ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ
ಆಷಾಢದ ಮಳೆ ಬಿಟ್ಟೂ ಬಿಡದೆ ಸುರಿಯುತ್ತಿದೆ... ಮಳೇಲಿ ನೆನೀಬೇಕೆನ್ನುವ ಆಸೆ ಯಾಕೋ ನೀನು ನೆನಪಾಗುತ್ತಿದ್ದೀಯಾ. ನಿನ್ನನ್ನು ಬಿಟ್ಟು ಹೊರಟು ಬಂದು ಇಂದಿಗೆ ಸರಿಯಾಗಿ ಆರು ತಿಂಗಳು... ಹೊರಡಬೇಕಾದರೆ ನಿನ್ನ ಮುಖ ನೋಡೋದಿಲ್ಲ ಅಂತ ಬಂದಿದ್ದೇನೆ... ಹೊರಟು ಬರಲು ಅಂತ ದೊಡ್ಡ ಕಾರಣವೇನೂ ಇರಲಿಲ್ಲ, ಹುಡುಕಿದರೆ ಚಿಕ್ಕ ಕಾರಣವೂ ಸಿಗುವುದಿಲ್ಲ. ತಪ್ಪು ನಂದಾ ನಿಂದಾ... ? ಬಹುಶಃ ಇಬ್ಬರೂ ತಪ್ಪೂ ಮಾಡಿಲ್ಲ ಸರಿನೂ ಇಲ್ಲ... ಯಾವತ್ತೂ ನೀನು ಹೇಳುತ್ತಿದೆ ಗೊಂದಲದ ನಡುವೆ ಬದುಕು ಅಂತ? ಎಷ್ಟು ನಿಜ ಅಲ್ವಾ... ನಿನ್ನನ್ನು ಬಿಟ್ಟು ಒಬ್ಬಳೇ ನೆನೆದೆ ನಿನ್ನ ನೆನಪು ನೆನೆಯೋ ಸವಿ ಉಣ್ಣಲು ಬಿಡಲಿಲ್ಲ. ಬಹುಶಃ ನಿನಗೆ ನನ್ನಂಥ ಕನಸುಗಳಿರಲಿಲ್ಲ. ಆದರೆ ಕನಸು ಇತ್ತು, ಭಾವನೆ ಇತ್ತು ನನ್ನಂತೆ ಹುಟ್ಟಾಸೆಗಳಿತ್ತು. ನೀನು ಮಳೆಹನಿಯಂತೆ ಮೌನಿ, ನಾನು ಗುಡುಗಿನಂತೆ ಮಾತುಗಾರಳು, ಬದುಕನ್ನು ಮಾತಲ್ಲೇ ಮುಗಿಸ್ತೀಯಾ ಎಂದು ಎಷ್ಟೋ ಸಲ ನೀನು ಹೇಳುವುದಿತ್ತು... ಈಗ ಅದೆಲ್ಲವೂ ಬರೀ ನೆನಪಷ್ಟೇ. ನಿನ್ನ ಕನಸು ಬಯಕೆಗಳೆಲ್ಲವೂ ಮರುಭೂಮಿಯ ಮರಳಿನಂತಾಯಿತು... ನನ್ನ ಹುಟ್ಟಾಸೆಗಳೆಲ್ಲ ಮಳೆಬಿದ್ದು ಇಂಗಿದ ನೆಲದಂತಿದೆ... ಬಿದ್ದಷ್ಟೂ ಜಾಸ್ತಿಯಾಗೋ ಇಂಗಿತದಂಥ ಹುಚ್ಚು ಬಯಕೆಗಳು.ಮನೆಯವರನ್ನು ಕಾಡಿ ಬೇಡಿ ಜಾತಿ ಬಂಧನಬಿಟ್ಟು ಪ್ರೀತಿಯ ಗುಡಿಯಲ್ಲಿ ಒಂದಾಗಿದ್ದೇವೆ. ಸಂಭ್ರಮದ ಕನಸು ಕಂಡು ಬಂದಿದ್ದೇನೆ ಎಲ್ಲವೂ ಭ್ರಮನಿರಸವಾಯ್ತು. ಅಮ್ಮಾ ಹೀಗಾಯ್ತು ಎಂದು ಅಮ್ಮನ ಮಡಿಲಲ್ಲಿ ಬೋರೋ ಎಂದು ಅಳುವ ಹಾಗಿಲ್ಲ. ನಾನೇ ಕಟ್ಟಿಕೊಂಡ ಬದುಕಲ್ವಾ... ಯಾರಲ್ಲೂ ಹೇಳುವಂತಿಲ್ಲ... ಈಗೀಗ ಇಷ್ಟೇ ಬದುಕು ಎಂದು ಅನಿಸಲಾರಂಭಿಸಿದೆ... ಆದರೆ ಹುಟ್ಟಾಸೆ ಇನ್ನೂ ನನ್ನನ್ನು ಜೀವಂತವಾಗಿಸಿದೆ.
ಹೌದು ಕಣೋ ನಾನು ನೀನು ಹೇಳಿದ ಹಾಗೆ ಭಾವುಕಗೂಸ್ಲು. ಯಾರಾದರೂ ಅತ್ತರೆ ನನ್ನ ಕಣ್ಣಲ್ಲಿ ನೀರು ಬರುತ್ತೆ ಜೊತೆ ಜೊತೆಗೆ ಗಂಡುಬೀರಿ ನಿನ್ನ ಜೊತೆ ವಾದಕ್ಕೆ ನಿಲ್ಲುವವಳು. ಆದರೂ ನನ್ನಲ್ಲಿ ಪ್ರೀತಿಯಿತ್ತು. ಮಾತಿತ್ತು, ಮಮತೆಯಿತ್ತು ನಿನ್ನಲ್ಲಿ... ? ಮರದಿಂದ ಕೊಯಿದ ಸಂಪಿಗೆ ಹಂಚುವ ಪ್ರೀತಿಯಲ್ಲಿ, ಸಚಿಜೆಯ ಹೊತ್ತಲ್ಲಿ ಮಲ್ಲಿಗೆ ಮೊಗ್ಗಲ್ಲಿ ನಿನ್ನ ಮುಖವಿತ್ತು, ನಿನಗೆ ನಾನು ಕೊಟ್ಟ ಬುತ್ತಿ ತಿನ್ನುವಾಗಲೂ ನನ್ನ ನೆನಪಾಗಲಿಕ್ಕಿಲ್ಲ... ನಿನಗೆ ನಿನ್ನ ಕೆಲಸ ಮಾತ್ರ ಮುಖ್ಯ ಅಲ್ವಾ.

