ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ -ರಾಷ್ಟ್ರ
ಮಂಗಳೂರು:ಕಾಮನ್ ವೆಲ್ತ್ ಕ್ರೀಡಾಕೂಟದ ಕ್ವೀನ್ಸ್ ಬ್ಯಾಟನ್ ರಿಲೇ ತಂಡ ಸೆಪ್ಟೆಂಬರ್ 5ರಂದು ಮಧ್ಯಾಹ್ನ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸಲಿದ್ದು,ರಿಲೇ ತಂಡವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ. ಕೃಷ್ಣ ಪಾಲೆಮಾರ್ ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ ಅವರು ಸ್ವಾಗತಿಸಲಿರುವರು.ಅಂತಾ ರಾಷ್ಟ್ರೀಯ ಕ್ರೀಡಾ ಪಟು ಗಳಾದ ಸಂಜೀವ ಪುತ್ತೂರು, ಪುಷ್ಪರಾಜ ಹೆಗಡೆ, ಸ್ಥಳೀಯ ಜನ ಪ್ರತಿನಿಧಿಗಳು,ಕ್ರೀಡಾ ಭಿಮಾನಿಗಳು ಸೇರಿದಂತೆ ಅನೇಕ ಗಣ್ಯರು ಜಿಲ್ಲೆಯ ಗಡಿ ಭಾಗದ ಗುಂಡ್ಯ, ನೆಲ್ಯಾಡಿಯಲ್ಲಿ ಕ್ವೀನ್ಸ್ ಬ್ಯಾಟನ್ ರಿಲೇ ತಂಡವನ್ನು ಪೂರ್ಣ ಕುಂಭ ದೊಂದಿಗೆ ಸಾಂಪ್ರಾದಾ ಯಿಕವಾಗಿ ಸ್ವಾಗತಿಸಲು ಜಿಲ್ಲಾಡಳಿತ ಸಜ್ಜಾಗಿದ್ದು,ಸಾರ್ವ ಜನಿಕರು ಈ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಕ್ರೀಡಾಭಿ ಮಾನವನ್ನು ಮೆರೆಯ ಬೇಕೆಂದು ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಮನವಿ ಮಾಡಿದ್ದಾರೆ.ನೆಲ್ಯಾಡಿಯಿಂದ ಮಂಗಳೂರು ನಗರಕ್ಕೆ ಆಗಮಿಸುವ ತಂಡವನ್ನು ನಗರದ ಕದ್ರಿ ಪಾರ್ಕಿನಲ್ಲಿ ಸಂಜೆ 5 ಗಂಟೆಗೆ ನಗರದ ಪ್ರಥಮ ಪ್ರಜೆ ಮೇಯರ್ ರಜನಿ ದುಗ್ಗಣ್ಣ ಅವರು ಬರ ಮಾಡಿ ಕೊಳ್ಳುವರು.ಈ ಸಂದರ್ಭದಲ್ಲಿ ಅಂತಾ ರಾಷ್ಟ್ರೀಯ ಕ್ರೀಡಾ ಪಟುಗಳಾದ ವಂದನಾ ರಾವ್, ವಂದನಾ ಶಾನುಬಾಗ್, ಶೋಭಾ ನಾರಾಯಣ ಸೇರಿದಂತೆ ಹಲವು ಗಣ್ಯರುಮತ್ತು ಕ್ರೀಡಾ ಭಿಮಾನಿಗಳು ಪಾಲ್ಗೊಳ್ಳುವರು.
