ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:41 PM

ಹಳ್ಳಿ ಜನರ ಕತೆ . .

Posted by ekanasu

ವಿಶೇಷ ವರದಿ

ಅದೆಲ್ಲೋ ಇರೋ ದ್ವೀಪದ ನಾಡನ್ನು ಕೇಳಿದ್ದೇವೆ.ಆದ್ರೆ ನಮ್ಮಲ್ಲೇ ಇರೋ ದ್ವೀಪವೊಂದನ್ನು ನೀವು ನೋಡಿದ್ದೀರಾ.ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲೊಂದು ಅಂತಹ ದ್ವೀಪವಿದೆ.ಆದ್ರೆ ಇದು ವ್ಯವಸ್ಥೆಯ ದೋಷದಿಂದಾಗಿ ನಿರ್ಮಾಣವಾಗಿರೋ ಹಳ್ಳಿಯೊಂದರ ಕತೆ.ಮೂಲಭೂತ ವ್ಯವಸ್ಥೆಗಳೇ ಇಲ್ಲದಿರೋ ಒಂದು ಹಳ್ಳಿಯ ಜನರ ಬವಣೆಯಿದು.ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೊಲ್ಲಮೊಗ್ರದ ಬೆಂಡೋಡಿ ಪ್ರದೇಶ.ಇಲ್ಲಿ ಸುಮಾರು 100 ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತವೆ.ಕೊರಗ ಕಾಲನಿ ಸೇರಿದಂತೆ ಐದಾರು ಕಾಲನಿಗಳು ಇಲ್ಲಿವೆ. ಮಾತ್ರವಲ್ಲ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯೂ ಇಲ್ಲಿದೆ.
ಆದ್ರೆ ಈ ಊರಿನ ಗ್ರಾಮದ ಪಟ್ಟಣವಾದ ಹರಿಹರ ಪಲ್ಲತ್ತಡ್ಕ , ಕೊಲ್ಲಮೊಗ್ರವನ್ನು ಇಲ್ಲಿನ ಜನ ಮಳೆಗಾಲದ ಆರು ತಿಂಗಳುಗಳ ಕಾಲ ಸಂಪರ್ಕಿಸೋ ಹಾಗಿಲ್ಲ.ಕಾರಣ ಇಲ್ಲಿ ಹರಿಯೂ ಬೆಂಡೋಡಿ ನದಿ.ಈ ನದಿ ಮಳೆಗಾಲದ ಪೂರ್ತಿ ಉಕ್ಕಿ ಹರಿಯುವ ಕಾರಣ ನದಿ ದಾಟಲಾಗದೆ ಹಳ್ಳಿಯಿಂದ ಆ ಕಡೆ ಹೋಗೋ ಹಾಗಿಲ್ಲ.ಇದರಿಂದಾಗಿ ಇಲ್ಲಿಗೆ ಯಾವುದೇ ಸಂಪರ್ಕವಿಲ್ಲ.ಒಂದು ವೇಳೆ ಊರು ಸೇರಬೇಕಾದ್ರೆ 10 ಕಿಲೋ ಮೀಟರ್ ಕಾಲ್ನಡಿಗೆಯೇ ಅನಿವಾರ್ಯ.ಇನ್ನು ಏನಾದರೂ ಅನಾರೋಗ್ಯ ಪೀಡಿತರಾದರೆ ಅವರ ಪಾಡು ದೇವರೇ ಬಲ್ಲ.ಈ ನಡುವೆ ಇಲ್ಲಿರೋ ಶಾಲೆಯಲ್ಲೂ ಈ ನದಿಯ ಕಾರಣದಿಂದಾಗಿ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ.ಇನ್ನು ರಸ್ತೆಯ ಕತೆಯಂತೂ ಹೇಳತೀರದಾಗಿದೆ.ಬಡವರೇ ಇರೋ ಈ ಹಳ್ಳಿಯಲ್ಲಿ ಈಗ ಸಂಕಷ್ಠಗಳೇ ತುಂಬಿಕೊಂಡಿದೆ.

ಕೊಲ್ಲಮೊಗ್ರ ಗ್ರಾಮದ ಬೆಂಡೋಡಿಯಲ್ಲಿ ಹರಿಯೋ ನದಿಗೆ ಸೇತುವೆ ನಿರ್ಮಾಣವಾಗಬೇಕು ಎಂದು ಕಳೆದ 20 ವರ್ಷಗಳಿಂದ ಇಲ್ಲಿನ ಜನ ಮನವಿ ನೀಡುತ್ತಲೇ ಬಂದಿದ್ದಾರೆ.ಆದ್ರೆ ಯಾವೊಬ್ಬ ಜನಪ್ರತಿನಿಧಿಯ ಕಿವಿಗೂ ಸರಕಾರದ ಕಣ್ಣಿಗೂ ಇದು ಬಿದ್ದಿಲ್ಲ.ಹಾಗಾಗಿ ಇಲ್ಲಿನ ಜನ ಮಳೆಗಾಲದಲ್ಲಿ ಅನಿವಾರ್ಯವಾದರೆ ನದಿ ದಾಟಿಯೇ ಹೋಗಬೇಕಾಗುತ್ತದೆ.ಹೀಗಾಗಿ ಈ ಮೊದಲು ಒಂದೆರಡು ಜೀವ ಹಾನಿಯೂ ಆದದ್ದಿದೆ.ಆದರೂ ಕೂಡಾ ಇದುವರೆಗೆ ಯಾವೊಬ್ಬನೂ ಇತ್ತ ಕಣ್ಣೆತ್ತಿಯೂ ನೋಡಿಲ್ಲ ಅಂತಾರೆ ಊರ ಜನ.
ಗ್ರಾಮೀಣ ಪ್ರದೇಶವೇ ದೇಶದ ಆಧಾರ , ಹಳ್ಳಿಗಳ ಅಭಿವೃದ್ದಿಯೇ ದೇಶದ ಉದ್ದಾರ ಎಂದು ಭಾಷಣ ಬಿಡೋ ಜನ ಸ್ವಲ್ಪ ಇಂತಹ ಹಳ್ಳಿಗಳತ್ತ ಗಮನಹರಿಸಿದರೆ ಒಳ್ಳೇದು.ಭಾಷಣಕ್ಕೇನಾದರೂ ಬೆಲೆನೂ ಬಂದೀತು.ಇಲ್ಲಾಂದ್ರೆ ಈ ಹಳ್ಳಿ ಜನರ ಪಾಡು ಇನ್ನು ನೂರು ವರ್ಷವಾದರೂ ಸುಧಾರಿಸೋದಾದ್ರೂ ಹೇಗೆ?.ಕೇವಲ ಭಾಷಣದಲ್ಲೇ ಕಾಲ ಹೋದೀತು.

ಮಹೇಶ್ ಪುಚ್ಚಪ್ಪಾಡಿ

0 comments:

Post a Comment