ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಆಟ - ಅವಲೋಕನ
ನವದೆಹಲಿ:ಕೊನೆಗೂ ಕಾಮನ್ ವೆಲ್ತ್ ಕ್ರೀಡೆಗೆ ವಿದ್ಯುಕ್ತ ಚಾಲನೆ ದೊರೆತಿದೆ.ಎಪ್ಪತ್ತು ಸಾವಿರ ಕೋಟಿ ರುಪಾಯಿ ವೆಚ್ಚದಲ್ಲಿ ನಡೆಯುತ್ತಿರುವ ಹತ್ತೊಂಬತ್ತನೇ ಕಾಮನ್ ವೆಲ್ತ್ ಕ್ರೀಡಾಕೂಟ ಇಂದಿನಿಂದ ಆರಂಭಕಂಡಿದೆ. ಕ್ರೀಡಾಕೂಟ ಜವಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಉದ್ಘಾಟನೆಗೊಂಡಿದ್ದು ಕಿಕ್ಕಿರಿದ ಜನಸಂದಣಿ ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾದರು. ಪ್ರತಿಭಾಪಾಟೀಲ್, ಸೋನಿಯಾಗಾಂಧಿ ಸೇರಿದಂತೆ ಅನೇಕ ಗಣ್ಯರು ಈ ಸಂದರ್ಭ ಹಾಜರಿದ್ದರು. 71 ದೇಶಗಳನ್ನು ಸುತ್ತಿ ಬಂದ ಕ್ವೀನ್ ಬೇಟನ್ ಇಂದು ಪ್ರಿನ್ಸ್ ಚಾರ್ಲ್ಸ್ ಗೆ ಹಸ್ತಾಂತರಗೊಳಿಸುವ ಕಾರ್ಯ ಈ ಸಂದರ್ಭದಲ್ಲಿ ನಡೆಯಿತು. 71ದೇಶಗಳ 7ಸಾವಿರ ಕ್ರೀಡಾಳುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದಾರೆ. ಕರ್ನಾಟಕದ ಡೊಳ್ಳುಕುಣಿತ ಕಾರ್ಯಕ್ರಮದ ಮೆರುಗು ಹೆಚ್ಚಿಸಿತು. ಒಟ್ಟಾರೆಯಾಗಿ ಅನೇಕ ಊಹಾಪೋಹಗಳಿಗೆ ಕಾರಣವಾಗಿದ್ದ ಕಾಮನ್ ವೆಲ್ತ್ ಕ್ರೀಡಾಕೂಟ ಕೊನೆಗೂ ಆರಂಭಗೊಂಡಿದೆ.

0 comments:

Post a Comment