ನಗರದಲ್ಲಿ ರಿಲೇ ತಂಡ ಕದ್ರಿ ಪಾರ್ಕ್ ನಿಂದ 5.30 ಕ್ಕೆ ಹೊರಟು ಸರ್ಕಿಟ್ ಹೌಸ್, ಬಾವುಟಗುಡ್ಡ, ಬಿಜೈ ಜಂಕ್ಷನ್, ಕೆ ಎಸ್ ಆರ್ ಟಿ ಸಿ ಬಸ್ ಸ್ಟ್ಯಾಂಡ್, ಮಂಗಳೂರು ಮಹಾ ನಗರಪಾಲಿಕೆ, ಬಳ್ಳಾಲ್ ಭಾಗ್ ವೃತ್ತ, ಬೆಸೆಂಟ್, ಪಿವಿಎಸ್ ಜಂಕ್ಷನ್, ಸೈಂಟ್ ಅಲೋಷಿಯಸ್ ಪ್ರಾಥಮಿಕ ಶಾಲೆ, ಕರಂಗಲ್ಪಾಡಿ, ಬಂಟ್ಸ್ ಹಾಸ್ಟೆಲ್, ಜ್ಯೋತಿ ಸರ್ಕಲ್, ಡಾನ್ ಬಾಸ್ಕೊ ಹಾಲ್, ಹಂಪನಕಟ್ಟಾ ಸಿಗ್ನಲ್, ಯುನಿವರ್ಸಿಟಿ ಕಾಲೇಜು ಮೂಲಕ ಪುರಭವನ ಪ್ರವೇಶಿಸಲಿದೆ. ನಗರದಲ್ಲಿ 6 ಕಿ.ಮೀ ಒಳಗೆ 20 ಕಡೆಗಳಲ್ಲಿ ಬೇಟನ್ ಹಸ್ತಾಂತರ ನಡೆಯಲಿದೆ. ಬೇಟನ್ ಹಿಡಿದು ಓಡುವವರನ್ನು ಈಗಾಗಲೇ ಗುರುತಿಸಲಾಗಿದ್ದು, ಅರ್ಜುನ, ಏಕಲವ್ಯ ಪ್ರಶಸ್ತಿ ವಿಜೇತರು, ಒಲಿಂಪಿಕ್ಸ್, ಕಾಮನ್ ವೆಲ್ತ್, ಏಷಿಯನ್ ಗೇಮ್ಸ್ ಮತ್ತು ಇತರ ಅಂತಾ ರಾಷ್ಟ್ರೀಯ,ರಾಷ್ಟ್ರೀಯ, ರಾಜ್ಯ ಮಟ್ಟದ ಕ್ರೀಡೆಗಳಲ್ಲಿ ಭಾಗಿಗಳಾ ದವರು ರಿಲೇಯಲ್ಲಿ ಪಾಲ್ಗೊಳ್ಳುವರು. ಈ ಸಂದರ್ಭದಲ್ಲಿ ಕ್ರೀಡಾ ಸ್ಫೂರ್ತಿಯನ್ನು ಸಾರ್ವಜನಿಕರು ತೋರ ಬೇಕಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾ ಭಿಮಾನಿಗಳು ಪಾಲ್ಗೊಂಡು ರಿಲೇಯನ್ನು ಯಶಸ್ವಿಯಾಗಿಸಬೇಕೆಂದು ಜಿಲ್ಲಾಧಿಕಾರಿಗಳು ಕೋರಿದ್ದಾರೆ.ಪುರ ಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲೆಯ ಕಲೆ ಮತ್ತು ಸಂಸ್ಕೃತಿಯನ್ನು ಎತ್ತಿ ಹಿಡಿಯುವಂತಹ ಕಾರ್ಯ ಕ್ರಮಗಳಾದ ಯಕ್ಷಗಾನ, ಶಾಸ್ತ್ರೀಯ ನೃತ್ಯ ರೂಪಕ, ತುಳುನಾಡ ಜಾನಪದ ಕುಣಿತಗಳ ಪ್ರದರ್ಶನವನ್ನು ಆಯೋಜಿಸ ಲಾಗಿದೆ.ಸೆ.6 ರಂದು ತಂಡ ಉಡುಪಿ ಮೂಲಕ ಕಾರವಾರಕ್ಕೆ ತೆರಳಲಿದೆ. ಪತ್ರಿಕಾ ಗೋಷ್ಠಿಯಲ್ಲಿ ನಗರ ಪೋಲಿಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್, ಪಾಲಿಕೆ ಕಮಿಷನರ್ ಡಾ. ಕೆ. ಎನ್. ವಿಜಯಪ್ರಕಾಶ್, ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಸಹಾಯಕ ಆಯುಕ್ತ ಪ್ರಭುಲಿಂಗ ಕವಳಿಕಟ್ಟಿ, ರೆವೆನ್ಯೂ ಆಫೀಸರ್ ಮೇಘನಾ, ಕ್ರೀಡೆ,ಯುವಜನ ಮತ್ತು ಸೇವಾ ಅಧಿಕಾರಿ ಪಾಂಡುರಂಗ ಉಪಸ್ಥಿತರಿದ್ದರು.
