ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಮಂಗಳೂರು: ಭಾಮಿನಿ ಮಾಸಪತ್ರಿಕೆ ಇಂದು ಲೋಕಾರ್ಪಣಗೊಳ್ಳಲಿದೆ. ಆಳ್ವಾಸ್ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮಂಗಳೂರು ಕೊಡಿಯಾಲ್ ಬೈಲ್ ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ಸಂಜೆ 5 ಗಂಟೆಗೆ ಪತ್ರಿಕೆ ಬಿಡುಗಡೆಗೊಳಿಸುವರು. ಸಮಾರಂಭವನ್ನು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಸುಮಂತ್ ಎಸ್ ಉದ್ಘಾಟಿಸುವರು. ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಲಿದ್ದಾರೆ. ಎಂ.ಎಸ್.ಇ.ಝೆಡ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಎ.ಜಿ.ಪೈ, ದ.ಕ.ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮಂಜೇಶ್ವರ ಶಾಸಕ ಸಿ.ಎಚ್.ಕುಂಞಂಬು, ಯಕ್ಷಗಾನದ ಹಿರಿಯ ಕಲಾವಿದ ಬಲಿಪ ನಾರಾಯಣ ಭಾಗವತರು ಉಪಸ್ಥಿತರಿರುವರು. ಸಂಜೆ 3ರಿಂದ ಯಕ್ಷಗಾನ ತಾಳಮದ್ದಲೆ ನಡೆಯಲಿದೆ.
ಮಂಗಳೂರಿನ ಉತ್ಸಾಹಿ ಪತ್ರಕರ್ತ ಮಿತ್ರರಾದ ಶೇಣಿ ಬಾಲಮುರಳೀ ಕೃಷ್ಣ ಹಾಗೂ ಕೃಷ್ಣ ಭಟ್ ಕೈಪಂಗಳ ಈ ಮಾಸಿಕದ ರೂವಾರಿಗಳು. ಕನ್ನಡಕ್ಕೊಂದು ವಿಭಿನ್ನ ಮಾಸಪತ್ರಿಕೆ ನೀಡುವ ಹಂಬಲದಲ್ಲಿ ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಕನ್ನಡಿಗರು, ಸಾಹಿತ್ಯಾಸಕ್ತರು, ಓದುಗ ಬಳಗ ಭಾಮಿನಿಯನ್ನು ಮನೆ ಮಗಳಾಗಿ ತುಂಬಿಕೊಳ್ಳಬೇಕಾಗಿದೆ.

0 comments:

Post a Comment