ನೀನು ಯಾವತ್ತೂ ಬೈಯುತ್ತಿದ್ದೆ, ಸಾಹಿತ್ಯದ ವಿದ್ಯಾರ್ಥಿಗಳ ಇಷ್ಟು ಯಾವುದೋ ಕಾದಂಬರಿ, ಕವನಗಳಲ್ಲಿ ಕಳೆದುಹೋಗ್ತೀರಾ... ವಾಸ್ತವ ಯಾವತ್ತೂ ಮರೀಚಿಕೆಯಂತೆ ಅಂತಾ... ಚಿಕ್ಕಂದಿನಲ್ಲಿಯೂ ನನಗೆ ವಿಜ್ಞಾನ ಅಂದರೆ ಅಷ್ಟಕಷ್ಟೇ ಆದರೆ ಈಗ ಅಲರ್ಜಿನೇ... ನನಗೆ ಕಾದಂಬರಿ ಪುಟಗಳಲ್ಲಿ ಕಳೆದುಹೋಗಿ ನಿನ್ನನ್ನು ಬೇರೆ ಒಂದು ಕಥಾಲೋಕದೊಳಗೆ ಕರೆದುಕೊಂಡು ಹೋಗುವ ಹಂಬಲವಿತ್ತು. ಈಗ ಕಾದಂಬರಿಯನ್ನು ಓದುವಾಗ ದುಃಖ ಉಮ್ಮಳಿಸಿ ಬರುತ್ತದೆ. ಸಮಯ ಸರಿದದ್ದೇ ಗೊತ್ತಾಗುವುದಿಲ್ಲ, ನಕ್ಷತ್ರ ಎಣಿಸ್ತಾ ರಾತ್ರಿ ಕಳೆಯೋ ಬಯಕೆ ಈಗ್ಲೂ ಇದೆ.

