ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಸುಬ್ರಹ್ಮಣ್ಯ: ಇನ್ನು ಮುಂದೆ ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧ ಮಾಡಲಾಗುವುದು ಎಂದು ಮುಜರಾಯಿ ಖಾತೆ ಸಚಿವ ಕೃಷ್ಣ ಜೆ ಪಾಲೇಮಾರ್ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹೇಳಿದರು. ಸಂಪುಟ ವಿಸ್ತರಣೆಯ ಬಳಿಕ ಮುಜರಾಯಿ ಖಾತೆಯು ಕೃಷ್ಣ ಜೆ ಪಾಲೇಮಾರ್ ಬಗಲಿಗೆ ಬಿದ್ದ ತಕ್ಷಣವೇ ಅವರು ರಾಜ್ಯದ ಪ್ರಸಿದ್ದ ದೇವಸ್ಥಾನವಾದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ಅಕ್ಕಿ , ತೆಂಗಿನಕಾಯಿ ಹಾಗೂ ಬೆಲ್ಲದಲ್ಲಿ ತುಲಾಭಾರ ಸೇವೆಯನ್ನು ಮಾಡಿಸಿದರು.ಇದೇ ವೇಳೆ ದೇವಸ್ಥಾನದಲ್ಲಿ ಮಹಾಪೂಜೆಯನ್ನು ಬೆರವೇರಿಸಿದ ಬಳಿಕ ಸಂಪುಟ ನರಸಿಂಹ ಸ್ವಾಮಿ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.ಇದೇ ವೇಳೆ ಕುಕ್ಕೆ ಸುಬ್ರಹ್ಮಣ್ಯದಲ್ಲಿನ 180 ಕೋಟಿ ರುಪಾಯಿಯ ಮಾಸ್ಟರ್ ಪ್ಲಾನ್ ಕಾಮಗಾರಿಯನ್ನು ವೀಕ್ಷಿಸಿ ಅದರ ಸ್ಲೈಡ್ ಶೋವನ್ನು ನೋಡಿದರು. ಬಳಿಕ ಮಾತನಾಡಿದ ಅವರು ದೇವಸ್ಥಾನಗಳಲ್ಲಿ ವ್ಯಾಪಾರೀಕರಣ ನಡೆಯುತ್ತಿದೆ ಎಂಬ ಆರೋಪವಿದೆ, ಆದರೆ ಇನ್ನು ಮುಂದೆ ಅಂತಹ ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದ ಪಾಲೇಮಾರ್ ಶ್ರೀಮಂತ ದೇವಾಲಯದ ಆದಾಯಗಳಿಂದ ಉಳಿದ ದೇವಸ್ಥಾನಗಳ ಅಭಿವೃದ್ದಿ ನಡೆಸಲಾಗುವುದು ಎಂದು ಅವರು ಹೇಳಿದರು.ಮಜರಾಯಿ ಖಾತೆಗೆ ಹೆದರಲ್ಲ ; ಸಮರ್ಥವಾಗಿ ನಿಭಾಯಿಸ್ತೀನಿ ಮುಜರಾಯಿ ಖಾತೆ ಅಂದ್ರೆ ಅದೊಂದು ಕಾಟದ ಖಾತೆ, ಇದನ್ನು
ವಹಿಸಿಸ್ಕೊಂಡ್ರೆ ಮುಂಬರುವ ಎಲೆಕ್ಷನ್ನಲ್ಲಿ ಗೆಲ್ಲೋದಿಲ್ಲ ಅನ್ನೋ ಭಯದ ಕಾರಣಕ್ಕಾಗಿ ಕೃಷ್ಣ ಜೆ ಪಾಲೇಮಾರ್ ಕುಕ್ಕೆ ಸುಬ್ರಹ್ಮಣ್ಯದಲ್ಲಿ ತುಲಾಭಾರ ಸೇವೆ ಮಾಡಿದ್ದರೇ ಅನ್ನೋದು ಸಾರ್ವಜನಿಕ ವಲಯದಲ್ಲಿ ಕೇಳಿಬಂದ ಮಾತು.ಆದರೆ ಅಂತಹ ಯಾವುದೇ ಭಯ ನನಗಿಲ್ಲ.ದೇವರು ಎಂದರೆ
ನನಗೆ ಭಯ - ಭಕ್ತಿ ಹಾಗಾಗಿ ನನಗೇನೂ ಆಗದು ಎನ್ನುವ ಪಾಲೇಮಾರ್ , ಇದು ಸ್ಥಳೀಯರೊಬ್ಬರು ನಾನು
ಮಂತ್ರಿಯಾಗಬೇಕು ಎಂದು ಹರಕೆ ಹೇಳಿಕೊಂಡಿದ್ದರು ಅದನ್ನು ಈಗ ತೀರಿಸಿದ್ದೇನೆ.ಇದು ಹಿಂದಿನ ಹರಕೆ ಎಂದ ಅವರು, ದೇವರ ಮೇಲಿನ ಶ್ರದ್ದಾ ಭಕ್ತಿಯಿಂದ ಕೆಲಸ ಮಾಡಿದೆ ಯಾವುದೇ ಸಚಿವರಿಗೆ ಏನೂ ಆಗದು ಎಂದೂ ಅವರು ಹೇಳಲು ಮರೆಯಲಿಲ್ಲ.ಪರಿಸರ ಖಾತೆ ಜೊತೆಗೆ ಮುಜರಾಯಿ ಕೂಡಾ ಸಿಕ್ಕಿರೋದು ಒಳ್ಳೆಯದೇ ಆಗಿದೆ.ಇವೆರಡೂ ಒಂದಕ್ಕೊಂದು ಪೂರಕವಾಗಿದೆ ಹಾಗಾಗಿ ಒಳ್ಳೇ ಕೆಲಸ ಮಾಡಬಹುದು ಎಂದು
ಅಭಿಪ್ರಾಯಪಟ್ಟರು.


ಈ ಸಂದರ್ಭದಲ್ಲಿ ಸುಳ್ಯ ಶಾಸಕ ಎಸ್.ಅಂಗಾರ, ಅರಣ್ಯ ನಿಗಮದ ಅಧ್ಯಕ್ಷ ಎಸ್.ಎನ್.ಮನ್ಮಥ, ಸುಳ್ಯ ತಾಲೂಕು ಬಿಜೆಪಿ ಅಧ್ಯಕ್ಷ
ವೆಂಕಟ್ ದಂಬೆಕೋಡಿ,ದೇವಳದ ಆಡಳಿತಾಧಿಕಾರಿ ಡಾ.ಹರೀಶ್ ಕುಮಾರ್ ಮೊದಲಾದವರಿದ್ದರು.


- ಮಹೇಶ್ ಪುಚ್ಚಪ್ಪಾಡಿ

0 comments:

Post a Comment