ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಬೆಳಗಾವಿ : ವಾಯುಪಡೆ ಮುಖ್ಯಸ್ಥರಾದ ಏರ್ ಚೀಫ್ ಮಾರ್ಷಲ್ ಪಿ.ವಿ.ನಾಯಕ್ ಅವರು ಇಂದು ಬೆಳಗಾವಿ 405 ಏರ್ಫೋರ್ಸ್
ಸ್ಟೇಶನ್ ಗೆ ಭೇಟಿ ನೀಡಿ ಅಲ್ಲಿನ ಆಂತರಿಕ ಹಾಗೂ ಬಾಹ್ಯ ತರಬೇತಿ ಚಟುವಟಿಕೆಗಳ ಬಗ್ಗೆ ಪರಿಶೀಲನೆ ನಡೆಸಿದರು.ವಾಯುಪಡೆ ಮುಖ್ಯಸ್ಥರಿಗೆ ಇಂದು ಬೆಳಗಾವಿ ಏರ್ಫೋರ್ಸ್ ಸ್ಟೇಶನ್ನಿನ ವಾಯುಪಡೆ ಯೋಧರು ಗೌರವ ವಂದನೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಸ್ಟೇಶನ್ ಕಮಾಂಡರ್ ಗ್ರುಪ್ ಕ್ಯಾಪ್ಟನ್ ಜಿ.ವಿ.ಪಾಲ್ ಇವರು ಸಾಂಬ್ರಾ ವಾಯುಪಡೆ ಕೇಂದ್ರದಿಂದ ಕೈಗೊಳ್ಳಲಾಗುತ್ತಿರುವ ಚಟುವಟಿಕೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಎಲ್ಲ ಸ್ತರದ ಏರ್ ಮನ್ ಗಳಿಗೆ ನೀಡಲಾಗುತ್ತಿರುವ ತರಬೇತಿ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ವಾಯುಪಡೆ ಪತ್ರಿಯರ ಕಲ್ಯಾಣ ಸಂಸ್ಥೆಯ ಅಧ್ಯಕ್ಷರಾದ ಮಧುಬಾಲಾ ನಾಯಿಕ, ಸುಮಾ ಪಾಲ್ ಸೇರಿದಂತೆ ವಾಯುಪಡೆ ಕೇಂದ್ರದ ಇತರ ಅಧಿಕಾರಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶ್ರೀಮತಿ ಮಧುಬಾಲಾ ನಾಯಿಕ ಅವರು ಮಹಿಳಾ ಕಲ್ಯಾಣ ಚಟುವಟಿಕೆಗಳ ಕುರಿತು ವಿವಿಧ ಮಹಿಳೆಯರೊಂದಿಗೆ ಚರ್ಚಿಸಿದರು. ಅದರಂತೆ ಕಲ್ಯಾಣ ಸಂಸ್ಥೆಯ ಸಂಕೀರ್ಣಕ್ಕೆ ಭೆಟ್ಟಿ ನೀಡಿ ಅಲ್ಲಿ ನಡೆದಿರುವ ಚಟುವಟಿಕೆಗಳ ಬಗ್ಗೆ ಪರಿಶೀಲಿಸಿದರು.

0 comments:

Post a Comment