ಎಷ್ಟೋ ದಿನ ನಿನ್ನೆದುರಿಗೆ ಕಣ್ಣೀರು ಸುರಿಸಿದ್ದೇನೆ ಯಾಕೆ ಅಂತ ಒಂದಿನಾದ್ರೂ ಕೇಳಿದ್ದೀಯಾ... ಈ ಮನೆಯಲ್ಲಿ ಯಾರೂ ಇಲ್ಲದೆ, ಭಾವನೆಗಳನ್ನು ಹೇಳಲಿಕ್ಕೂ ಆಗದೆ, ಹಾಗೆ ಅದುಮಿಡಲೂ ಆಗದೆ ಸಾಯುತ್ತಿದ್ದೇನೆ. ನಾನು ಮಾಡಿದ ದೊಡ್ಡ ತಪ್ಪೆಂದರೆ ಪ್ರೀತಿಸಿ ನಾನೇ ಮದುವೆಯಾದೆ ನಿನ್ನ. ಪ್ರೀತಿ ಅರ್ಥ ಆಗಲಿಲ್ಲ ನಿನಗೆ... ಕೆಮೆಸ್ಟ್ರಿ ಲ್ಯಾಬೋರೇಟರಿನಲ್ಲಿ ನೀನೂ ಕೆಮಿಕಲ್ ಆಗಿಹೋಗಿದ್ದೀಯಾ... ಅದೇನೋ ಕಂಪ್ಯೂಟರ್ ಮುಂದೆ ಕುಳಿತು ಪುಲ್ಸ್ಟಾಪ್. ಕೊಮ, ಸಮ ಚಿಹ್ನೆಗೂ ಅರ್ಥ ಹುಡುಕ್ತೀಯಾ ಆದರೆ ಅದರಲ್ಲಿ ಅಡಗಿರೋ ಪ್ರೀತಿಯ ಕಣ ನಿಂಗೊತ್ತಾ... ಯಂತ್ರವೇ ಆಗಿಬಿಟ್ಟಿದ್ದೀಯಾ ನಿನ್ನನ್ನು ಬದಲಾಯಿಸಬೇಕೆಂದರೆ ಯಂತ್ರಕ್ಕೆ ನಾನು ಭಾವನೆಯನ್ನು ಕಲಿಸಬೇಕು.
ನೀನು ಬದಲಾಗಬಹುದು ಎಂಬ ಒಂದೇ ಒಚಿದು ಆಸೆಯಿಂದ ಕಾಯುತ್ತಿದ್ದೇನೆ ಬಿಸಿಲ ಬೇಗೆ ತಾಳಲಾರದೆ ಮಳೆಹನಿಗಾಗಿ ಕಾಯೋ ಭುವಿಯಂತೆ ಪ್ರತೀ ಮಳೆಹನಿಯೂ ನನ್ನ ಬೊಗಸೆಯೊಳಗಿದೆ ಕಪ್ಪೆ ಚಿಪ್ಪಿನೊಳಗಿನ ಮುತ್ತಿನಂತೆ... ನಿನ್ನ ಕೈ ಕಂಪ್ಯೂಟರ್ ಒಳಗಡೆ ಏನನ್ನೋ ಹುಡುಕುತ್ತಿರಬಹುದು... ನನ್ನ ಪುಟ್ಟ ಬೊಗಸೆಯಲ್ಲಿ ಸಾವಿರ ತುತ್ತುಗಳಿವೆ... ಆ ತುತ್ತುಗಳು ತನ್ನವನಿಗಾಗಿ ಕಾಯುತ್ತಿವೆ... ನಿನಗಾಗಿಯೂ...

ಅಂತರ್ಮುಖಿ

1 comments:

siri said...

nice....... ashada malegu nimgu astondu nantu yake?

Post a Comment