ಭಾರತದಲ್ಲಿ ನೂರು ದಿನ: ಕಾಮನ್ ವೆಲ್ತ್ ಕ್ರೀಡಾ ಜ್ಯೋತಿ ಕ್ವೀನ್ಸ್ ಬ್ಯಾಟನ್ ಇಂಗ್ಲೆಡ್ ರಾಜ ಧಾನಿ ಲಂಡನ್ ನ ಬಕಿಂಗ್ ಹ್ಯಾಮ್ ಪ್ಯಾಲೇಸ್ ನಿಂದ ಅಕ್ಟೋಬರ್ 29,2009 ರಂದು ಪಯಣ ಆರಂಭಿ ಸಿದ್ದು, ಭಾರತದ 28 ರಾಜ್ಯಗಳಲ್ಲಿ ಹಾಗೂ 7 ಕೇಂದ್ರಾ ಡಳಿತ ಪ್ರದೇಶಗಳಲ್ಲಿ ಹಾದು ಹೋಗಲಿದೆ. ಈ ಸಂದರ್ಭದಲ್ಲಿ 200 ಪ್ರಮುಖ ನಗರ ಹಾಗೂ ಸಾವಿರಾರು ಹಳ್ಳಿಗಳನ್ನು ಹಾದು ಹೋಗಲಿದ್ದು, ಜಲ, ವಾಯು ಹಾಗೂ ನೆಲ ಮಾರ್ಗಗಳಲ್ಲಿ ಸಂಚರಿಸಲಿದೆ. ದೇಶದಾದ್ಯಂತ ಸಂಚರಿಸುವ ಕ್ರೀಡಾಜ್ಯೋತಿ 100 ದಿನಗಳ ಓಟವನ್ನು ದೆಹಲಿಯ ಜವಹರ ಲಾಲ್ ನೆಹರು ಸ್ಟೇಡಿಯಂ ಪ್ರವೇಶಿಸುವ ಮುಖಾಂತರ ಕೊನೆ ಗೊಳ್ಳಲಿದೆ. ದೆಹಲಿಯಲ್ಲಿ ಅಕ್ಟೋಬರ್ 3,2010 ರಂದು ರಾಣಿ ಎಲಿಜೆಬೆತ್ -11 ಬ್ಯಾಟನ್ ನೊಳಗಿರುವ ಸಂದೇಶವನ್ನು ಓದುವ ಮುಖಾಂತರ 19ನೇ ಕಾಮನ್ ವೆಲ್ತ್ ಕ್ರೀಡಾಕೂಟ ವಿದ್ಯುಕ್ತವಾಗಿ ಉದ್ಘಾಟನೆ ಗೊಳ್ಳಲಿದೆ. ಬ್ಯಾಟನ್ ನ ಒಳಪದರದಲ್ಲಿ ಅಮೂಲ್ಯವಾದ ಬಂಗಾರದ ಡಬ್ಬವಿದ್ದು, ಅದರೊಳಗೆ ಬಂಗಾರದ ಎಲೆಯಲ್ಲಿ ರಾಣಿಯ ಲಿಖಿತ ಸಂದೇಶವಿದೆ.

0 comments:

Post a Comment