ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಭಾಮಿನಿ ಕನ್ನಡ ಮಾಸ ಪತ್ರಿಕೆ ಬಿಡುಗಡೆಗೊಳಿಸಿದ ಡಾ.ಎಂ.ಮೋಹನ ಆಳ್ವ.
ಮಂಗಳೂರು:" ಭಾಮಿನಿ ಚೆಂದದ ಮಾಸಿಕ. ಇದು ಕನ್ನಡಿಗರ ಮನೆ ಮನ ಬೆಳಗಬೇಕು. ಇದಕ್ಕೆ ಸಾಹಿತ್ಯಾಸಕ್ತರ ಹಾಗೂ ಕನ್ನಡಾಭಿಮಾನಿ ಓದುಗರ ಪೂರ್ಣ ಬೆಂಬಲ ದೊರಕಬೇಕು"ಇದು ಆಳ್ವಾಸ್ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದ ಮಾತುಗಳು. ಮಂಗಳೂರಿನ ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ಭಾಮಿನಿ ಪ್ರಕಾಶನ ಹೊರತಂದ "ಭಾಮಿನಿ" ಮಾಸಿಕ ಬಿಡುಗಡೆಗೊಳಿಸಿ ಮಾತನಾಡಿದರು. ಮನೆಮಂದಿಯೆಲ್ಲ ಮೆಚ್ಚುವ ಮಾಸ ಪತ್ರಿಕೆಯಾಗಿ ಭಾಮಿನಿ ನಿರಂತರ ಹೊರಬರುತ್ತಿರಲಿ ಎಂದು ಹಾರೈಸಿದರು.
ಕಾರ್ಯಕ್ರಮವನ್ನು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಸುಮಂತ್ ಎಸ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ವಹಿಸಿದ್ದರು. ಎಂ.ಎಸ್.ಇ.ಝೆಡ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಎ.ಜಿ.ಪೈ, ಮಂಜೇಶ್ವರ ಶಾಸಕ ಸಿ.ಎಚ್.ಕುಂಞಂಬು, ಯಕ್ಷಗಾನದ ಹಿರಿಯ ಕಲಾವಿದರಾದ ಬಲಿಪ ನಾರಾಯಣ ಭಾಗವತರು ಉಪಸ್ಥಿತರಿದ್ದರು.
ಪತ್ರಿಕೆಯ ಸಂಪಾದಕ ಶೇಣಿ ಬಾಲಮುರಳೀ ಕೃಷ್ಣ ಸ್ವಾಗತಿಸಿದರು. ವಿದ್ಯಾ ಕಾರ್ಯಕ್ರಮ ನಿರ್ವಹಿಸಿದರು. ಕೃಷ್ಣ ಭಟ್ ವಂದಿಸಿದರು.


ಚಿತ್ರಗಳು: ಸತೀಶ್ ಇರಾ.

0 comments:

Post a Comment