ ಪ್ರವೇಶ !

ಎ, ನಾರಾಯಣಸ್ವಾಮಿ, ಸಿ. ಹೆಚ್. ವಿಜಯ ಶಂಕರ್, ಸಿ. ಸಿ. ಪಾಟೀಲ್ ಹಾಗೂ ಎಸ್. ಎ. ರಾಮದಾಸ್ ಅವರು ಪ್ರಪ್ರಥಮ ಬಾರಿಗೆ ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಯಾಗುತಿದ್ದಾರೆ. ಈ ಹಿಂದೆ ವಿ, ಸೋಮಣ್ಣ ಅವರು ಜೆ ಹೆಚ್ ಪಟೇಲ್ ಅವರ ಸರಕಾರದಲ್ಲಿ ಬಂಧೀಖಾನೆ, ಗೃಹ ರಕ್ಷಕ, ಸೈನಿಕ ಕಲ್ಯಾಣ ಮತ್ತು ಸಾರ್ವಜನಿಕ ಕುಂದು-ಕೊರತೆ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೆ, ಬಿ. ಎಸ್. ಯುಡಿಯೂರಪ್ಪ ಅವರ ಸರಕಾರದ ವಸತಿ ಮತ್ತು ಮುಜರಾಯಿ ಸಚಿವರಾಗಿ ಕಾರ್ಯನಿರ್ವಹಿಸಿ ಅನುಭವ ಹೊಂದಿದವರಾಗಿದ್ದಾರೆ. ಗ್ರಾಮೀಣಾಭಿವೃದ್ಧಿ ಸಚಿವರಾಗಿ ಈ ಹಿಂದೆ ಕಾರ್ಯ ನಿರ್ವಹಿಸಿದ್ದ ಕುಮಾರಿ ಶೋಭಾ ಕರಂದ್ಲಾಜೆ ಅವರು ಇದೀಗ ಎರಡನೇ ಬಾರಿಗೆ ಯಡಿಯೂರಪ್ಪ ಅವರ ಸಚಿವ ಸಂಪುಟಕ್ಕೆ ಸೇರ್ಪಡೆಯಾಗುತ್ತಿದ್ದಾರೆ.

ಸಾಮಾಜಿಕ ನ್ಯಾಯ !

ಈ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಾಮಾಜಿಕ ನ್ಯಾಯ ಕಾಯ್ದು ಕೊಳ್ಳಲಾಗಿದೆ. ಪರಿಶಿಷ್ಟ ಜಾತಿ ( ಎ, ನಾರಾಯಣಸ್ವಾಮಿ), ಹಿಂದುಳಿದ ವರ್ಗ - ಕುರುಬ ( ಸಿ. ಹೆಚ್. ವಿಜಯ ಶಂಕರ್), ಲಿಂಗಾಯತ - ಪಂಚಮಸಾಲಿ ( ಸಿ. ಸಿ. ಪಾಟೀಲ್ ), ಒಕ್ಕಲಿಗ ( ಕುಮಾರಿ ಶೋಭಾ ಕರಂದ್ಲಾಜೆ ), ಲಿಂಗಾಯತ - ಸಾದರ ( ವಿ, ಸೋಮಣ್ಣ ) ಹಾಗೂ ಬ್ರಾಹ್ನಣ ( ಎಸ್. ಎ. ರಾಮದಾಸ್ ) ಸಮುದಾಯಕ್ಕೆ ಪ್ರಾತಿನಿಧ್ಯ ನೀಡಲಾಗಿದೆ.

0 comments:

Post a Comment